ಚಂದನವನದಲ್ಲಿ ‘ಜೋಗಿ’ ಜಾತ್ರೆ..‌ ಶಿವಣ್ಣನಿಗೆ ಅಭಿಮಾನಿಗಳಿಂದ ಹೊಸ ಬಿರುದು..

Date:

ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಜೋಗಿ. ಇದೀಗ ಜೋಗಿ ಸಿನಿಮಾ ಒಂದೂವರೆ ದಶಕ ಪೂರೈಸಿದೆ‌. 2005 ರ ಆಗಸ್ಟ್ 19ರಂದು ರಿಲೀಸ್ ಆಗಿದ್ದ ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ‌ ಹೊಸ ಅಲೆಯನ್ನೇ ಸೃಷ್ಟಿಸಿತ್ತು. ಕರಿಯ, ಎಕ್ಸ್ ಕ್ಯೂಸ್ ಮಿ ನಂತಹ ಸೂಪರ್ ಹಿಟ್ ಸಿನಿಮಾ ನೀಡಿದ್ದ ಪ್ರೇಮ್ ‘ಜೋಗಿ’ ಅನ್ನೋ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟಿದ್ದರು. ಅಂದಿನಿಂದ ಪ್ರೇಮ್ ಜೋಗಿ ಪ್ರೇಮ್ ಆಗಿ ಹ್ಯಾಟ್ರಿಕ್ ಡೈರೆಕ್ಟರ್ ಆದರು.

ತಾಯಿ ಮಗನ ಸೆಂಟಿಮೆಂಟ್ ಇರೋ ಜೋಗಿ ಸಿನಿಮಾ ಕನ್ನಡಿಗರ ಮನ ಗೆದ್ದಿದ್ದಲ್ಲದೇ, ಇಡೀ ಚಿತ್ರರಂಗದಲ್ಲಿ‌ ದಾಖಲೆಗಳ ಮೇಲೆ ದಾಖಲೆ ಸೃಷ್ಟಿಸಿತ್ತು. ಚಂದನವನದಲ್ಲಿ ಮಾಸ್ ಸಿನಿಮಾಗಳಿಗೆ ‘ಓಂಕಾರ’ ಬರೆದಿದ್ದ ಕರುನಾಡ ಚಕ್ರವರ್ತಿ ಶಿವರಾಜ್ ‌ಕುಮಾರ್ ಜೋಗಿಯಾಗಿ ಕಾಣಿಸಿಕೊಂಡು ಕೋಟ್ಯಂತರ ತಾಯಂದಿರ ಮನ ಗೆದ್ದಿದ್ದರು. ತಾಯಿಯಾಗಿ‌ ಅರುಂಧತಿ ನಾಗ್ ಎಲ್ಲರ ಮನಮಿಡಿಯುವಂತೆ ಮಾಡಿದರೆ, ಮಗನಾಗಿ ಶಿವಣ್ಣ‌ ಮನೋಜ್ಞ ಅಭಿನಯ ನೀಡಿದರು. ಅಂದು ಶಿವಣ್ಣನ ನಟನೆ ಕಂಡು ಸ್ವತಃ ವರನಟ ಡಾ.ರಾಜ್ ಕುಮಾರ್ ಅವರೇ ಮೌನಕ್ಕೆ ಶರಣಾಗಿದ್ದರಂತೆ.

https://twitter.com/OnlyShivanna/status/1295726645475778561?s=20

ಸ್ಯಾಂಡಲ್ ವುಡ್ ನಲ್ಲಿ ಇತಿಹಾಸ ಬರೆದ ಜೋಗಿ ಸಿನಿಮಾ ಮರೆಯುವ ಮಾತೇ ಇಲ್ಲ ಬಿಡಿ. ಇದೀಗ ಜೋಗಿ ಸಿನಿಮಾ ಒಂದೂವರೆ ದಶಕ ಪೂರೈಸಿದೆ.‌ ಹೀಗಾಗಿ ಹದಿನೈದು ವರ್ಷದ ಸಂಭ್ರಮಕ್ಕೆ ಕಾಮನ್ ಡಿಪಿ ಬಿಡುಗಡೆ ಮಾಡಿದೆ ಶಿವರಾಜ್ ಕುಮಾರ್ ಅಭಿಮಾನಿಗಳ ಬಳಗ.

