ಗೇಲ್ ಕಮ್ ಬ್ಯಾಕ್ ..!

Date:

ಟಿ20 ಕ್ರಿಕೆಟ್‌ನ ದಿಗ್ಗಜ ಆಟಗಾರ ಕ್ರಿಸ್‌ ಗೇಲ್ ವೆಸ್ಟ್‌ ಇಂಡೀಸ್‌ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದ್ದಾರೆ. ಪ್ರವಾಸಿ ಶ್ರೀಲಂಕಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿ ಸಲುವಾಗಿ ವಿಂಡೀಸ್‌ ಕ್ರಿಕೆಟ್‌ ಮಂಡಳಿ ಶನಿವಾರ ತನ್ನ 14 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟ ಮಾಡಿದೆ.

2019ರಲ್ಲಿ ಭಾರತ ವಿರುದ್ಧದ ಸರಣಿಯಲ್ಲಿ ಗೇಲ್‌ ಕೊನೆಯ ಬಾರಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿದ್ದರು. ಬಳಿಕ ವಿಶ್ವದ ವಿವಿಧ ಭಾಗಗಳಲ್ಲಿನ ಟಿ20 ಲೀಗ್‌ ಆಡುವುದರಲ್ಲಿ ಗೇಲ್‌ ತೊಡಗಿಸಿಕೊಂಡಿದ್ದರು. ಸದ್ಯ ಪಾಕಿಸ್ತಾನ್ ಸೂಪರ್‌ ಲೀಗ್‌ ಟೂರ್ನಿಯಲ್ಲಿ ಕ್ವೆಟಾ ಗ್ಲಾಡಿಯೇಟರ್ಸ್‌ ತಂಡದ ಪರ ಆಡುತ್ತಿದ್ದಾರೆ.

“ಕ್ರಿಸ್‌ ಗೇಲ್ ಇತ್ತೀಚಿನ ಟೂರ್ನಿಗಳಲ್ಲಿ ಅತ್ಯುತ್ತಮವಾಗಿ ಆಡಿದ್ದಾರೆ. ಹೀಗಾಗಿ ತಂಡಕ್ಕೆ ಅವರು ಈಗಲೂ ಅದ್ಭುತ ಕೊಡುಗೆ ಸಲ್ಲಿಸಬಲ್ಲರು ಎಂದು ತಂಡದ ಆಯ್ಕೆ ಸಮಿತಿ ನಿರ್ಧರಿಸಿದೆ,” ಎಂದು ವಿಂಡೀಸ್‌ ಕ್ರಿಕೆಟ್‌ ಮಂಡಳಿಯ ಚೀಫ್‌ ಸೆಲೆಕ್ಟರ್‌ ರೋಜರ್ ಹಾಪರ್‌ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ನಡುವೆ 39 ವರ್ಷದ ಅನುಭವಿ ಬಲಗೈ ವೇಗದ ಬೌಲರ್‌ ಫೀಡೆಲ್‌ ಎಡ್ವರ್ಡ್ಸ್‌ ಬರೋಬ್ಬರಿ 8 ವರ್ಷಗಳ ಬಳಿಕ ತಂಡಕ್ಕೆ ಮರಳಿದ್ದಾರೆ. 2015ರಲ್ಲಿ ಹ್ಯಾಂಪ್‌ಶೈರ್‌ ತಂಡಕ್ಕೆ ಸೇರಿದ್ದ ಕಾರಣ ಎಡ್ವರ್ಡ್ಸ್ ರಾಷ್ಟ್ರೀಯ ತಂಡದ ಪರ ಆಡುವ ಅರ್ಹತೆ ಕಳೆದುಕೊಂಡಿದ್ದರು. ಈಗ ಕೌಂಟಿ ಕ್ರಿಕೆಟ್ ಜೊತೆಗಿನ ಒಪ್ಪಂದವನ್ನು ಎಡ್ವರ್ಡ್ಸ್‌ ಅಂತ್ಯಗೊಳಿಸಿದ್ದಾರೆ. ಹೀಗಾಗಿ ರಾಷ್ಟ್ರೀಯ ತಂಡದ ಆಯ್ಕೆಗೆ ಲಭ್ಯವಾಗಿದ್ದಾರೆ.

