ಗೂಗಲ್ ಗಿಂತ ಅಕ್ಯುರೇಟ್ ಸರ್ಚ್ ಇಂಜಿನ್ ಯಾವುದು ಗೊತ್ತೇ? 

Date:

ಗೂಗಲ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಎಲ್ರಿಗೂ ಗೊತ್ತೇ ಇದೆ! ಆನ್ಲೈನಲ್ಲಿ ಏನೇ ಜಾಲಾಡಿ ತೆಗಿಬೇಕು ಅಂದ್ರೂ ಎಂಟ್ರಿಕೊಡೋದು ಈ ಗೂಗಲ್ ಗೆ! ಹೌದಲ್ವಾ, ಗೂಗಲ್ ಸಿಕ್ಕಾಪಟ್ಟೆ ಫೇಮಸ್ ಆಗಿರೋ ಸರ್ಚ್ ಇಂಜಿನ್! ಈ ಗೂಗಲ್ ಅಂದ್ರೇನೇ ಮಾಹಿತಿ ಕಣಜವೆಂಬಂತಾಗಿದೆ! ಸರ್ಚ್ ಇಂಜಿನ್ ಗಳಿಗೆ ಸಂಬಂಧಿಸಿದಂತೆ ಜನಪ್ರೀಯತೆಯಲ್ಲಿ ಈ “ಗೂಗಲ್” ಎಂಬ ಸರ್ಚ್ ಇಂಜಿನ್ ಗೆ ಮೊದಲ ಸ್ಥಾನ! ಇದರ ನಂತರದಲ್ಲಿ “ಬಿಂಗ್”, ಅದರ ನಂತರದಲ್ಲಿ “ಯಾಹು” ಇದೆ! ಅಂದ್ರೆ ಹೆಚ್ಚು ಜನ ಇಂಟರ್ ನೆಟ್ ಬಳಕೆದಾರರು ತಮಗೆ ಬೇಕಾದ ಮಾಹಿತಿ ಹುಡುಕಲು ಬಳಸಿಕೊಳ್ಳುವ ಸರ್ಚ್ ಇಂಜಿನ್  “ಗೂಗಲ್”! ಮತ್ತೊಂದು ವಿಷ್ಯಾ ಅಂದ್ರೆ ಎಷ್ಟೋ ಜನ್ರಿಗೆ ಗೂಗಲ್ ಬಿಟ್ರೆ ಬೇರೆ ಸರ್ಚ್ ಇಂಜಿನ್ನೇ ಗೊತ್ತಿಲ್ಲ! ಹಿಂಗೆ ಸಿಕ್ಕಾಪಟ್ಟೆ ಹವಾ ಮೆಂಟೈನ್ ಮಾಡ್ತಾ ಇರೋ ಗೂಗಲ್ಗೇನೇ ಸೆಡ್ಡೆ ಹೊಡೆಯುವ ಸರ್ಚ್ ಇಂಜಿನ್ ಅನ್ನು ಭಾರತೀಯ ಮೂಲದ 16 ಪೋರ ಅಭಿವೃದ್ಧಿ ಪಡಿಸಿದ್ದಾನೆ!

 

