ಗುಡ್ ಮಾರ್ನಿಂಗ್ ಕಂದಾ: ಅಮ್ಮನ ಪ್ರೀತಿಯ ಅಪ್ಪುಗೆ ನೆನೆದು ಕಿಚ್ಚ ಭಾವುಕ!

Date:

ಗುಡ್ ಮಾರ್ನಿಂಗ್ ಕಂದಾ: ಅಮ್ಮನ ಪ್ರೀತಿಯ ಅಪ್ಪುಗೆ ನೆನೆದು ಕಿಚ್ಚ ಭಾವುಕ!

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಸುದೀಪ್‌ ಅವರ ತಾಯಿ ಸರೋಜಾ ಸಂಜೀವ್‌ ಭಾನುವಾರ ಬೆಳಿಗ್ಗೆ ನಿಧನರಾದರು. ಅಮ್ಮ ತೀರಿ ಹೋದ ವಿಷಯ ಕೇಳಿ ಕಿಚ್ಚ ಸುದೀಪ್ ಅಕ್ಷರಶಃ ಕುಸಿದಿದ್ದಾರೆ.

ಪ್ರೀತಿಯ ತಾಯಿ ನೆನೆದು ಪೋಸ್ಟ್ ಮಾಡಿರುವ ಕಿಚ್ಚ, ಬಹಳ ಭಾವುಕರಾಗಿ ಪತ್ರದ ಮೂಲಕವೇ ಕಣ್ಣೀರು ಹಾಕಿದ್ದಾರೆ.

ಅಮ್ಮ ಆಸ್ಪತ್ರೆ ಸೇರಿದ ದಿನ ಕಿಚ್ಚ ಬಿಗ್ ಬಾಸ್ ಶೂಟಿಂಗ್ ಮಾಡ್ತಿದ್ದರು. ಅಮ್ಮನ ಬಗ್ಗೆ ವಿಚಾರಿಸಿಕೊಂಡೇ ಕಿಚ್ಚ ಸುದೀಪ್ ಅಂದು ವೇದಿಕೆ ಹತ್ತಿದ್ದರು. ಅಮ್ಮನ ಸ್ಥಿತಿ ಗಂಭೀರ ಅನ್ನೋ ಸಂದೇಶ ಬರ್ತನೇ ಇತ್ತು. ಆದರೂ, ಅಮ್ಮ ಕಲಿಸಿದ ಆ ಪಾಠ ನೆನಪಿತ್ತು. ಅದನ್ನ ಮರೆಯದೇ ಕೆಲಸ ಮುಂದುವರೆಸಿದೆ. ಶೂಟಿಂಗ್ ಮಧ್ಯೆ ಅಮ್ಮನ ಬಗ್ಗೆ ಮನದಲ್ಲಿ ನೋವು ಸುಳಿಯುತ್ತಲೇ ಇತ್ತು. ಆದರೂ ಶೂಟಿಂಗ್ ಮುಗಿಸಬೇಕಿತ್ತು. ಶನಿವಾರದ ಎಪಿಸೋಡ್ ಮುಗಿಸಿದೆ.

ಅಲ್ಲಿಂದ ನೇರವಾಗಿ ಆಸ್ಪತ್ರೆಗೆ ಹೋದೆ. ಆದರೆ, ನಾನು ಹೋಗೋ ಕೆಲವು ಗಂಟೆ ಮೊದಲು ಅಮ್ಮ ವೆಂಟಿಲೇಷನ್‌ನಲ್ಲಿಯ ಇದ್ದಳು. ಆದರೆ, ಅಮ್ಮನನ್ನ ನಾನು ಹೀಗೆ ಎಂದೂ ನೋಡಿಯೇ ಇರಲಿಲ್ಲ..

ಅಮ್ಮ ನನ್ನ ಜೀವನದಲ್ಲಿ ಎಲ್ಲವೂ ಆಗಿದ್ದಳು. ಪ್ರತಿ ದಿನ ನನ್ನ ಫೋನ್‌ಗೆ ಒಂದು ಸಂದೇಶ ಬರ್ತಾ ಇತ್ತು ಗುಡ್ ಮಾರ್ನಿಂಗ್ ಕಂದ ಅನ್ನೋ ಸಂದೇಶ ಅದಾಗಿತ್ತಿತ್ತು. ಆದರೆ, ಅಕ್ಟೋಬರ್ 18 ರಂದೇ ಒಂದು ಒಂದು ಸಂದೇಶ ಬಂತು. ಅದೇ ಕೊನೆ ನೋಡಿ. ಅಮ್ಮನ ಸಂದೇಶ ಇನ್ಮುಂದೆ ಬರೋದೇ ಇಲ್ಲ.

ಅಮ್ಮನ ಎಂದೂ ಆ ಒಂದು ಸ್ಥಿತಿಯಲ್ಲಿ ನೋಡಿಯೇ ಇಲ್ಲ. ಆದರೆ, ಈಗೀನ ಸ್ಥಿತಿ ನನಗೆ ನಿಜಕ್ಕೂ ಹೊಸದೇ ಆಗಿದೆ. ಇದನ್ನ ಅರ್ಥ ಮಾಡಿಕೊಳ್ಳಲು ಮನಸು ಕಷ್ಟಪಡುತ್ತಿದೆ. ಅಮ್ಮನ ನನ್ನ ಜೀವನದಲ್ಲಿ ಒಂದು ಅಮೂಲ್ಯ ರತ್ನವೇ ಆಗಿದ್ದಳು. ಈಕೆ ಇಲ್ಲದೇ ಜೀವನ ಹೇಗೆ ಅನ್ನೋ ಸಣ್ಣ ನೋವು ಕಾಡುತ್ತಿದೆ.

ಅಮ್ಮ ಕೊಡ್ತಿದ್ದಳು ಟೈಟ್ ಹಗ್

ಪ್ರತಿ ದಿನ ಶೂಟಿಂಗ್ ಹೋಗೋ ಮೊದಲು ಅಮ್ಮ ಒಂದು ಟೈಟ್ ಹಗ್ ಕೊಡ್ತಿದ್ದಳು. ಆ ಟೈಟ್ ಹಗ್ ಇನ್ಮುಂದೆ ಇರೋದೇ ಇಲ್ಲ. ಅಮ್ಮ ಹೋಗಿಬಿಟ್ಳು….ಅಮ್ಮ ಇಲ್ಲದ ನೋವು ಕಾಡುತ್ತಲೇ ಇದೆ.

ಅಮ್ಮನ ನನಗೆ ಟೀಸರ್ ಆಗಿದ್ದಳು. ಅಮ್ಮ ನನಗೆ ಎಲ್ಲವೂ ಆಗಿದ್ದಳು. ಈಕೆಯ ಇಲ್ಲದ ನೋಡು ಕಾಡುತ್ತಿದೆ ಎಂದಿದ್ದಾರೆ.

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...