ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ: ನಟಿ ರನ್ಯಾ ರಾವ್ ಜೊತೆಗಿದ್ದ ಗೆಳಯ ಅರೆಸ್ಟ್
ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ರನ್ಯಾ ರಾವ್ ಅವರನ್ನ ಬಂಧಿಸಿ DRI ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ದುಬೈನಲ್ಲಿ ರನ್ಯಾ ರಾವ್ ಜೊತೆಗಿದ್ದ ಆಕೆಯ ಗೆಳೆಯ, ಸ್ಟಾರ್ ಹೋಟೆಲ್ ಮಾಲೀಕನ ಮೊಮ್ಮಗನನ್ನು ಅರೆಸ್ಟ್ ಮಾಡಿದ್ದಾರೆ. ತರುಣ್ ರಾಜು ಬಂಧಿತ ಆರೋಪಿಯಾಗಿದ್ದು, ಇಂದು ಬೆಳಗಿನ ಜಾವ ಆರೋಪಿಯನ್ನು ಕೋರ್ಟ್‌ಗೆ ಹಾಜರು ಪಡಿಸಿರುವ ಅಧಿಕಾರಿಗಳು ಅಧಿಕೃತವಾಗಿ ಬಂಧಿಸಿದ್ದಾರೆ. ಕಳೆದ 2 ದಿನದಿಂದ ರನ್ಯಾ ಗೆಳೆಯ ತರುಣ್ ರಾಜು ಅವರನ್ನ DRI ವಿಚಾರಣೆ ನಡೆಸಿದೆ. ಇನ್ನೂ ಡಿಆರ್ಐ ಕಸ್ಟಡಿಯಲ್ಲಿರುವ ನಟಿ ರನ್ಯಾ ರಾವ್‌ಗೆ ಇಂದು 3 ದಿನದ ಕಸ್ಟಡಿ ಅವಧಿ ಅಂತ್ಯವಾಗುತ್ತಿದೆ.