ಗುರಾಯಿಸಿದಕ್ಕೆ ಬಿತ್ತು ಹೆಣ: ಬೀರ್ ಬಾಟಲ್ ನಿಂದ ಹೊಡೆದು ಕೊಲೆ

Date:

ಆನೇಕಲ್: ಬಾರ್ ನಲ್ಲಿ ಕುಡಿಯಲು ಹೋಗಿದ್ದ ವೇಳೆ ಗುರಾಯಿಸಿದ್ದಕ್ಕೆ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯ ಆಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬನ್ನೇರ್ಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಕೆರೆ ಸಮೀಪ ನಡೆದಿದೆ .ಗುಲ್ಬರ್ಗ ಮೂಲದ ಹರ್ಷ ಮೃತಪಟ್ಟ ದುರ್ದೇವಿ, ನಿನ್ನೆಸಂಜೆ 7 ಗಂಟೆಗೆ ಸುಮಾರಿಗೆ ಮೃತ ಹರ್ಷ ಕುಡಿಯಲು ಕಲ್ಕೆರೆ ಗೇಟ್ ನಲ್ಲಿರುವ ಎಸ್ ಕೆ‌ಆರ್ ಬಾರ್ ನಲ್ಲಿ ಹೋಗಿದ್ರಂತೆ ಆ ವೇಳೆ ಕುಡಿದ ಮತ್ತಿನಲ್ಲಿ ಯುವಕರನ್ನು ಗುರಾಯಿಸಿದರಂತೆ. ಅದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿ ಬೀರ್ ಬಾಟಲ್ ನಿಂದ ಹೊಡೆದು ಕೊಲೆ ಮಾಡಿದ್ದಾರೆ.
ಇನ್ನು ಕೊಲೆ ಮಾಡಿರೋರು ಸಿಕೆ ಪಾಳ್ಯದ ಯುವಕ ಗ್ಯಾಂಗ್ ಎಂದು ಅನುಮಾನ ವ್ಯಕ್ತವಾಗಿದೆ ಇನ್ನು ಅ ಮೃತ ಹರ್ಷ ಗಾರೆ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ ಕಲ್ಕೇರಿಯಲ್ಲಿ ವಾಸವಾಗಿದ್ದ ಸಂಜೆ ಎಂದಿನಂತೆ ಕುಡಿಯಲು ಬಂದಿದ್ದ ಆ ವೇಳೆ ಕುಡಿದ ಮತ್ತಿನಲ್ಲಿ ಕೊಲೆ ಆಗಿರಬಹುದು ಅಂತ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ ಇನ್ನು ಘಟನಾ ಸ್ಥಳಕ್ಕೆ ಡಿವೈಎಸ್ ಪಿ ಮೋಹನ್ ಕುಮಾರ್ ಬನ್ನೇರುಘಟ್ಟ ಇನ್ಸ್ ಪೆಕ್ಟರ್ ಕುಷ್ಣಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಇನ್ನು ಆರೋಪಿಗಳ ಪತ್ತೆಗಾಗಿ ಬಲೆ ಬೀಸಲಾಗಿದೆ

Share post:

Subscribe

spot_imgspot_img

Popular

More like this
Related

ಮದ್ದೂರು ನಗರಸಭೆ ವ್ಯಾಪ್ತಿಗೆ ಗ್ರಾಪಂಗಳ ಸೇರ್ಪಡೆ ಕೈ ಬಿಡುವಂತೆ ನಿಖಿಲ್ ಕುಮಾರಸ್ವಾಮಿ ಆಗ್ರಹ

ಮದ್ದೂರು ನಗರಸಭೆ ವ್ಯಾಪ್ತಿಗೆ ಗ್ರಾಪಂಗಳ ಸೇರ್ಪಡೆ ಕೈ ಬಿಡುವಂತೆ ನಿಖಿಲ್ ಕುಮಾರಸ್ವಾಮಿ...

‘ಗೋ ಬ್ಯಾಕ್ ಗವರ್ನರ್’ ರಾಜಕೀಯ ನಾಟಕ: ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

‘ಗೋ ಬ್ಯಾಕ್ ಗವರ್ನರ್’ ರಾಜಕೀಯ ನಾಟಕ: ಕಾಂಗ್ರೆಸ್ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ...

ಏಕ‌ಸದಸ್ಯ ಪೀಠದ ತೀರ್ಪು ರದ್ದು: ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗೆ ಹೈಕೋರ್ಟ್ ಅನುಮತಿ

ಏಕ‌ಸದಸ್ಯ ಪೀಠದ ತೀರ್ಪು ರದ್ದು: ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗೆ ಹೈಕೋರ್ಟ್ ಅನುಮತಿ ಬೆಂಗಳೂರು:...

ಲಷ್ಕರ್-ಎ-ತೈಬಾ ಸೇರ್ಪಡೆ ಸಂಚು ಪ್ರಕರಣ: ಶಿರಸಿಯ ಸಯ್ಯದ್ ಇದ್ರಿಸ್ ಗೆ 10 ವರ್ಷ ಶಿಕ್ಷೆ

ಲಷ್ಕರ್-ಎ-ತೈಬಾ ಸೇರ್ಪಡೆ ಸಂಚು ಪ್ರಕರಣ: ಶಿರಸಿಯ ಸಯ್ಯದ್ ಇದ್ರಿಸ್ ಗೆ 10...