ಗುಡಾಣದಂತಿರುವ ಹೊಟ್ಟೆ ಕರಗಿಸಲು ಸುಲಭ ವಿಧಾನ: ರಾತ್ರಿ ಮಲಗೋ ಮುನ್ನ ಇದನ್ನು ಕುಡಿಯಿರಿ!

Date:

ಗುಡಾಣದಂತಿರುವ ಹೊಟ್ಟೆ ಕರಗಿಸಲು ಸುಲಭ ವಿಧಾನ: ರಾತ್ರಿ ಮಲಗೋ ಮುನ್ನ ಇದನ್ನು ಕುಡಿಯಿರಿ!

ಹೊಟ್ಟೆಯ ಕೊಬ್ಬು ಆರೋಗ್ಯಕ್ಕೆ ತುಂಬಾ ಹಾನಿಕರ. ಇದರಿಂದಾಗಿ ಮಧುಮೇಹದಿಂದ ಹಿಡಿದುಹೃದಯದ ಸಮಸ್ಯೆ, ನಿದ್ರಾಹೀನತೆ ಮತ್ತು ಕ್ಯಾನ್ಸರ್ ನಂತಹ ಹಲವಾರು ಆರೋಗ್ಯ ಸಮಸ್ಯೆಗಳುಕಾಣಿಸಿಕೊಳ್ಳಬಹುದು. ಹೊಟ್ಟೆಯ ಬೊಜ್ಜು ವ್ಯಕ್ತಿಯೊಬ್ಬನ ಆತ್ಮವಿಶ್ವಾಸ ಕುಗ್ಗಿಸುವುದುಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ಹೊಟ್ಟೆ ತುಂಬಾ ಬೊಜ್ಜು ತುಂಬಿಕೊಂಡಿದ್ದರೆ ಅದನ್ನು ಕರಗಿಸುವುದು ಹೇಗೆ ಎನ್ನುವ ಚಿಂತೆ ಕಾಡುವುದು ಸಹಜ. ಇಂದಿನ ಜೀವನ ಶೈಲಿ ಮತ್ತು ಆಹಾರ ಕ್ರಮದಿಂದಾಗಿ ಹೆಚ್ಚಿನವರಲ್ಲಿ ಬೊಜ್ಜು ಕಾಣಿಸಿ ಕೊಳ್ಳುವುದು. ಹೊಟ್ಟೆಯಲ್ಲಿ ತುಂಬಿರುವ ಬೊಜ್ಜು ಕಡಿಮೆ ಮಾಡುವುದು ಕಠಿಣ ಕೆಲಸ. ಹೊಟ್ಟೆಯ ಕೊಬ್ಬು ಆರೋಗ್ಯಕ್ಕೆ ತುಂಬಾ ಹಾನಿಕರ.

ಹೀಗಾಗಿ ರಾತ್ರಿಯ ಮಲಗುವ ಮೊದಲು ಈ ಪಾನೀಯಗಳನ್ನು ಕುಡಿಯುವುದರಿಂದ ಹೆಚ್ಚುವರಿ ಕ್ಯಾಲೊರಿಗಳನ್ನು ಸುಡುತ್ತದೆ. ರಾತ್ರಿ ಮಲಗುವ ಎರಡು ಗಂಟೆಗಳ ಮೊದಲು ಊಟ ಮಾಡಬೇಕು. ನಂತರ ಮಲಗುವ ಅರ್ಧ ಗಂಟೆ ಮುನ್ನ ಈ ಪಾನೀಯ ಸೇವಿಸಬೇಕು. ಇದರಿಂದ ಹೃದ್ರೋಗ ಮತ್ತು ಮಧುಮೇಹದ ಅಪಾಯ ಕಡಿಮೆಯಾಗುತ್ತದೆ ಜೊತೆಗೆ ನಿಮ್ಮ ತೂಕ ಕೂಡ ವೇಗವಾಗಿ ಇಳಿಯುತ್ತದೆ.

