ಚಾಕುವಿನಿಂದ ಇರಿದು ಭಾವನಿಂದಲೇ ಬಾಮೈದನನ ಬರ್ಬರ ಹತ್ಯೆ!
ಬೆಂಗಳೂರು:- ಚಾಕುವಿನಿಂದ ಇರಿದು ಭಾವನಿಂದಲೇ ಬಾಮೈದನನ ಬರ್ಬರ ಹತ್ಯೆ ನಡೆದಿರುವ ಘಟನೆ ಬ್ಯಾಟರಾಯನಪುರ್ ಸ್ಯಾಟ್ ಲೈಟ್ ಬಸ್ ನಿಲ್ದಾಣ ಸಮೀಪದಲ್ಲಿ ಜರುಗಿದೆ. 46 ವರ್ಷದ ವೆಂಕಟಾಚಲಪತಿ ಹತ್ಯೆಗೊಳಗಾದ ಬಾವ ಎನ್ನಲಾಗಿದೆ. ಚಾಕುವಿನಿಂದ ಇರಿದು ಬಾಮೈದಾ ವಿಶ್ವನಾಥ್ ಹತ್ಯೆ ಮಾಡಿದ್ದಾನೆ. ಬ್ಯಾಟರಾಯನಪುರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಇದೀಗ ಆರೋಪಿಯನ್ನು ಬಂಧಿಸಿ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. ಕೊಲೆ ಆರೋಪಿ ವಿಶ್ವನಾಥ್ ವಶಕ್ಕೆ ಪಡೆದು ಬ್ಯಾಟರಾಯನಪುರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮಲ್ಲೇಶ್ವರಂ ನ ಸಬ್ ರಿಜಿಸ್ಟರ್ ಕಚೇರಿಯಲ್ಲಿ ವೆಂಕಟಾಚಲಪತಿ ಕೆಲಸ ಮಾಡ್ತಿದ್ದ. ಚಾಕುವಿನಿಂದ ಇರಿದು ಭಾವನನ್ನೆ ಬಾಮೈದ ವಿಶ್ವನಾಥ್ ಕೊಲೆ ಮಾಡಿದ್ದಾನೆ. ಬ್ಯಾಟರಾಯನಪುರ ಪೊಲೀಸರಿಂದ ತನಿಖೆ ಮುಂದುವರಿದಿದೆ.