ಗ್ರಾಮೀಣ ರೋಜ್ ಗಾರ್ ಯೋಜನೆಯಲ್ಲಿ ಕೆಲಸ ಮಾಡಲು ಅರ್ಜಿ ಸಲ್ಲಿಸಿ

0
35

ಗ್ರಾಮೀಣ ರೋಜ್‌ಗಾರ್ ಕಲ್ಯಾಣ್ ಸಂಸ್ಥಾನ್ ಕರ್ನಾಟಕ ಯೋಜನೆಯಡಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಕರೆದಿತ್ತು. ಅರ್ಜಿ ಸಲ್ಲಿಕೆ ದಿನಾಂಕವನ್ನು 15 ಜುಲೈ 2021ರ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಜಿಲ್ಲಾ ಸಂಯೋಜಕ ಪ್ರತಿ ಜಿಲ್ಲೆಗೆ 1 ಹುದ್ದೆ. ಬ್ಲಾಕ್ ಸಂಯೋಜಕರು ಪ್ರತಿ ಬ್ಲಾಕ್‌ಗೆ 1 ಹುದ್ದೆ. ಕಂಪ್ಯೂಟರ್ ಆಪರೇಟರ್ ಪ್ರತಿ ಬ್ಲಾಕ್‌ಗೆ 1 ಹುದ್ದೆ. ಬ್ಲಾಕ್ ಮೇಲ್ವಿಚಾರಕ ಪ್ರತಿ 4 ಬ್ಲಾಕ್‌ಗೆ ಒಂದು ಹುದ್ದೆಯನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.


18 ರಿಂದ 37 ವರ್ಷದ ವಯೋಮಿತಿಯ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು. ಎಸ್‌ಸಿ/ ಎಸ್‌ಟಿ/ ಅಂಗವಿಕಲ ಅಭ್ಯರ್ಥಿಗಳಿಗೆ ಐದು ವರ್ಷಗಳ ವಿನಾಯಿತಿಯನ್ನು ನೀಡಲಾಗಿದೆ.
ಜಿಲ್ಲಾ ಮತ್ತು ಬ್ಲಾಕ್ ಮಟ್ಟದಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಕೆಲಸ ಮಾಡಬೇಕು. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.


ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು 320 ರೂ. ಶುಲ್ಕವನ್ನು ಪಾವತಿಸಬೇಕು. 170 ರೂ. ಶುಲ್ಕವನ್ನು ಎಸ್‌ಸಿ/ ಎಸ್‌ಟಿ/ ಅಂಗವಿಕಲ ಅಭ್ಯರ್ಥಿಗಳಿಗೆ ನಿಗದಿ ಮಾಡಲಾಗಿದೆ.
ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕು. ಪ್ರತಿ ಹುದ್ದೆಗೆ ಬೇರೆ ಬೇರೆ ದಿನ ಲಿಖಿತ ಪರೀಕ್ಷೆಗಳು ನಡೆಯಲಿವೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬರ್ +91 8130103364 , +917058007838

LEAVE A REPLY

Please enter your comment!
Please enter your name here