ಸಾರ್, ಅಚ್ಚರಿ ಆದ್ರು ಇದು ಸತ್ಯ! ಭಾರತೀಯ ಮೂಲದ ಹದಿನಾರು ವರ್ಷದ ಹುಡುಗನೊಬ್ಬ ಗೂಗಲ್ಗಿಂತನೂ ಹೆಚ್ಚು ನಿಖರವಾದ ಸರ್ಚ್ ಇಂಜಿನ್ ಅಭಿವೃದ್ಧಿ ಪಡಿಸಿದ್ದಾನೆ! ಅಬ್ಬಾ, ಗೋಲಿ ಆಡೋ ವಯಸ್ಸಲ್ಲಿ ಸರ್ಚ್ ಇಂಜಿನ್ ಡೆವೆಲಪ್ ಮಾಡಿದ್ದಾನಲ್ಲ! ಹೈಸ್ಕೂಲ್ಗೆ ಹೋಗ ಏಜಲ್ಲಿ ಸರ್ಚ್ ಇಂಜಿನ್ ಡೆವೆಲಪ್ ಮಾಡೋದು ಅಂದ್ರೆ, ಆನ್ ಲೈನ್ನಲ್ಲಿ ಗೇಮ್ ಆಡ್ದಂಗ! ಅಯ್ಯಬ್ಬಾ! ಈ ಏಜಲ್ಲಿ ಸರ್ಚ್ ಇಂಜಿನ್ ಡೆವೆಲಪ್ ಮಾಡಿದ, ಅದ್ರಲ್ಲೂ ಗೂಗಲ್ ಅನ್ನೇ ಮೀರಿಸುವ ಸರ್ಚ್ ಇಂಜಿನ್ ಡೆವಲಪ್ ಮಾಡೋದು ಅಂದ್ರೆ ಏನ್ ಸಾಮಾನ್ಯನಾ! ಈ ಅಸಾಮಾನ್ಯವನ್ನು ಸಾಧಿಸಿದ ಆ 16ರ ಪೋರನ ಬಗ್ಗೆ ತಿಳಿಲೇಬೇಕು ಅಂತ ನಿಮ್ಗೆ ಕುತೂಹಲ ಆಗ್ತಾ ಇದೆ ಅಲ್ವಾ! ಆ 16 ಪೋರ ಯಾರು? ಅವ್ನು ಈಗ ಏನ್ ಮಾಡ್ತಾ ಇದ್ದಾನೆ! ಇದನ್ನ ಅವ್ನು ಹೇಗೆ ಕಂಡು ಹಿಡಿದ! ಏನು, ಎಂಥ ಅಂತ ಹೇಳ್ತೀನಿ ಕೇಳಿ!

 

ಅವನು “ಅನ್ಮೋಲ್ ಟುಕ್ರೆಲ್” ಭಾರತೀಯ ಮೂಲದವ! ಕೆನಡಾ ದೇಶದ ಪ್ರಜೆ! ಈತನಿಗೆ ಇನ್ನೂ 16 ವರ್ಷ! ವಯಸ್ಸು ಚಿಕ್ಕದು, ಆದ್ರೆ ಸಾಧನೆ ದೊಡ್ಡದು! ಅವ್ನ ಸಾಧನೆಗೆ ಇಡೀ ವಿಶ್ವವೇ ಶಹಬ್ಬಾಶ್ ಅಂತಿದೆ! ಹಾಗಾದ್ರೆ ಅಂಥಾ ಸಾಧನೆ ಏನ್ ಮಾಡಿದ್ದಾನಪ್ಪಾ? ಇವ್ನು ಮಾಡಿದ ಸಾಧನೆಯ ಹಿಂಟ್ಸ್ ಅನ್ನ ಈಗಾಗಲೇ ಹೇಳಿದ್ದೇನೆ! ಹೌದು, ಈತ ಒಂದು ಸರ್ಚ್ ಇಂಜಿನ್ ಡೆವೆಲಪ್ ಮಾಡಿದ್ದಾನೆ! ಅದಕ್ಕಿನ್ನೂ ಹೆಸರಿಟ್ಟಿಲ್ಲ! ಆದ್ರೆ ಇದು ಗೂಗಲ್ ಎಂಬ ಧೈತ್ಯ ಸರ್ಚ್ ಇಂಜಿನ್ ಇದ್ಯಲ್ಲಾ, ಅದ್ಕೂ ಹೆಚ್ಚು ಅಕ್ಯುರೇಟ್ (ನಿಖರ) ಅಂತೆ! ಏನ್ರೀ, ಗೂಗಲ್ ಅನ್ನೋದು ಸರ್ಚ್ ಇಂಜಿನ್ಗಳ ಹಿರಿಯಣ್ಣ! ಈ ಗೂಗಲ್ಗಿಂತ ಹೆಚ್ಚು ನಿಖರವಾದ ಸರ್ಚ್ ಇಂಜಿನ್ ಅನ್ನ ಇನ್ನೂ ಮೀಸೆ ಮೂಡದ ಹುಡುಗ ಡೆವೆಲಪ್ ಮಾಡಿದ್ದಾನ! ಹ್ಞೂಂ, ಸಾರ್ ಗೂಗಲ್ಗಿಂತಲೂ ಶೇ 47ರಷ್ಟು ಅಕ್ಯುರೇಟ್ ಆಗಿದೆಯಂತೆ, ಈತ ಅಭಿವೃದ್ಧಿ ಪಡಿಸಿರುವ ಸರ್ಚ್ ಇಂಜಿನ್!

