ಚಂದನ್ ಶೆಟ್ಟಿ ಅವರು ಮೊನ್ನೆಯಷ್ಟೇ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ ತಮ್ಮ ಗೆಳತಿ ನಿವೇದಿತಾ ಗೌಡ ಅವರಿಗೆ ಯುವ ದಸರಾ ವೇದಿಕೆಯ ಮೇಲೆ ಲವ್ ಪ್ರಪೋಸ್ ಮಾಡಿ ಇದೀಗ ದೊಡ್ಡ ಮಟ್ಟದ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇನ್ನು ಹಲವಾರು ವರ್ಷಗಳಿಂದ ಅಚ್ಚುಕಟ್ಟಾಗಿ ನಡೆದುಕೊಂಡು ಬಂದಿದ್ದ ಯುವ ದಸರಾ ವೇದಿಕೆಯ ಮೇಲೆ ಚಂದನ್ ಶೆಟ್ಟಿ ಅವರು ಮಾಡಿದ ಈ ಒಂದು ಕೆಲಸದಿಂದ ದಸರಾ ಪ್ರಿಯರ ಕೆಂಗಣ್ಣಿಗೆ ಗುರಿಯಾದರು.
ಇನ್ನು ಚಂದನ್ ಶೆಟ್ಟಿ ಅವರು ಮಾಡಿದ ಈ ಒಂದು ಕೆಲಸವನ್ನು ವಿರೋಧಿಸಿ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಒಟ್ಟು ನಾಲ್ಕು ಕೇಸ್ ಗಳನ್ನು ವಿವಿಧ ಸಂಘಟನೆಯ ಅಧ್ಯಕ್ಷರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಒಂದು ಒಳ್ಳೆಯ ವೇದಿಕೆಯನ್ನು ತಮ್ಮ ವೈಯಕ್ತಿಕ ವಿಚಾರಕ್ಕೆ ಉಪಯೋಗಿಸಿಕೊಂಡದ್ದು ತಪ್ಪು ಎಂಬ ದೂರಿನಡಿ ಕೇಸ್ ದಾಖಲಿಸಲಾಗಿದ್ದು , ಚಂದನ್ ಶೆಟ್ಟಿ ಅವರಿಗೆ ಪೊಲೀಸ್ ನೋಟಿಸ್ ಕಳುಹಿಸಲಾಗಿದೆ ಎನ್ನಲಾಗುತ್ತಿದೆ.