ಬೆಂಗಳೂರು:- ಚಿಕ್ಕಬಾಣಾವರ-ಹೆಸರಘಟ್ಟ ಮುಖ್ಯರಸ್ತೆಯಲ್ಲಿ ಚಾಲಕನ ನಿರ್ಲಕ್ಷ್ಯಕ್ಕೆ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ.
ಮಧ್ಯರಾತ್ರಿ 1:30ರ ಸುಮಾರಿಗೆ ಹೈಡ್ರಾಲಿಕ್ ಏರಿಸಿಕೊಂಡು ಬಂದಿದ್ದ ಟಿಪ್ಪರ್ ಚಾಲಕ, ಲಾರಿ ಟಾಪ್‌ಗೆ ವೈರ್ ಸಿಕ್ಕಿಹಾಕಿಕೊಂಡಿದೆ. ಇದನ್ನೂ ಗಮನಿಸದೆ ಲಾರಿ ಚಲಾಯಿಸಿದ್ದರಿಂದ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಜಖಂಗೊಂಡಿದೆ.
ಲಾರಿಯಲ್ಲಿದ್ದ ಜಲ್ಲಿ ಹುಡಿ ಮುಖ್ಯರಸ್ತೆಯ ತುಂಬೆಲ್ಲಾ ಬಿದ್ದಿತ್ತು. ಮದ್ಯಪಾನ ಮಾಡಿ ಲಾರಿ ಚಲಾಯಿಸಿರುವ ಶಂಕೆ ಇದೆ. ಸದ್ಯ ಜೆಸಿಬಿ ಮುಖಾಂತರ ರಸ್ತೆ ತೆರವು ಮಾಡಲಾಗಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಟಿಪ್ಪರ್ ಹಾಗೂ ಚಾಲಕ ಮಣಿ ಎಂಬಾತನನ್ನು ಚಿಕ್ಕಬಾಣಾವರ ಪೊಲೀಸರು ವಶಕ್ಕೆ ಪಡೆದಿದ್ದಾರೆ.