ಗರ್ಭಿಣಿ, ಬಾಣಂತಿಯರಿಗೆ ಲಸಿಕೆ ಅಭಿಯಾನ ವಿಸ್ತರಣೆ

Date:

ನಗರದಲ್ಲಿ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಕೊರೊನಾ ಲಸಿಕೆ ಅಭಿಯಾನವನ್ನು ವಿಸ್ತರಿಸಲಾಗಿದೆ. ಗರ್ಭಿಣಿ ಹಾಗೂ ಹಾಲುಣಿಸುವ ಮಹಿಳೆಯರಿಗೆ ನಗರದ 20 ಹೆರಿಗೆ ಆಸ್ಪತ್ರೆಗಳಲ್ಲಿಯೇ ಪಾಲಿಕೆ ವತಿಯಿಂದ ವಾರದಲ್ಲಿ ಮೂರು ದಿನಗಳ ಕಾಲ (ಸೋಮವಾರ, ಬುಧವಾರ ಮತ್ತು ಶುಕ್ರವಾರ) ಲಸಿಕೆ ನೀಡಲು ಚಿಂತನೆ ನಡೆಸಲಾಗಿದೆ.

ಜುಲೈ 27 ರಿಂದ ಅಭಿಯಾನ ಆರಂಭವಾಗಿದ್ದು, ಅಂದಿನಿಂದ 3,701 ಗರ್ಭಿಣಿಯರು ಹಾಗೂ 830 ಮಂದಿ ಬಾಣಂತಿ ಮಹಿಳೆಯರು ನಗರದಲ್ಲಿ ಒಂದು ಡೋಸ್ ಲಸಿಕೆ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ.

ಮಹಿಳೆಯರಿಗೆ ಲಸಿಕೆ ನೀಡುವುದಕ್ಕೂ ಮುನ್ನ ಅವರೊಂದಿಗೆ ಸಮಾಲೋಜನೆ ಹಾಗೂ ತಪಾಸಣೆ ನಡೆಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಲಸಿಕೆ ಅಭಿಯಾನ ಸಾಕಷ್ಟು ಸಮಯವನ್ನು ತೆಗೆದುಕೊಳ್ಲುತ್ತಿದೆ. ಗರ್ಭಿಣಿ ಮಹಿಳೆಯರನ್ನು ಹೆಚ್ಚು ಅಪಾಯಕ್ಕೆ ಸಿಲುಕಿರುವವರೆಂದು ಪರಿಶೀಲಿಸಲಾಗುತ್ತಿದ್ದು, ಹೀಗಾಗಿ ಪರಿಶೀಲನೆ ನಡೆಸಿದ ಬಳಿಕವೇ ಲಸಿಕೆ ನೀಡಲಾಗುತ್ತಿದೆ.

ಗರ್ಭಣಿಯರು ಹಾಗೂ ಹಾಲುಣಿಸುವ ತಾಯಿಯಂದಿರಲ್ಲಿ ರಕ್ತದೊತ್ತಡ, ಮಧುಮೇಹ ಸೇರಿದಂತೆ ಇತರೆ ರೋಗಗಳ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಒಂದು ವೇಳೆ ಅವರಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿದ್ದೇ ಆದರೆ, ಲಸಿಕೆಯನ್ನು ತಡವಾಗಿ ನೀಡಲಾಗುತ್ತಿದೆ.

ಸಮಾಲೋಚನೆ ನಡೆಸುವ ಸಂದರ್ಭದಲ್ಲಿ ಲಸಿಕಾ ಅಭಿಯಾನ ಬಳಿಕ ಎದುರಾಗುವ ಪರಿಣಾಮಗಳ ಕುರಿತು ಮಾಹಿತಿ, ಸಲಹೆಗಳನ್ನು ನೀಡಲಾಗುತ್ತದೆ.

