ಹುಬ್ಬಳ್ಳಿ: ಚಾಕುವಿನಿಂದ ಇರಿದು ದೇವಸ್ಥಾನದ ಪೂಜಾರಿಯ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಈಶ್ವರ ನಗರದಲ್ಲಿ ನಡೆದಿದೆ. ದೇವೇಂದ್ರಪ್ಪ ಹೊನ್ನಳಿ ಕೊಲೆಯಾಗಿರುವ ಪೂಜಾರಿಯಾಗಿದ್ದು, ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಪೂಜಾರಿ ಮೇಲೆ ಅಟ್ಯಾಕ್ ನಡೆದಿತ್ತು. ಅದೃಷ್ಟವಶಾತ್ ಆ ಸಮಯದಲ್ಲಿ ಪೂಜಾರಿ ಬದುಕಿ ಬಂದಿದ್ದರು. ಆದರೆ ನಿನ್ನೆ ದುಷ್ಕರ್ಮಿಗಳ ಇರಿತಕ್ಕೆ ಪೂಜಾರಿ ದೇವಪ್ಪಜ್ಜ ಸಾವನ್ನಪ್ಪಿದ್ದಾರೆ. ನವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಾಕುವಿನಿಂದ ಇರಿದು ದುಷ್ಕರ್ಮಿಗಳಿಂದ ಪೂಜಾರಿಯ ಬರ್ಬರ ಕೊಲೆ!
Date: