No menu items!
21.7 C
Munich
Thursday, July 23, 2026

RCB ಹುಡುಗರೇ ಟ್ರೋಫಿ ಗೆದ್ದುಕೊಂಡು ತವರಿಗೆ ಬನ್ನಿ: ಡಿಸಿಎಂ ಶುಭ ಹಾರೈಕೆ

Must read

RCB ಹುಡುಗರೇ ಟ್ರೋಫಿ ಗೆದ್ದುಕೊಂಡು ತವರಿಗೆ ಬನ್ನಿ: ಡಿಸಿಎಂ ಶುಭ ಹಾರೈಕೆ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ನಡೆಯಲಿರುವ ಐಪಿಎಲ್ 2025ರ ಅಂತಿಮ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ.
ಆರ್ಸಿಬಿ ಹುಡುಗರೇ ಟ್ರೋಫಿ ಗೆದ್ದುಕೊಂಡು ತವರಿಗೆ ಬನ್ನಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಆರ್ಸಿಬಿ ತಂಡದ ಜೆರ್ಸಿ ಧರಿಸಿ ಮಾತನಾಡಿದ್ದು, ಇಂತಹ ಅದ್ಭುತ ದಿನಕ್ಕಾಗಿ ಕಳೆದ 18 ವರ್ಷಗಳಿಂದ ಕಾತುರದಿಂದ ಕಾಯುತ್ತಿದ್ದೇವೆ.
ಟ್ರೋಫಿಗಾಗಿ ಸಾಕಷ್ಟು ಶ್ರಮ ಪಟ್ಟು ಆರ್ಸಿಬಿ ಕೊನೆಗೆ ಐಪಿಎಲ್ನಲ್ಲಿ ಫೈನಲ್ ತಲುಪಿದೆ. ಇಂದು ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಖಾಡಕ್ಕೆ ಇಳಿಯುತ್ತಿದೆ. ಇಡೀ ರಾಜ್ಯವೆಲ್ಲಾ ಟ್ರೋಫಿ ಗೆದ್ದು ಬರಲಿ ಎಂದು ಆರ್ಸಿಬಿ ತಂಡದ ಹಿಂದೆ ನಿಂತಿದೆ. ಆ ಅದ್ಭುತ ಕ್ಷಣವನ್ನು ಸಾಧಿಸಿ ತೋರಿಸಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

- Advertisement -spot_img

More articles

- Advertisement -spot_img

Latest article