ಚಳಿಗಾಲದಲ್ಲಿ ಕಡ್ಡಾಯವಾಗಿ ಸೇವಿಸಬೇಕಾದ ಹಣ್ಣು ಇದು

Date:

ಪರಂಗಿ ಅಥವಾ ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ಉತ್ತಮವಾದ ಹಲವು ಅಂಶಗಳನ್ನು ಹೊಂದಿದೆ. ಹೀಗಾಗಿಯೇ ಇದನ್ನು ಮಕ್ಕಳಿಂದ ಹಿಡಿದು ವೃದ್ಧರು ಸಹ ಯಾವುದೇ ಹಿಂಜರಿಕೆಯಿಲ್ಲದೆ ತಿನ್ನಬಹುದು. ವಿಶೇಷವಾಗಿ ಚಳಿಗಾಲದಲ್ಲಿ ಪಪ್ಪಾಯಿ ಸೇವನೆ ಅತ್ಯುತ್ತಮ ಎನ್ನುತ್ತಾರೆ ವೈದ್ಯರು.

ಪಪ್ಪಾಯಿ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೌಷ್ಠಿಕಾಂಶಗಳಿವೆ. ಅಲ್ಲದೆ ಪಪ್ಪಾಯಿಯಲ್ಲಿರುವ ಅಂಶ, ವಾತ ಮತ್ತು ಕಫವನ್ನು ಪರಿಣಾಮಕಾರಿಯಾಗಿ ಸಮತೋಲನಗೊಳಿಸುತ್ತದೆ. ಚಳಿಗಾಲದಲ್ಲಿ ಪಪ್ಪಾಯಿ ಹಣ್ಣಿನ ಸೇವನೆ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ.

ಚಳಿಗಾಲದಲ್ಲಿ ಪಪ್ಪಾಯಿ ಸೇವನೆ ಮಲಬದ್ಧತೆಯ ಸಮಸ್ಯೆಗಳನ್ನು ಪರಿಹರಿಸುತ್ತದೆ. ಯಾಕೆಂದರೆ ಪಪ್ಪಾಯಿ ಹಣ್ಣಿನಲ್ಲಿರುವ ಎರಡು ಅದ್ಭುತ ಕಿಣ್ವಗಳಾದ ಪಾಪೈನ್ ಮತ್ತು ಚೈಮೊಪಪೈನ್ ಪ್ರೋಟೀನ್‌ಗಳನ್ನು ಜೀರ್ಣಿಸಿಕೊಳ್ಳುತ್ತವೆ. ಹೀಗಾಗಿ ಅಜೀರ್ಣ ಸಮಸ್ಯೆ ಕಾಡುವುದಿಲ್ಲ. ಸುಲಭವಾಗಿ ಆಹಾರ ಜೀರ್ಣವಾಗುವುದರಿಂದ ಮಲಬದ್ಧತೆಯ ಸಮಸ್ಯೆ ಕಾಡುವುದಿಲ್ಲ.

ಪಪ್ಪಾಯಿ (Papaya)ಯಲ್ಲಿರುವ ಪೌಷ್ಟಿಕಾಂಶದ ಪ್ರಮಾಣದ ಬಗ್ಗೆ ಹೇಳುವುದಾದರೆ ಮಧ್ಯಮ ಗಾತ್ರದ ಪಪ್ಪಾಯಿಯಲ್ಲಿ ನಿಮ್ಮ ದೇಹಕ್ಕೆ ಅಗತ್ಯವಿರುವ 200% ಕ್ಕಿಂತ ಹೆಚ್ಚು ವಿಟಮಿನ್ ಸಿ ಲಭ್ಯವಿರುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲೂ ಪಪ್ಪಾಯಿ ಹೆಚ್ಚು ಸಹಕಾರಿಯಾಗಿದೆ. ಪ್ರತಿನಿತ್ಯ ನಾಲ್ಕೈದು ತುಂಡು ಪಪ್ಪಾಯಿ ಹಣ್ಣನ್ನು ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಪಪ್ಪಾಯಿ ಹಣ್ಣಿನಲ್ಲಿ ಮೆಗ್ನೀಸಿಯಮ್, ವಿಟಮಿನ್ (Vitamin) ಎ, ಪೊಟ್ಯಾಸಿಯಮ್ ಮತ್ತು ಫೈಬರ್‌ನ ಅಂಶ ಅಧಿಕವಾಗಿದೆ. ಅಲ್ಲದೆ, ಪಪ್ಪಾಯಿ ಹಣ್ಣಿನ ಸೇವನೆ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪಪ್ಪಾಯಿ ಹಣ್ಣಿನಲ್ಲಿರುವ ಕ್ಯಾಲ್ಸಿಯಂ, ರಂಜಕ, ಪೊಟ್ಯಾಸಿಯಮ್, ಕಬ್ಬಿಣ ಮತ್ತು ವಿಟಮಿನ್ ಸಿ, ಇ ಮತ್ತು ಎ ಅಂಶಗಳು ಚರ್ಮ ರೋಗವನ್ನು ಬಗೆಹರಿಸುತ್ತದೆ.