ಇನ್ನು ಹೊಸ ಮುಖ ಎನಿಸಿಕೊಂಡಿರುವ ಎಡಗೈ ಸ್ಪಿನ್ನರ್‌ ಅಕೀಲ್ ಹುಸೇನ್‌ ವಿಂಡೀಸ್‌ ಟಿ20 ತಂಡದಲ್ಲಿ ಮೊದಲ ಬಾರಿ ಸ್ಥಾನ ಪಡೆದಿದ್ದಾರೆ. ಇದಕ್ಕೂ ಮುನ್ನ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಈ ನಡುವೆ ಕೋವಿಡ್‌-19 ಸೋಂಕಿನಿಂದ ಚೇತರಿಸುತ್ತಿರುವ ದೈತ್ಯ ಆಲ್‌ರೌಂಡರ್‌ ಆಂಡ್ರೆ ರಸೆಲ್‌ ಅವರಿಗೆ ವಿಶ್ರಾಂತಿ ನೀಡಲಾಗಿದೆ.

 

Share post:

Subscribe

spot_imgspot_img

Popular

More like this
Related

ಧರ್ಮಸ್ಥಳ ಕೇಸ್: ತರಾತುರಿಯಲ್ಲಿ ಎಸ್‌ಐಟಿ ರಚಿಸಿ ಶ್ರೀ ಕ್ಷೇತ್ರಕ್ಕೆ ಧಕ್ಕೆ – ನಿಖಿಲ್ ಕುಮಾರಸ್ವಾಮಿ

ಧರ್ಮಸ್ಥಳ ಕೇಸ್: ತರಾತುರಿಯಲ್ಲಿ ಎಸ್‌ಐಟಿ ರಚಿಸಿ ಶ್ರೀ ಕ್ಷೇತ್ರಕ್ಕೆ ಧಕ್ಕೆ -...

ಧರ್ಮಸ್ಥಳ ಪ್ರಕರಣ: ಜನರಿಗೆ ವಾಸ್ತವಾಂಶ ತಿಳಿಸುವುದಷ್ಟೇ ಸರ್ಕಾರದ ಉದ್ದೇಶ – ಡಿ.ಕೆ. ಶಿವಕುಮಾರ್

ಧರ್ಮಸ್ಥಳ ಪ್ರಕರಣ: ಜನರಿಗೆ ವಾಸ್ತವಾಂಶ ತಿಳಿಸುವುದಷ್ಟೇ ಸರ್ಕಾರದ ಉದ್ದೇಶ - ಡಿ.ಕೆ....

ಮತ್ತೆ ಏರಿಕೆ ಕಂಡ ಬಂಗಾರ: ಇಂದು ಚಿನ್ನದ ಬೆಲೆ ಎಷ್ಟು ಏರಿಕೆ ಆಗಿದೆ ಗೊತ್ತಾ?

ಮತ್ತೆ ಏರಿಕೆ ಕಂಡ ಬಂಗಾರ: ಇಂದು ಚಿನ್ನದ ಬೆಲೆ ಎಷ್ಟು ಏರಿಕೆ...

ನವರಾತ್ರಿಯ ಆರನೇ ದಿನ (ಷಷ್ಠೀ ತಿಥಿ) ಪೂಜಿಸಲ್ಪಡುವ ದೇವಿ ಮಾ ಕಾತ್ಯಾಯನಿ ಕಥೆ !

ನವರಾತ್ರಿಯ ಆರನೇ ದಿನ (ಷಷ್ಠೀ ತಿಥಿ) ಪೂಜಿಸಲ್ಪಡುವ ದೇವಿ ಮಾ ಕಾತ್ಯಾಯನಿ...