“ಗೂಗಲ್ ಸೈನ್ಸ್ ಫೇರ್”ಗೆ ತಾನು ಡೆವಲಪ್ ಮಾಡಿದ ಸರ್ಚ್ ಇಂಜಿನ್ ಅನ್ನು “ಅನ್ಮೋಲ್ ಟುಕ್ರೆಲ್” ಸಲ್ಲಿಸಿದ್ದಾರೆ! ಗೂಗಲ್ ಸೈನ್ಸ್ ಫೇರ್ 13ರಿಂದ 18 ವರ್ಷದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಜಾಗತಿಕ ಮಟ್ಟದ ಆನ್ ಲೈನ್ ಕಾಂಪಿಟೇಷನ್ ಆಗಿದೆ. ನೋಡಿ ಸ್ವಾಮಿ, ಈ ಗೂಗಲ್ ಗೇನೇ ಸ್ಪರ್ಧೆಯ ಸಲುವಾಗಿ ಸಲ್ಲಿಸಿದ ಸರ್ಚ್ ಇಂಜಿನ್ ಈ ಗೂಗಲ್ಗಿಂತಲೂ ಅಕ್ಯುರೇಟ್ ಆಗಿದೆ ಅಂದ್ರೆ ಹಾಗೇ ಸುಮ್ನೆ ಖುಷಿಪಡಿ ನಮ್ ಇಂಡಿಯಾದ 16ರ ಬಾಲಕ್ ಎಷ್ಟೊಂದು ಗ್ರೇಟ್!

 

“ಅನ್ಮೋಲ್ ಟುಕ್ರೆಲ್” ಸರ್ಚ್ ಇಂಜಿನ್ ಡೆವೆಲಪ್ ಮಾಡ್ಬೇಕು ಅಂತ ಅಂದು ಕೊಳ್ತಾರೆ! ಆದ್ರೆ ಇದು ಅಷ್ಟು ಸುಲಭವಲ್ಲ! ಈ ಕೆಲಸ ಮೋಸ್ಟ್ ಜೀನಿಯಸ್! ಅದೂ ಇನ್ನೂ ಈಗತಾನೆ 10ನೇ ತರಗತಿ ಮುಗಿಸಿದ್ದಾನೆ! ಅಂಥ ಹುಡುಗ ಸರ್ಚ್ ಇಂಜಿನ್ ಡೆವೆಲಪ್ ಮಾಡೋಕೆ ಮುಂದಾಗುವುದು ಅಂದ್ರೆ ಸುಮ್ನೇನಾ! ಆದ್ರೆ ಈತ ತನ್ನಲ್ಲೇ ತಾನು ಕೇಳಿಕೊಳ್ಳುತ್ತಾನೆ ” ಏಕೆ ಅಸಾಧ್ಯವಾಗುತ್ತೆ! “ಗೂಗಲ್” ಕೂಡ ಆಗೇ ಯೋಚನೆ ಮಾಡಿದ್ರೆ ಇವತ್ತು ಈ ಮಟ್ಟಕ್ಕೇ ಬೆಳಿತಾ ಇತ್ತೇ? ಗೂಗಲ್ ಇಂದ ಸಾಧ್ಯವಾಗಿದ್ದನ್ನ ನಾನೇಕೆ ಸಾಧಿಸಬಾರದೆಂದು ತನ್ನನ್ನು ತಾನೇ ಪ್ರಶ್ನಿಸಿ ಕೊಂಡು, ಸರ್ಚ್ ಇಂಜಿನ್ ಅಭಿವೃದ್ಧಿಗೆ ಮುಂದಾಗುತ್ತಾನೆ! ಇದಕ್ಕೆ ಸರಿಯಾಗಿ “ಗೂಗಲ್ ಸೈನ್ಸ್ ಫೇರ್” ಸ್ಪರ್ಧೆ ಕೂಡ ಏರ್ಪಟ್ಟಿತು! ಸರಿ, ನಾನೂ ಒಂದು ಸರ್ಚ್ ಇಂಜಿನ್ ಡೆವಲಪ್ ಮಾಡಿಯೇ ಮಾಡುತ್ತೇನೆಂದು ಪಣತೊಟ್ಟ ಅನ್ಮೋಲ್ ಟುಕ್ರೆಲ್ ಕೊನೆಗೆ ಈಗ ಅದರಲ್ಲಿ ಯಶಸ್ವಿಯೂ ಆಗಿದ್ದಾನೆ! ಅಂದಹಾಗೆ ಈ ಸರ್ಚ್ ಇಂಜಿನ್ ಅಭಿವೃದ್ಧಿ ಪಡಿಸಿಲು ಕೇವಲ ಎರಡು ತಿಂಗಳನ್ನು ತೆಗೆದುಕೊಂಡಿದ್ದಾನೆ! ಸುಮಾರು 60 ಗಂಟೆಗಳು ಇಂಜಿನ್ ಕೋಡ್ ಗಾಗಿ ತಗುಲಿದೆ! ಈ ಸರ್ಚ್ ಇಂಜಿನ್ ಕಂಪ್ಯೂಟರ್ ಮತ್ತು ಮೊಬೈಲ್ ಗಳಲ್ಲಿಯೂ ಮಾಹಿತಿ ಹುಡುಗಾಟಕ್ಕೆ ನೆರವಾಗುತ್ತಂತೆ!

