ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ ಸ್ವಾಮಿ ಮತ್ತು ರೆಬೆಲ್ ಸ್ಟಾರ್ ಅಂಬರೀಶ್ -ಸುಮಲತಾ ಅಂಬರೀಶ್ ಅವರ ಮಗ ಅಭಿಷೇಕ್ ಅಂಬರೀಶ್ ಆತ್ಮೀಯ ಗೆಳೆಯರು.
ಅಂಬರೀಶ್ ವಿಧಿವಶರಾದಾಗ ಅಭಿಷೇಕ್ ಅವರ ಜೊತೆಗಿದ್ದು ನಿಖಿಲ್ ಸಮಾಧಾನ ಹೇಳಿದ್ದರು. ಒಟ್ಟಿಗೇ ಇದ್ದ ಗೆಳೆಯರು ಲೋಕಸಭಾ ಚುನಾವಣೆಯಿಂದ ಸ್ವಲ್ಪ ದೂರಾಗಿದ್ದಾರೆ.
ಗೆಳೆಯ ನಿಖಿಲ್ ಕುಮಾರಸ್ವಾಮಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣದಲ್ಲಿದ್ದರು. ಅವರ ಸ್ಪರ್ಧಿಯಾಗಿ ಅಭಿಷೇಕ್ ಅವರ ತಾಯಿ ಸುಮಲತಾ ಅಂಬರೀಶ್ ಅವರಿದ್ದರು.
ಗೆಳೆಯ ಮತ್ತು ತಾಯಿಯ ಸ್ಪರ್ಧೆಯಿಂದ ಅಭಿಷೇಕ್ ಅನಿವಾರ್ಯವಾಗಿ ಗೆಳೆಯನನ್ನು ಬಿಟ್ಟು ತಾಯಿ ಪರ ಪ್ರಚಾರ ಮಾಡಿದ್ದರು.
ಆದರೆ ನಿಖಿಲ್ ಮತ್ತು ಅಭಿಷೇಕ್ ಇಬ್ಬರು ತಾವು ಗೆಳೆಯರು ಎಂದೇ ಹೇಳಿದ್ದರು.
ಈಗ ಮಂಡ್ಯ ಫಲಿತಾಂಶ ಬಂದಿದೆ. ಸುಮಲತಾ ಅಂಬರೀಶ್ ಅವರು ಗೆಲುವು ಸಾಧಿಸಿದ್ದಾರೆ. ಈ ಗೆಲುವಿನಿಂದ ಸುಮಲತಾ , ಸುಮಲತಾ ಅವರ ಮಗ ಅಭಿಷೇಕ್ ಸೇರಿದಂತೆ ಅವರ ಬೆಂಬಲಿಗರು ಖುಷಿಯಲ್ಲಿದ್ದಾರೆ. ಆದರೆ, ನಿಖಿಲ್ ಮತ್ತು ಟೀಮ್ ದುಃಖತಪ್ತರಾಗಿದ್ದಾರೆ.
ಈ ನಡುವೆ ಅಭಿಷೇಕ್ ಅವರು ನಿಖಿಲ್ ನನ್ನ ಗೆಳೆಯನೇ..ಅವನಿಗೆ ಈಗ ಕರೆ ಮಾಡಿ ಮಾತನಾಡುವುದು ಕಷ್ಟ. ಅದು ಸರಿಯೂ ಅಲ್ಲ. ಸಮಯ ಬಂದಾಗ ನಾನಾಗಿಯೇ ಕರೆ ಮಾಡಿ ಮಾತಾಡುತ್ತೇನೆ. ನಮ್ಮ ಗೆಳೆತನ ಎಂದೂ ಶಾಶ್ವತ ಎಂದಿದ್ದಾರೆ.
ಒಂದು ಚುನಾವಣೆ ಸ್ನೇಹಿತರನ್ನು ದೂರ ಮಾಡಿದೆ. ಈಗ ಚುನಾವಣೆ ಮುಗಿದಿದೆ ಸ್ನೇಹಿತರು ಒಂದಾಗಲಿ…ರಾಜಕೀಯ ಬೇರೆ ಸ್ನೇಹ ಬೇರೆ.
ಅಭಿಷೇಕ್ ನಟನೆಯ ಅಮರ್, ನಿಖಿಲ್ ನಟನೆಯ ಕುರುಕ್ಷೇತ್ರ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿವೆ. ಇಬ್ಬರೂ ಒಟ್ಟಿಗೆ ಒಬ್ಬೊಬ್ಬರ ಸಿನಿಮಾಗಳನ್ನು ನೋಡಲಿ.