ಮೆಂತ್ಯ ನೀರು

ಮೆಂತ್ಯ ಕಾಳುಗಳನ್ನು ನೀರಿನಲ್ಲಿ ನೆನೆಸಿ. ಈ ನೀರಿಗೆ ಜೇನುತುಪ್ಪ ಬೆರೆಸಿ ಮಲಗುವ ಮುನ್ನ ಕುಡಿಯಿರಿ. ಇದು ತೂಕ ನಷ್ಟಕ್ಕೆ ಸಹಕಾರಿಯಾಗಿದೆ. ಮೆಂತ್ಯ ಕಾಳಿನಲ್ಲಿ ನಾರಿನಂಶ ಹೆಚ್ಚಿದ್ದು, ಹಸಿವನ್ನು ತಡೆಯಲು ಸಹಾಯ ಮಾಡುತ್ತದೆ. ಹೊಟ್ಟೆಯ ಬೊಜ್ಜನ್ನು ಸುಡುತ್ತದೆ.

ದಾಲ್ಚಿನ್ನಿ ಟೀ

ನೀವು ಆದಷ್ಟು ಬೇಗ ತೂಕ ಇಳಿಸಿಕೊಳ್ಳಲು ಬಯಸಿದರೆ ದಾಲ್ಚಿನ್ನಿ ಚಹಾವನ್ನು ಸೇವಿಸಲು ಪ್ರಾರಂಭಿಸಿ. ತೂಕವನ್ನು ನಿಯಂತ್ರಿಸಲು ದಾಲ್ಚಿನ್ನಿ ಚಹಾ ಉತ್ತಮ ನೈಸರ್ಗಿಕ ಪಾನೀಯವಾಗಿದೆ. ಇದು ಚಯಾಪಚಯವನ್ನು ಹೆಚ್ಚಿಸುವ ಗುಣಗಳನ್ನು ಹೊಂದಿದೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಆ್ಯಂಟಿಬಯೋಟಿಕ್‌ಗಳು ಡಿಟಾಕ್ಸ್ ಪಾನೀಯವನ್ನಾಗಿ ಮಾಡುತ್ತದೆ. ಇದು ಕೊಬ್ಬನ್ನು ಸುಡುವಲ್ಲಿ ಸಹಾಯಕವಾಗಿದೆ .

ಅರಿಶಿನ ಹಾಲು

ಅರಿಶಿನವು ಆಹಾರಕ್ಕೆ ಬಣ್ಣ ಮತ್ತು ರುಚಿಯನ್ನು ನೀಡುವುದಲ್ಲದೆ, ಇದು ಹಲವಾರು ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ. ಶೀತ, ಕೆಮ್ಮು, ಜ್ವರ ಅಥವಾ ಗಾಯವನ್ನು ಕ್ಷಣಾರ್ಧದಲ್ಲಿ ಗುಣಪಡಿಸುವುದರ ಜೊತೆಗೆ, ತೂಕವನ್ನು ಕಡಿಮೆ ಮಾಡುವಲ್ಲಿ ಇದು ಪರಿಣಾಮಕಾರಿ. ಅರಿಶಿನವು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿದೆ, ಇದು ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ. ತಜ್ಞರ ಪ್ರಕಾರ, ಪ್ರತಿದಿನ ರಾತ್ರಿ ಮಲಗುವ ಮುನ್ನ ಅರಿಶಿನದ ಹಾಲನ್ನು ಕುಡಿಯಬೇಕು. ಕೆಲವೇ ದಿನಗಳಲ್ಲಿ ನೀವು ಕಡಿಮೆ ತೂಕವನ್ನು ಅನುಭವಿಸುವಿರಿ.

ಒಂದು ಲೋಟ ಉಗುರುಬೆಚ್ಚಗಿನ ನೀರಿಗೆ ಲಿಂಬೆ ಹಣ್ಣು ಹಿಂಡಿ ಅದರಲ್ಲಿ ಬ್ಲಾಕ್‌ ಸಾಲ್ಟ್‌ ಬೆರೆಸಿ ಕುಡಿಯಿರಿ, ತೂಕ ವೇಗವಾಗಿ ಕಡಿಮೆಯಾಗುತ್ತದೆ. ಇದರಿಂದ ದೇಹದಲ್ಲಿರುವ ವಿಷಕಾರಿ ಅಂಶ ಸುಲಭವಾಗಿ ಹೊರಹಾಕಲಾಗುತ್ತದೆ. ಇದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಮತ್ತು ಕ್ಯಾಲೊರಿಗಳನ್ನು ಸುಡುವಲ್ಲಿ ಹೆಚ್ಚು ಸಹಾಯ ಮಾಡುತ್ತದೆ

Share post:

Subscribe

spot_imgspot_img

Popular

More like this
Related

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...