ಹಾಲಿವುಡ್ನ ಜನಪ್ರಿಯ ಸರಣಿ ಸಿನಿಮಾ ಅಂದ್ರೆ ಅದು ಫಾಸ್ಟ್ ಅಂಡ್ ಫ್ಯೂರಿಯಸ್. ಭರಪೂರ ಆ್ಯಕ್ಷನ್, ರೋಡ್ ಸ್ಟಂಟ್ಸ್ ಹಾಗೂ ವಿಭಿನ್ನ ಪಾತ್ರಗಳು ಜನರ ಮನಸ್ಸಿನಲ್ಲಿ ಉಳಿದು ಬಿಟ್ಟಿದೆ. ಇದೀಗ ಕನ್ನಡದಲ್ಲೂ ಸಿದ್ಧವಾಗ್ತಿದೆ. ಹೌದು ಹಾಲಿವುಡ್ ನ ಜನಪ್ರಿಯ ಸಿನಿಮಾ ಸರಣಿ ‘ಫಾಸ್ಟ್ ಅಂಡ್ ಫ್ಯೂರಿಯಸ್’ ಈಗ ಕನ್ನಡದಲ್ಲಿ ಬರುತ್ತಿದೆ. ಆಕ್ಷನ್ ಪ್ರಿಯರ ರೋಮಾಂಚಕ ಸಿನಿಮಾ ಸ್ಯಾಂಡಲ್ ವುಡ್ ಅಂಗಳಕ್ಕೆ ಕಾಲಿಟ್ಟಿದೆ. ‘ಫಾಸ್ಟ್ ಅಂಡ್ ಫ್ಯೂರಿಯಸ್’ ಸರಣಿಯ ಹೊಸ ಸಿನಿಮಾ ‘ಹೋಬ್ಬ್ಸ್ ಅಂಡ್ ಷಾ’ ಕನ್ನಡಕ್ಕೆ ಡಬ್ ಆಗುತ್ತಿದೆ.
ಕನ್ನಡ, ತಮಿಳು, ತೆಲುಗು, ಹಿಂದಿ, ಪಂಜಾಬಿ, ಬೆಂಗಾಲಿ, ಮರಾಠಿ, ಭೋಜಪೂರಿ, ಮಲೆಯಾಳಂ, ಗುಜರಾತಿ ಹೀಗೆ ಭಾರತದ ಹತ್ತು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಕನ್ನಡದಲ್ಲಿ ಡಬ್ಬಿಂಗ್ ವಿರುದ್ಧದ ಹೋರಾಟಗಳು ಕಡಿಮೆ ಆಗುತ್ತಿದ್ದಂತೆ, ಒಂದರ ನಂತರ ಒಂದು ಸಿನಿಮಾಗಳು ತೆರೆಗೆ ಅಪ್ಪಳಿಸುತ್ತಿವೆ. ‘ಫಾಸ್ಟ್ ಅಂಡ್ ಫ್ಯೂರಿಯಸ್’ ಸಿನಿಮಾದ ಹೊಸ ಪೋಸ್ಟರ್ ಗಳು ಈಗಾಗಲೇ ಬಿಡುಗಡೆಯಾಗಿದ್ದು ಕ್ಯೂರಿಯಾಸಿಟಿ ಹೆಚ್ಚಿಸಿ. ಡೇವಿಡ್ ಲೇಯ್ತ್ಚ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು ದ್ವಾಯ್ನ್ ಜಾನ್ಸನ್ ಹಾಗೂ ಜಾಸನ್ ಸತತಂ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಫಾಸ್ಟ್ ಅಂಡ್ ಫ್ಯೂರಿಯಸ್’ ಸರಣಿಯ 11ನೇ ಸಿನಿಮಾ ಇದಾಗಿದ್ದು ಆಗಸ್ಟ್ನಲ್ಲಿ ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.
ಚಂದನವನಕ್ಕೂ ಕಾಲಿಡಲಿದೆ ಹಾಲಿವುಡ್ ಸಿನಿಮಾ
Date: