ಚಂದನವನದ ಚಂದದ ನಟಿ.. ಗುಳಿ ಕೆನ್ನೆಯ ಸುಂದರಿ. ಸಾಕಷ್ಟು ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಬೆಡಗಿ. ಸದ್ಯ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಜೊತೆಗೆ ಆಯುಷ್ಮಾನ್ ಭವ ಸಿನಿಮಾದಲ್ಲಿ ಮಿಂಚಿರುವ ಚೆಲುವೆ. ಆಯುಷ್ಮಾನ್ ಭವ ಯಶಸ್ಸಿನ ಖುಷಿಯಲ್ಲಿರುವ ಸುಂದರಿ ರಚಿತಾರಾಮ್ ಮನೆಗೆ ಹೊಸ ಅತಿಥಿ ಬಂದಿದ್ದಾರೆ. ಹೀಗಾಗಿ ಡಿಂಪಲ್ ಕ್ವೀನ್ ಡಬ್ ಡಬಲ್ ಸಂಭ್ರಮದಲ್ಲಿದ್ದಾರೆ.
ರಚ್ಚು ಮನೆಗೆ ಹೊಸ ಗೆಸ್ಟ್ ಬಂದಿದ್ದಾರೆ. ಆ ಗೆಸ್ಟ್ ರಚ್ಚುಗೆ ಅಚ್ಚುಮೆಚ್ಚು! ಅವರು ಬೇರೇ ಯಾರೂ ಅಲ್ಲ.. ಬೆಂಜ್ ಕಾರು. ಹೌದು ರಚಿತಾರಾಮ್ ಹೊಸದಾದ ಬೆಂಜ್ ಕಾರನ್ನು ಖರೀದಿಸಿದ್ದಾರೆ. ಕೆಲವು ದಿನಗಳಲ್ಲಿ ಅವರ ಅಕ್ಕನ ಮದುವೆ ಇದ್ದು, ಈಗ ರಚಿತಾ ಇಷ್ಟದ ಕಾರು ಖರೀದಿಸಿದ ಖುಷಿಯಲ್ಲಿದ್ದಾರೆ. ಈ ಕಾರಿನ ಬೆಲೆ 2.3 ಕೋಟಿ ರೂ. ಕನಸಿನ ಕಾರನ್ನು ಕೊಂಡಿರುವ ರಚಿತಾ ಅದರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿ ಟ್ಟಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ರಚ್ಚು ಹೊಸ ಕಾರಿಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
ಇನ್ನು ಆಯುಷ್ಮಾನ್ ಭವ ಸಿನಿಮಾದಲ್ಲಿನ ರಚ್ಚು ನಟೆನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದು, ಈಗ ಅವರು ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾ ಹಾಗೂ ಡಾಲಿ ಧನಂಜಯ್ ಜೊತೆ ಸಿನಿಮಾವೊಂದರಲ್ಲಿ ಅಭಿನಯಿಸುತ್ತಿದ್ದಾರೆ.