ಈತ ಈ ಪ್ರಾಜೆಕ್ಟ್ ಅನ್ನು ಕಳೆದ ತಿಂಗಳು ಇಂಟರ್ ನ್ಯಾಷನಲ್ ಹೈಸ್ಕೂಲ್ ಜರ್ನಲ್ ಆಫ್ ಸೈನ್ಸ್ ಗೆ ಸಲ್ಲಿಸಿದ್ದಾರೆ! ಈ ಸರ್ಚ್ ಇಂಜಿನ್ ಗೆ ಇನ್ನೂ ಪೇಟೆಂಟ್ ಸಿಕ್ಕಿಲ್ಲ! ಸಧ್ಯದಲ್ಲೇ ಸಿಗುತ್ತಾ..! ಗೂಗಲ್ ಗಿಂತಲೂ ಶೇ. 47ರಷ್ಟು ನಿಖರವಾಗಿದೆ ಅಂತಾ ಹೇಳ್ತಾ ಇದ್ದಾರಲ್ಲ! ಅದು ನಿಜ ಅಂದಾದರೆ, ಗೂಗಲ್ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಇನ್ನೂ ಹೆಚ್ಚು ಅಕ್ಯುರೇಟ್ ಆಗಲೇ ಬೇಕು! ಸರ್ಚ್ ಇಂಜಿನ್ ಗಳ ಅಭಿವೃದ್ಧಿಯಲ್ಲಿ ಇಂತಹ ಕ್ರಾಂತಿಕಾರಿ ಬೆಳವಣಿಗೆ, ಸ್ಪರ್ಧೆ ಯಿಂದ ನಾವುಗಳು ಪಕ್ಕಾ, ನಿಖರವಾದ ಮಾಹಿತಿಯನ್ನಂತೂ ಪಡೆಯಬಹುದು ಅಲ್ವಾ?