12 ಸಾರ್ವಜನಿಕ ಆರೋಗ್ಯ ಕೇಂದ್ರಗಳು, 6 ರೆಫರಲ್ ಆಸ್ಪತ್ರೆಗಳು, 3 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು (ಯುಪಿಎಚ್‌ಸಿ) ), ಒಂದು ಸಮುದಾಯ ಆರೋಗ್ಯ ಕೇಂದ್ರ, ವಾಣಿ ವಿಲಾಸ ಆಸ್ಪತ್ರೆ ಮತ್ತು ಗೋಶಾ ಆಸ್ಪತ್ರೆಗಳಲ್ಲಿ ಮಹಿಳೆಯರಿಗೆ ಕೋವಾಕ್ಸಿನ್ ಅಥವಾ ಕೋವಿಶೀಲ್ಡ್‌ ಲಸಿಕೆ ನೀಡಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

 

ಅಭಿಯಾನ ಆರಂಭವಾದ ಮೊದಲ ವಾರದಲ್ಲಿ ಪ್ರತಿಕ್ರಿಯೆ ಅತ್ಯಂತ ಕಡಿಮೆ ಇತ್ತು. ಇದೀಗ ನಿಧಾನಗತಿಯಲ್ಲಿ ಏರಿಕೆಯಾಗುತ್ತಿದೆ. ಲಸಿಕೆ ನೀಡಲೂ ಕೂಡ ಕೆಲವು ನಿಯಮಗಳನ್ನು ಅನುಸರಿಸಲಾಗುತ್ತಿದೆ. ಅರ್ಹ ಫಲಾನುಭವಿಗಳಿಗಷ್ಟೇ ಲಸಿಕೆ ನೀಡಲಾಗುತ್ತಿದೆ.

ಕೌಂಟರ್ ತೆರೆದು ಮಾಡಿ ಮಹಿಳೆಯರು ಕಾದು ನಿಲ್ಲುವಂತೆ ಮಾಡುತ್ತಿಲ್ಲ. ಫಲಾನುಭವಿಗಳಿರುವ ಸ್ಥಳಕ್ಕೆ ತೆರಳಿ, ಅವರನ್ನು ಸುರಕ್ಷಿತವಾಗಿ ಆಸ್ಪತ್ರೆಗಳಿಗೆ ಕರೆ ತಂದು ಲಸಿಕೆ ನೀಡುವ ಕೆಲಸ ಮಾಡುತ್ತಿದ್ದೇವೆ. ಹಿಂಜರಿಯುತ್ತಿದ್ದ ಬೆಳವಣಿಗೆಗಳು ಕಡಿಮೆಯಾಗಿವೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಿ.ರಣದೀಪ್ ಅವರು ಹೇಳಿದ್ದಾರೆ.

Share post:

Subscribe

spot_imgspot_img

Popular

More like this
Related

ಹೊರಟ್ಟಿಯವರ ಸೇವೆ ಸದಾಕಾಲ ಮುಂದುವರೆಯಲಿ: ಬಸವರಾಜ ಬೊಮ್ಮಾಯಿ

ಹೊರಟ್ಟಿಯವರ ಸೇವೆ ಸದಾಕಾಲ ಮುಂದುವರೆಯಲಿ: ಬಸವರಾಜ ಬೊಮ್ಮಾಯಿ ಹುಬ್ಬಳ್ಳಿ: ಹ್ಯಾಂಡಸಮ್ ಟೀಚರ್ ಅಂಡ್...

ರಾಜ್ಯದಲ್ಲಿ ಮೈಕೊರೆಯುವ ಚಳಿ ಹೆಚ್ಚಳ: 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ರಾಜ್ಯದಲ್ಲಿ ಮೈಕೊರೆಯುವ ಚಳಿ ಹೆಚ್ಚಳ: 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಬೆಂಗಳೂರು: ಬೆಂಗಳೂರು...

ಸಚಿವರಿಗೆ ವಿಪಕ್ಷ ನಾಯಕರ ಮಾತನ್ನು ಆಲಿಸಿ, ಸಮಸ್ಯೆಗೆ ಸ್ಪಂದಿಸುವ ವ್ಯವಧಾನ ಇಲ್ಲ: ವಿಜಯೇಂದ್ರ

ಸಚಿವರಿಗೆ ವಿಪಕ್ಷ ನಾಯಕರ ಮಾತನ್ನು ಆಲಿಸಿ, ಸಮಸ್ಯೆಗೆ ಸ್ಪಂದಿಸುವ ವ್ಯವಧಾನ ಇಲ್ಲ:...

Gold Price Today: ಚಿನ್ನದ ದರದಲ್ಲಿ ಭಾರಿ ಕುಸಿತ; ಬೆಂಗಳೂರಿನಲ್ಲಿ ಇಂದು ಎಷ್ಟಿದೆ ದರ?

Gold Price Today: ಚಿನ್ನದ ದರದಲ್ಲಿ ಭಾರಿ ಕುಸಿತ; ಬೆಂಗಳೂರಿನಲ್ಲಿ ಇಂದು...