ಇದೇ ತಿಂಗಳ ಒಂದನೇ ತಾರೀಕಿನಿಂದ ಜಾರಿಯಾಗಿರುವ ಹೊಸ ಸಂಚಾರ ನಿಯಮ ಇದೀಗ ದೇಶವ್ಯಾಪಿ ಚರ್ಚೆಗೆ ಕಾರಣವಾಗಿದೆ ಮತ್ತು ವಾಹನ ಚಲಾಯಿಸುವವರು ತುಂಬಾ ಜಾಗರೂಕರಾಗಿ ಇರುವಂತೆ ಮಾಡಿದೆ. ಯಾವುದೇ ಒಂದು ಡಾಕ್ಯುಮೆಂಟ್ ಮಿಸ್ ಆದರೂ ಸಹ ಸಾವಿರಗಟ್ಟಲೆ ಫೈನ್ ಕಟ್ಟುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ವಾಹನ ಚಾಲನೆ ಮಾಡುವವರು ತುಂಬಾ ಮುಂಜಾಗ್ರತೆ ವಹಿಸಿ ವಾಹನ ಹತ್ತುವ ಪರಿಸ್ಥಿತಿ ಬಂದಿದೆ.
ಇನ್ನು ಇತ್ತೀಚೆಗೆ ವಿಧಿಸಲಾಗುತ್ತಿರುವ ದಂಡವನ್ನು ಹೊರತುಪಡಿಸಿ ಇದೀಗ ಹೊಸದೊಂದು ತಂಡದ ಹೆಸರು ಕೇಳಿ ಬರುತ್ತಿದ್ದು ಚಪ್ಪಲಿ ಇಲ್ಲದೆ ಗೇರ್ ಹೊಂದಿರುವ ದ್ವಿಚಕ್ರ ವಾಹನವನ್ನು ಚಾಲನೆ ಮಾಡಿದರೆ ಒಂದು ಸಾವಿರ ರೂಪಾಯಿ ದಂಡ ತೆರಬೇಕಾಗುತ್ತದೆ. ಹೌದು ಸಂಚಾರಿ ನಿಯಮದ ಪ್ರಕಾರ ಗೇರ್ ಬೈಕ್ ಅನ್ನು ಚಪ್ಪಲಿ ಹಾಕಿಕೊಂಡು ಚಲಾಯಿಸಿದರೆ ಅಪಘಾತ ಆಗುವ ಸಂಭವ ಹೆಚ್ಚಂತೆ ಹೀಗಾಗಿ ಈ ಹೊಸ ದಂಡವನ್ನು ಆದಷ್ಟು ಬೇಗ ಜಾರಿಗೆ ತರಲಿದೆಯಂತೆ.