ಕಾಮನ್ ಡಿಪಿ ಮೇಲ್ಭಾಗದಲ್ಲಿ ಗಾಡ್ ಆಫ್ ಮಾಸ್ ಡಾ.ಶಿವರಾಜ್ ಕುಮಾರ್ ಅಂತಾ ಬರೆಯಲಾಗಿದೆ. ಈ ಮೂಲಕ ಶಿವಣ್ಣನಿಗೆ ಹೊಸ ಟೈಟಲ್ ಕೊಟ್ಟಿದ್ದಾರೆ ಅಭಿಮಾನಿಗಳು. ಹೌದು, ಕನ್ನಡ ಚಿತ್ರರಂಗದಲ್ಲಿ ಮಾಸ್ ಲೀಡರ್ ಆಗಿರುವ ಶಿವಣ್ಣ ಇದೀಗ ಗಾಡ್ ಆಫ್ ಮಾಸ್ ಆಗಿದ್ದಾರೆ. ಜೋಗಿ ಸಿನಿಮಾದಲ್ಲಿ ಶಿವಣ್ಣ ಲಾಂಗ್ ಹಿಡಿದು ಕೊಟ್ಟ ಎಂಟ್ರಿಗೆ ಅಂದು ಥಿಯೇಟರ್ ನಲ್ಲಿ ಸುರಿದ ಶಿಳ್ಳೆ, ಚಪ್ಪಾಳೆಗಳೆಷ್ಟೋ, ಹೀಗಾಗಿ ಹ್ಯಾಟ್ರಿಕ್ ಹೀರೋಗೆ ಅವರ ಅಭಿಮಾನಿಗಳು ಗಾಡ್ ಆಫ್ ಮಾಸ್ ಅನ್ನೋ ಟೈಟಲ್ ಕೊಟ್ಟಿದ್ದಾರೆ. ಸೆಂಚುರಿ ಸ್ಟಾರ್, ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ ಮುಂತಾದ ಬಿರುದುಗಳಿಂದ ಶಿವಣ್ಣರನ್ನ ಅಭಿಮಾನಿಗಳು ಕರೆಯುತ್ತಿದ್ದಾರೆ. ಇನ್ಮುಂದೆ ಗಾಡ್ ಆಫ್ ಮಾಸ್ ಎನ್ನಿಸಿಕೊಳ್ಳಲಿದ್ದಾರೆ ಜೋಗಯ್ಯ.

ಇನ್ನೂ ಶಿವಣ್ಣನ ಜೊತೆಗೆ ಜೆನ್ನಿಫರ್ ಕೊತ್ವಾಲ್ ನಾಯಕಿಯಾಗಿ ನಟಿಸಿದರು. ಚಿತ್ರದ ಹಾಡು, ಫೈಟ್, ಡ್ಯಾನ್ಸ್, ಹೀಗೆ ಎಲ್ಲವೂ ಸಹ ಅದ್ಭುತವಾಗಿತ್ತು. ಇನ್ನೂ ಚಿತ್ರದ ಉತ್ತಮ ಸಂಗೀತ ಸಹ ಅಂದು ದಾಖಲೆ ಸೃಷ್ಟಿಸಿತ್ತು. ತಾಯಿ ಮಗನ ಸೆಂಟಿಮೆಂಟ್ ಇರೋ ಬೇಡುವೆನು ವರವನ್ನು ಹಾಡು ಇಂದಿಗೂ ಎಲ್ಲರ ಮನ ಮುಟ್ಟುವಂತಿದೆ. ಕಾಲಗಳೇಷ್ಟೇ ಉರುಳಬಹುದು, ಯುಗಗಳೇ ಕಳೆಯಬಹುದು. ಆದರೆ, ತಾಯಿ ಪ್ರೀತಿ ಮಾತ್ರ ಯಾವತ್ತು ಬದಲಾಗೋಲ್ಲ ಅನ್ನೋಕೆ ಜೋಗಿ ಸಿನಿಮಾನೇ ಸಾಕ್ಷಿ. 

https://twitter.com/directorprems/status/1295999224006365185?s=20

ಇದೀಗ ಚಿತ್ರಕ್ಕೆ 15 ವರ್ಷ ತುಂಬಿದ ಸಂತಸದಲ್ಲಿ ಶಿವರಾಜ್ ಕುಮಾರ್ ಅಭಿಮಾನಿಗಳು ಕಾಮನ್ ಡಿಪಿಯನ್ನು ರಿಲೀಸ್ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಜೋಗಿ ಜಾತ್ರೆ ಜೋರಾಗಿದೆ. ಇನ್ನು ಇದೇ ಸಂತಸ, ಸಂಭ್ರಮವನ್ನ ನಿರ್ದೇಶಕ ಪ್ರೇಮ್ ಶಿವಣ್ಣನ ಮನೆಗೆ ಭೇಟಿ ನೀಡಿ ಸಿಹಿ ಹಂಚಿ ವಿಶ್ ಮಾಡೋ ಮೂಲಕ ಸಂಭ್ರಮಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಭೈರಪ್ಪ ಅವರದ್ದು ಹಿಮಾಲಯದಷ್ಟೇ ಎತ್ತರದ ವ್ಯಕ್ತಿತ್ವ: ನಟ ಅನಂತನಾಗ್‌ ಭಾವುಕ

ಭೈರಪ್ಪ ಅವರದ್ದು ಹಿಮಾಲಯದಷ್ಟೇ ಎತ್ತರದ ವ್ಯಕ್ತಿತ್ವ ಎಂದು ನಟ ಅನಂತನಾಗ್‌ ಭಾವುಕರಾದರು. ನವರಾತ್ರಿಯ...

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ!

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ! ಬೆಂಗಳೂರು: ಪ್ರಸಿದ್ಧ ಕನ್ನಡ...

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ!

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ! ಬೆಂಗಳೂರು:- ಬೆಂಗಳೂರಿಗರಿಗಾಗಿ ನಿರ್ಮಿಸಿದ...

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಬೆಂಗಳೂರು:...