ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಜೆಡಿಎಸ್ ಅಭ್ಯರ್ಥಿ ಜಿ.ಟಿ. ದೇವೇಗೌಡ ಎದುರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದರು. ಇದರಿಂದ ಅವರ ಮನಸಿನಲ್ಲಿ ನೋವು ಇರಬಹುದು. ಆದರೆ, ಅವರ ಸೋಲಿಗೆ ನಾನಾಗಲಿ ಅಥವಾ ಜಿ.ಟಿ. ದೇವೇಗೌಡ ಆಗಲಿ ಕಾರಣರಲ್ಲ ಎಂದು ಎಚ್ ಡಿ ದೇವೇಗೌಡ ತಿಳಿಸಿದ್ದಾರೆ.
ನಾನೂ ಸಹ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದೇನೆ, ಸಿದ್ದರಾಮಯ್ಯ ಅವರಿಗೂ ಅದರ ಅನುಭವ ಆಗಿದೆ ಅಷ್ಟೆ ಎಂದ ಅವರು ನಾನು ಕಳೆದ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗಿರಲಿಲ್ಲ. ಅಲ್ಲಿನ ಜನತೆ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದಾರೆ ಎಂದು ಹೇಳಿದ್ದಾರೆ.