ಚಾಲೆಂಜಿಂಗ್​ ಸ್ಟಾರ್ ದರ್ಶನ್ ಓಪನ್ ಚಾಲೆಂಜ್ ಮಾಡಿದ್ದು ಯಾವ ದೊಡ್ಡ ಸೆಲೆಬ್ರಿಟಿಗೆ ಗೊತ್ತಾ?

Date:

ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್. ಮಧ್ಯಾಹ್ನ ಫೇಸ್​ಬುಕ್​ ಲೈವ್​ ಬರ್ತೀನಿ. ಬಂದಾಗ ಎಲ್ಲಾನು ತಿಳಿಸುತ್ತೇನೆ ಎಂದು ಬೆಳಗ್ಗೆ ಟ್ವೀಟ್ ಮಾಡಿದ್ದರು. ಬಳಿಕ ಬೆಳಗ್ಗೆ 11.37ರ ವೇಳೆಗೆ ಸೆಲಿಬ್ರಿಟಿ ಚಾಲೆಂಜ್ @1 PM ಎಂದು ಟ್ವೀಟ್ ಮಾಡಿದ್ದರು. ಮಧ್ಯಾಹ್ನ 1 ಗಂಟೆಗೆ ದರ್ಶನ್ ಯಾರಿಗೆ ಯಾವ ಚಾಲೆಂಜ್ ಮಾಡ್ತಾರೆ ಎಂದು ಎಲ್ಲರೂ ಕಾದು ಕುಳಿತಿದ್ದರು. ಮೀಡಿಯದವರೆಲ್ಲರ ಕಣ್ಣು ದಚ್ಚು ಫೇಸ್​ಬುಕ್ ಪೇಜ್​ ಮೇಲೆಯೇ ಇತ್ತು. ದರ್ಶನ್ ತಾವು ಹೇಳಿದ ಟೈಮ್​ಗೆ ಫೇಸ್​ಬುಕ್​ನಲ್ಲಿ ವಿಡಿಯೋ ಹರಿ ಬಿಟ್ಟರು.
ದರ್ಶನ್ ಯಾವ ಸೆಲೆಬ್ರಿಟಿಗೆ ಚಾಲೆಂಜ್ ಮಾಡಿದ್ರು ಗೊತ್ತಾ? ದರ್ಶನ್ ಸೆಲೆಬ್ರಿಟಿ ಎಂದು ಕರೆದಿದ್ದು ತಮ್ಮ ಅಭಿಮಾನಿಗಳಿಗೆ. ನನ್ನನ್ನು ಸೆಲೆಬ್ರಿಟಿ ಅಂತೀರಾ… ನನಗೆ ನನ್ನ ಅಭಿಮಾನಿಗಳೇ ದೊಡ್ಡ ಸೆಲೆಬ್ರಿಟಿ ಎಂದು ದರ್ಶನ್ ಹೇಳಿದ್ದಾರೆ. ಅದಲ್ಲದೆ ಅವರು ಚಾಲೆಂಜ್ ಮಾಡಿದ್ದು ಅಭಿಮಾನಿಗಳಿಗೇ.. ಕುರುಕ್ಷೇತ್ರವನ್ನು ಎಲ್ಲರೂ ಕುಟುಂಬ ಸಮೇತ ನೋಡಿ. ಎಂಜಾಯ್ ಮಾಡಿ, ಗಲಾಟೆ ಮಾಡಬೇಡಿ ಎಂದು ದರ್ಶನ್ ಹೇಳಿದ್ದಾರೆ.
ಕುರುಕ್ಷೇತ್ರದಂತಹ ಸಿನಿಮಾ ಮಾಡುವುದೇ ಕಷ್ಟ. ಮುನಿರತ್ನ ಅವರು ಸಿನಿಮಾ ಮಾಡಿದ್ದಾರೆ. ಇಲ್ಲಿ ನಾನೊಬ್ಬನೇ ಅಲ್ಲ. ಅಪ್ಪಾಜಿ, ರವಿ ಸರ್, ಅರ್ಜುನ್ ಸರ್, ಶ್ರೀನಿವಾಸಮೂರ್ತಿ ಅವ್ರು, ನಿಖಿಲ್ ಎಲ್ಲರೂ ನಟಿಸಿದ್ದಾರೆ. ನನಗೆ ಕೊಡುವ ಮರ್ಯಾದೆಯನ್ನು ಪ್ರತಿಯೊಬ್ಬರಿಗೂ ನೀಡಿ. ಪೋಸ್ಟರ್ ಅಂಟಿಸಿಲ್ಲ, ಕಟೌಟ್ ನಿಲ್ಲಿಸಿಲ್ಲ ಎಂದು ಗಲಾಟೆ ಮಾಡ್ಬೇಡಿ. ಎಲ್ಲರೂ ಸಿನಿಮಾ ನೋಡಿ ಎಂದು ದರ್ಶನ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದು, ಇದೇ ತಮ್ಮ ಚಾಲೆಂಜ್ ಎಂದಿದ್ದಾರೆ.

Share post:

Subscribe

spot_imgspot_img

Popular

More like this
Related

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್ ಮೈಸೂರು: ಭೂಮಿ...

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್ ಮೈಸೂರು: ನಾಡದೇವತೆ ಚಾಮುಂಡೇಶ್ವರಿ...

ಶೈಲಪುತ್ರಿಯ ಆರಾಧನೆ ಹೇಗೆ ಗೊತ್ತಾ ?

ಶೈಲಪುತ್ರಿ ಪೂಜಾ ವಿಧಾನ ಹೇಗೆ ಗೊತ್ತಾ ? ನವರಾತ್ರಿ ಬಂದೆ ಬಿಡ್ತು, ಮೊದಲನೇ...

ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ

ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ ಬಾಗಲಕೋಟೆ: ಕೂಡಲಸಂಗಮ...