ಚಾ.ನಗರ 24 ಸಾವು ; ಕೊಟ್ಟ ಮಾತಿಗೆ ತಪ್ಪದ ಕಿಚ್ಚ!

Date:

ಕಳೆದ ವಾರ ಚಾಮರಾಜನಗರದ ಕೊವಿಡ್ ಸೆಂಟರ್ ನಲ್ಲಿ ಮಧ್ಯರಾತ್ರಿ ಆಕ್ಸಿಜನ್ ಕೊರತೆಯಿಂದಾಗಿ 24 ಮಂದಿ ಮೃತಪಟ್ಟಿದ್ದರು. ಈ ಸುದ್ದಿ ದೇಶದಾದ್ಯಂತ ವ್ಯಾಪಿಸಿತ್ತು, ಜನಪ್ರತಿನಿಧಿಗಳು, ವೈದ್ಯರು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಈ ಸಾವುಗಳು ಸಂಭವಿಸಿದ್ದು ಎಂಬುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಷಯವೇ..

 

 

ಇಷ್ಟೆಲ್ಲಾ ಸಾಲು ಸಾಲು ಸಾವುಗಳು ಸಂಭವಿಸಿದರೂ ಸಹ ಚಾಮರಾಜನಗರ ಜಿಲ್ಲಾಡಳಿತವಾಗಲಿ ಅಥವಾ ಸರ್ಕಾರವಾಗಲಿ ಮೃತ ಕುಟುಂಬದವರಿಗೆ ಯಾವುದೇ ರೀತಿಯ ಸಹಾಯ ಹಸ್ತವನ್ನು ಆಗಲಿ ಅಥವಾ ನೆರವನ್ನಾಗಲಿ ನೀಡಲು ಮುಂದೆ ಬರಲಿಲ್ಲ. ಮೃತಪಟ್ಟವರೆಲ್ಲ ಅವರ ಕುಟುಂಬಗಳಿಗೆ ಆಧಾರಸ್ತಂಭವಾಗಿದ್ದರು, ಹೀಗಾಗಿ ಅವರನ್ನು ಕಳೆದುಕೊಂಡ ಆ 24 ಕುಟುಂಬ ಅನಾಥವಾಯಿತು. ಹೀಗಾಗಿ ಸರ್ಕಾರ ಸಹಾಯ ಮಾಡುತ್ತೆ ಬಿಡು ಎಂದು ಸುಮ್ಮನೆ ಕೂರದ ಕಿಚ್ಚ ಸುದೀಪ್ ಚಾಮರಾಜನಗರದಲ್ಲಿ ಮೃತಪಟ್ಟ ಎಲ್ಲ ಕುಟುಂಬಗಳ ಮನೆಗಳಿಗೆ ಕಿಚ್ಚ ಚಾರಿಟಬಲ್ ಟ್ರಸ್ಟ್ ನ ಸದಸ್ಯರನ್ನು ಕಳುಹಿಸಿ ಯಾರು ಯಾರಿಗೆ ಯಾವ ಯಾವ ಸಹಾಯ ಬೇಕು ಎಂಬುದನ್ನು ತಿಳಿದುಕೊಂಡು ಬಂತು ನನಗೆ ತಿಳಿಸಿ ಎಂದು ಹೇಳಿದ್ದರು.

 

 

ಇದರಂತೆ ಕಿಚ್ಚ ಚಾರಿಟಬಲ್ ಟ್ರಸ್ಟ್ ನ ಸದಸ್ಯರು ಎಲ್ಲಾ ಮನೆಗಳಿಗೂ ತೆರಳಿ ಅವರವರ ಕಷ್ಟಗಳನ್ನು ಆಲಿಸಿ ನಿಮಗೆ ಕಿಚ್ಚ ಸುದೀಪ್ ಸಹಾಯ ಮಾಡುತ್ತಾರೆ ಎಂದು ಭರವಸೆಯನ್ನು ನೀಡಿ ಬಂದಿದ್ದರು. ಅದರಂತೆ ಇದೀಗ ಕಿಚ್ಚ ಸುದೀಪ್ ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟ 24 ಕುಟುಂಬಗಳ ಪೈಕಿ ತೀರಾ ಬಡವರಾಗಿದ್ದ 12 ಕುಟುಂಬಗಳ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದಾರೆ ಮತ್ತು ಆ ಕುಟುಂಬಗಳ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಕಿಚ್ಚ ಸುದೀಪ್ ಭರಿಸಲು ಮುಂದಾಗಿದ್ದಾರೆ. ಈ ಮೂಲಕ ಕಿಚ್ಚ ತಾನು ಕೊಟ್ಟಿದ್ದ ಮಾತನ್ನು ಉಳಿಸಿಕೊಂಡಿದ್ದಾರೆ. ತಮ್ಮ ತಪ್ಪಿನಿಂದ ಹಲವಾರು ಕುಟುಂಬಗಳು ಅನಾಥರಾದರೂ ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವೆ ಕಿಚ್ಚ ಸುದೀಪ್ ಅವರು ಈ ರೀತಿಯ ಸಹಾಯ ಹಸ್ತವನ್ನು ಚಾಚಿದ್ದು ನಿಜಕ್ಕೂ ಗ್ರೇಟ್..

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...