ಈಗ ಎರಡುವಾರಗಳ ಇಂಟರ್ ಶಿಪ್ ಪ್ರೋಗ್ರಾಮ್ ಗೆಂದು ಇಂಡಿಯಾಕ್ಕೆ ಬಂದಿದ್ದಾರೆ! ಕ್ಯಾಲಿಫೋರ್ನಿಯಾದ “ಸ್ಟಾಂಡ್ ಫೋರ್ಡ್ ಯೂನಿವರ್ಸಿಟಿ”ಯಲ್ಲಿ ಕಂಪ್ಯೂಟರ್ ಸೈನ್ಸ್ ಓದಬೇಕೆಂಬ ಕನಸು ಇವರಲ್ಲಿದೆ! ಆ ಕನಸು ನೆರವೇರಲಿ, “ಅನ್ಮೋಲ್ ಟುಕ್ರೆಲ್” ಹೆಚ್ಚು ಹೆಚ್ಚು ಸಾಧನೆ ಮಾಡಲಿ. ಇವರ ಕೀರ್ತಿ ವಿಶ್ವದೆಲ್ಲೆಡೆ ಪಸರಿಸಲಿ! ಆ್ಞಂ ಗೂಗಲ್ ಎಂಬ ಸರ್ಚ್ ಇಂಜಿನ್ ಮಾಂತ್ರಿಕನ ಸಿಇಒ ಆಗಿ ಇತ್ತೀಚೆಗೆ ನಮ್ಮ ಭಾರತೀಯ “ಸುಂದರ್ ಪಿಚೈ” ನೇಮಕವಾಗಿರುವುದು ಗೊತ್ತೇ ಇದೆ! ಅದು ದೇಶದ ಹೆಮ್ಮೆ! ಈಗ ಅದೇ ಸರ್ಚ್ ಇಂಜಿನ್ ಗೆ ಪೈಪೋಟಿಯೊಡ್ಡಲು ಭಾರತೀಯ ಮೂಲದ ಹದಿನಾರರ ಪೋರ ಅಭಿವೃದ್ಧಿ ಪಡಿಸಿದ ಸರ್ಚ್ ಇಂಜಿನ್ ಸಜ್ಜಾಗಿದೆ! ಆರೋಗ್ಯಕರ ಸ್ಪರ್ಧೆ ಒಳ್ಳೆಯದೇ! ನೋಡೋಣ “ಸುಂದರ್ ಪಿಚೈ”ಗೆ “ಅನ್ಮೋಲ್ ಟುಕ್ರೆಲ್” ಎಂಬ ಪೋರ ಸೆಡ್ಡು ಹೊಡೆಯುತ್ತಾನೆಯೇ!  ಗೂಗಲ್, ಬಿಂಕ್ ಯಾಹು, ಆ್ಯಸ್ಕ್ ಇತ್ಯಾದಿ ಇತ್ಯಾದಿ ಸರ್ಚ್ ಇಂಜಿನ್ ಗಳನ್ನ ಮೀರಿಸಿ ಪೋರನ ಸರ್ಚ್ ಇಂಜಿನ್ ಜನಪ್ರೀಯವಾಗುತ್ತದೆಯೇ?

ಈ ನಮ್ಮ ಭಾರತೀಯ ಪೋರನ ಸಾಧನೆಯನ್ನು ಪ್ರತಿಯೊಬ್ಬರೂ ತಿಳಿ ಬೇಕು ಅಲ್ವಾ? ಹಾಗದ್ರೆ ಇದನ್ನ ಶೇರ್ ಮಾಡಿ, ಭಾರತೀಯ ಹೆಮ್ಮೆಯ ಪುತ್ರನಿಗೆ ಕಂಗ್ರಾಟ್ಸ್ ಹೇಳಿ! ಶುಭ ಹಾರೈಸಿ!

Share post:

Subscribe

spot_imgspot_img

Popular

More like this
Related

ಧರ್ಮಸ್ಥಳ ಕೇಸ್‌ʼನಲ್ಲಿ ಎಸ್‌ಐಟಿ ರಚನೆ: ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದೇನು..? 

ಧರ್ಮಸ್ಥಳ ಕೇಸ್‌ʼನಲ್ಲಿ ಎಸ್‌ಐಟಿ ರಚನೆ: ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದೇನು..?  ಮಂಗಳೂರು:...

ಪಂಚಭೂತಗಳಲ್ಲಿ ಲೀನರಾದ ಹಿರಿಯ ಸಾಹಿತಿ ಡಾ. ಎಸ್.ಎಲ್. ಭೈರಪ್ಪ!

ಪಂಚಭೂತಗಳಲ್ಲಿ ಲೀನರಾದ ಹಿರಿಯ ಸಾಹಿತಿ ಡಾ. ಎಸ್.ಎಲ್. ಭೈರಪ್ಪ! ಮೈಸೂರು: ಹಿರಿಯ ಸಾಹಿತಿ...

ನವರಾತ್ರಿ ಐದನೇ ದಿನ ಆರಾಧಿಸುವ ದೇವಿ ಸ್ಕಂದಮಾತೆ !

ನವರಾತ್ರಿ ಐದನೇ ದಿನ ಆರಾಧಿಸುವ ದೇವಿ ಸ್ಕಂದಮಾತೆಯ ಹಿನ್ನಲೆ ನೋಡೊದಾದ್ರೆ, ಸ್ಕಂದಮಾತೆ...

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ ಬೆಂಗಳೂರು: ನಾಡಿನ...