ಗೋಡೆ ಒಡೆದು ಜೈಲಿನಿಂದ 200ಕ್ಕೂ ಹೆಚ್ಚು ಖೈದಿಗಳು ಎಸ್ಕೇಪ್… ನಾಗರೀಕರಿಗೆ ವಿಶೇಷ ಸಂದೇಶ!
ಇಸ್ಲಾಮಾಬಾದ್:- ಗೋಡೆ ಒಡೆದು ಜೈಲಿನಿಂದ 200ಕ್ಕೂ ಹೆಚ್ಚು ಖೈದಿಗಳು ಎಸ್ಕೇಪ್ ಆಗಿರುವ ಘಟನೆ ಕರಾಚಿಯ ಜಿಲ್ಲಾ ಕಾರಾಗೃಹದಲ್ಲಿ ಜರುಗಿದೆ. ನಗರದಲ್ಲಿ ಸರಣಿ ಕಂಪನಗಳಿಂದ ಉಂಟಾದ ಅವ್ಯವಸ್ಥೆಯ ಮಧ್ಯೆ ಈ ತಪ್ಪಿಸಿಕೊಳ್ಳುವಿಕೆ ಸಂಭವಿಸಿದೆ ಎಂದಿದ್ದಾರೆ. ಹೀಗೆ ಜೈಲಿನಿಂದ ತಪ್ಪಿಸಿಕೊಂಡ ಖೈದಿಗಳಲ್ಲಿ 20ಕ್ಕೂ ಹೆಚ್ಚು ಮಂದಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಆದರೆ ಉಳಿದವರನ್ನು ತಕ್ಷಣವೇ ಪತ್ತೆಹಚ್ಚಲು ಮತ್ತು ಬಂಧಿಸಲು ಪ್ರಯತ್ನಗಳು ಮುಂದುವರೆದಿವೆ.
ನಾಗರಿಕರು ಖೈದಿಗಳಿಗೆ ಯಾರು ಆಶ್ರಯ ನೀಡಬಾರದು, ಯಾರು ಮನೆಯಿಂದ ಹೊರಬಾರದಂತೆ ಜನರಿಗೆ ಪೋಲಿಸರು ಎಚ್ಚರಿಕೆ ಕೊಟ್ಟಿದ್ದಾರೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ವರದಿ ಮಾಡಬೇಕು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಬೆನ್ನಲ್ಲೇ ಜೈಲಿನ ಡಿಐಜಿ ಹಸನ್ ಸಾಹೇತು ಮತ್ತು ಸಿಂಧ್ ರೇಂಜರ್ಸ್ ಮಹಾನಿರ್ದೇಶಕ ಮೇಜರ್ ಜನರಲ್ ಮುಹಮ್ಮದ್ ಶಮ್ರೇಜ್ ಕೂಡ ಜೈಲಿಗೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಪ್ರಾಥಮಿಕ ತನಿಖೆಯಲ್ಲಿ ಜೈಲು ನಿರ್ವಹಣೆ ಮತ್ತು ಆಂತರಿಕ ಭದ್ರತೆಯಲ್ಲಿ ಗಂಭೀರ ಲೋಪಗಳು ಕಂಡುಬಂದಿವೆ.