ಪಪ್ಪಾಯಿ ಹಣ್ಣನ್ನು ಹೊರತುಪಡಿಸಿ, ಪಪ್ಪಾಯಿಯ ಎಲೆಗಳು ಮತ್ತು ಬೀಜಗಳು ಸಹ ಹಲವಾರು ಆರೋಗ್ಯ (Health) ಪ್ರಯೋಜನಗಳನ್ನು ಹೊಂದಿವೆ. ಪಪ್ಪಾಯಿ ಹಣ್ಣಿನ ಎಲೆಗಳು ದೇಹದಲ್ಲಿ ಪ್ಲೇಟ್‌ಲೆಟ್ ಸಂಖ್ಯೆಯನ್ನು ಹೆಚ್ಚಿಸಲು ಉತ್ತಮವಾಗಿದೆ. ಅಲ್ಲದೆ ಈ ಎಲೆಗಳು ಮಲೇರಿಯಾ ವಿರೋಧಿಯಾಗಿ ಕೆಲಸ ಮಾಡುತ್ತದೆ. ಡೆಂಗ್ಯೂ ಜ್ವರ ಮತ್ತು ಇತರ ಕಾಯಿಲೆಗಳ ವಿರುದ್ಧ ಹೋರಾಡಲು ಪಪ್ಪಾಯಿ ಮರದ ಎಲೆಗಳು ಅತ್ಯುತ್ತಮ ಮನೆಮದ್ದಾಗಿದೆ ಎಂದು ಆಯುರ್ವೇದ (Ayurveda) ತಜ್ಞರು ಹೇಳುತ್ತಾರೆ.

ಇವತ್ತಿನ ದಿನಗಳಲ್ಲಿ ಹೆಚ್ಚಾಗಿ ಜನರು ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ಇದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಿಸಲು ಕಾರಣವಾಗುತ್ತದೆ. ದೇಹದಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚುವುದರಿಂದ ಹೃದಯ ಅಪಧಮನಿಗಳಲ್ಲಿ ರಕ್ತ ಸಂಚಾರಕ್ಕೆ ಅಡಚಣೆಯುಂಟಾಗುತ್ತದೆ. ಹೀಗಾದ ಸಂದರ್ಭಗಳಲ್ಲಿ ಯಾವ ಬೇಕಾದರೂ ಹೃದಯಾಘಾತ (Heart attack) ಆಗಬಹುದು. ಹೃದಯಕ್ಕೆ ಸಂಬಂಧಿಸಿದ ಹಲವು ಕಾಯಿಲೆಗಳಿಗೂ ಇದು ಕಾರಣವಾಗುತ್ತದೆ. ಪಪ್ಪಾಯಿ ಎಲೆಗಳ ಸೇವನೆ ಇಂಥಹಾ ಸಮಸ್ಯೆಗೆ ಪರಿಹಾರವಾಗಿದೆ.

ಕಣ್ಣುಗಳ ಚಿಕಿತ್ಸೆ ಮಾಡಿಕೊಂಡು ವಿಶ್ರಾಂತಿ ತೆಗೆದುಕೊಳ್ಳುತಿರುವವರು ಪಪ್ಪಾಯಿ ಸೇವಿಸುವುದು ಒಳ್ಳೆಯದು. ಪರಂಗಿ ಹಣ್ಣಿನಲ್ಲಿ ಕಣ್ಣುಗಳ ಒಳಪದರವನ್ನು ತಂಪಾಗಿ ನೋಡಿಕೊಂಡು ದೃಷ್ಟಿಯನ್ನು ಹೆಚ್ಚು ಸ್ಪಷ್ಟಗೊಳಿಸುವ ಅಂಶವಿದೆ. ಇದರಿಂದ ಕಣ್ಣಿನ ಪೊರೆಯ ಸಮಸ್ಯೆಯೂ ಕಾಣಿಸಿಕೊಳ್ಳುವುದಿಲ್ಲ. ಪಪ್ಪಾಯಿ ಹಣ್ಣಿನಲ್ಲಿ ವಿಟಮಿನ್ ಸಿ ಅತ್ಯಧಿಕ ಪ್ರಮಾಣದಲ್ಲಿರುವ ಕಾರಣ ಆರ್ಥೈಟಿಸ್ ಸಮಸ್ಯೆಗೆ ಪರಿಹಾರ ಸಿಗುತ್ತದೆ. ನಿಯಮಿತವಾಗಿ ಪಪ್ಪಾಯಿ ಹಣ್ಣು ಸೇವಿಸುವವರಲ್ಲಿ ಮೂಳೆಗಳ ಸಮಸ್ಯೆ ಕಂಡುಬರುವುದು ಕಡಿಮೆ.

ಋತುಸ್ರಾವದ ಸಮಸ್ಯೆಗೂ ಪಪ್ಪಾಯಿ ಹಣ್ಣಿನ ಸೇವನೆ ಉತ್ತಮವಾಗಿದೆ. ಪಪ್ಪಾಯಿ ಹಣ್ಣಿನಲ್ಲಿರುವ ಪಪ್ಪಾಯಿನ್ ಎಂಬ ಅಂಶ ರಕ್ತ ಸಂಚಾರ ಸುಲಭವಾಗುವಂತೆ ಮಾಡುತ್ತದೆ. ಮುಟ್ಟಿನ ಅವಧಿಯಲ್ಲಿ ಕಂಡುಬರುವ ಹೊಟ್ಟೆ ನೋವು,ಅಧಿಕ ರಕ್ತಸ್ತ್ರಾವಕ್ಕೂ ಪಪ್ಪಾಯಿ ಹಣ್ಣಿನ ಸೇವನೆ ಉತ್ತಮಬಾಗಿದೆ.

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...