ಗಾಂಜಾ ಸೇವನೆಯಿಂದ ಗುಪ್ತಾಂಗಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ..?

Date:

ಗಾಂಜಾ ಸೇವನೆ ಒಳ್ಳೆಯದಲ್ಲ ಎಂಬುದು ಬಳಸುವವರಿಗೂ ಗೊತ್ತು. ಗಾಂಜಾ ಸೇವಿಸಿದರೆ ನಿದ್ದೆ ಕೆಡಿಸುತ್ತದೆ, ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಕಿತ್ತುಕೊಳ್ಳುತ್ತದೆ. ಮತ್ತಷ್ಟು ಖಿನ್ನತೆ, ಆತಂಕ ತರುತ್ತದೆ. ದೈಹಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದರೆ ಗಾಂಜಾ ಸೇವನೆ ಲೈಂಗಿಕ ಆರೋಗ್ಯವನ್ನೂ ಕೆಡಿಸುತ್ತದೆ ಎಂಬುದು ಹೊಸ ವಿಚಾರ.
ಹೌದು, ಗಾಂಜಾ ಬಳಸುವ ಮಹಿಳೆಯರು ಲೈಂಗಿಕ ಸುಖದಿಂದ ವಂಚಿತರಾಗುವ ಸಂಭವಗಳು ಹೆಚ್ಚು ಎಂಬುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಇಂಥ ಮಹಿಳೆಯರ ಗುಪ್ತಾಂಗ ಒಣಗುವುದರಿಂದ ಲೂಬ್ರಿಕೇಶನ್ ಸಾಧ್ಯವಿರುವುದಿಲ್ಲ. ನಿಜವಾಗಿಯೂ ಇದು ಬಹು ದೊಡ್ಡ ಸಮಸ್ಯೆಯಾದರೂ, ಈ ಬಗ್ಗೆ ಬೆಳಕು ಚೆಲ್ಲುವ ಸಂಶೋಧನೆಗಳು ವಿರಳವಾಗಿವೆ ಎಂಬುದೇ ಆಶ್ಚರ್ಯ ಎನ್ನುತ್ತಾರೆ ವೈದ್ಯರು.
ಈ ಕಾಟನ್ ವೆಜೈನಾ (ಗುಪ್ತಾಂಗ ಒಣಗುವಿಕೆ) ಸಮಸ್ಯೆಯು ಡ್ರಗ್ಸ್ ಸೇವನೆಯ ಅಡ್ಡ ಪರಿಣಾಮವಾಗಿದ್ದು, ಗುಪ್ತಾಂಗದ ಮ್ಯೂಕಸ್ ಮೆಂಬ್ರೇನ್ಗಳನ್ನು ಇದು ಒಣಗಿಸುತ್ತದೆ. ಅಲ್ಲದೆ ಈ ಸಂದರ್ಭದಲ್ಲಿ ಬರ್ತ್ ಕಂಟ್ರೋಲ್ ಮಾತ್ರೆಗಳನ್ನು ತೆಗೆದುಕೊಂಡರೆ ಸಮಸ್ಯೆ ಉಲ್ಬಣಗೊಳ್ಳುತ್ತದೆ ಎನ್ನುತ್ತಾರೆ ಅವರು.ಗಾಂಜಾ ಸೇವನೆಯು ನಮ್ಮ ಮನಸ್ಸನ್ನು ಎಲ್ಲಿಯೂ ನಿಲ್ಲಲು ಬಿಡದೆ ತೇಲಾಡಿಸುತ್ತದೆ. ಮನಸ್ಸು ಹಾಗೂ ದೇಹವನ್ನು ಬೇರ್ಪಡಿಸುತ್ತದೆ. ಇಂಥ ಏಕಾಗ್ರತೆ ಇಲ್ಲದ ಮನಸ್ಸಿನಿಂದ ಉತ್ತಮ ಸೆಕ್ಸ್ ಖಂಡಿತಾ ಸಾಧ್ಯವಿರುವುದಿಲ್ಲ.


ಇಂಥ ‘ಮಾದಕ ಮಹಿಳೆಯರು’ ಲೂಬ್ರಿಕೆಂಟ್ ಆಗಿ ಕೊಬ್ಬರಿ ಎಣ್ಣೆ ಬಳಸಬಹುದು ಎನ್ನುವುದು ಜೂಲಿ ನೀಡುವ ಪರಿಹಾರ. ಆಯುರ್ವೇದದ ಪ್ರಕಾರ, ಯಾವುದನ್ನು ಬಾಯಿಯ ಮೂಲಕ ಸೇವಿಸಬಹುದೋ, ಅವನ್ನು ಮಾತ್ರ ಚರ್ಮದ ಮೇಲೆ ಹಾಗೂ ದೇಹದ ಇತರೆಡೆ ಬಳಸಬಹುದು. ಹೀಗಾಗಿ, ಕೊಬ್ಬರಿ ಎಣ್ಣೆ ಅಡ್ಡ ಪರಿಣಾಮ ಬೀರದ ಉತ್ತಮ ಲೂಬ್ರಿಕೆಂಟ್ ಎನ್ನಲಾಗುತ್ತದೆ.

Share post:

Subscribe

spot_imgspot_img

Popular

More like this
Related

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ: HDK

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ:...

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ ಬಿಜೆಪಿಯವರಿಗೆ...

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ...

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು ಮೈಸೂರು:ಸ್ನಾನದ ವೇಳೆ...