ಕಳೆದ 2 ವಾರಗಳಿಂದ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿರುವ ವಿಷಯವೆಂದರೆ ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ 24 ಮಂದಿ ಸಾವನ್ನಪ್ಪಿದ್ದು. ಮಧ್ಯರಾತ್ರಿಯಿಂದಲೇ ಆಕ್ಸಿಜನ್ ಕೊರತೆ ಉಂಟಾಗಿ ಕೊರೊನಾ ಸೋಂಕಿತರು ಸಾಲುಸಾಲಾಗಿ ಚಾಮರಾಜನಗರದ ಕೋವಿಡ್ ಸೆಂಟರ್ ನಲ್ಲಿ ಸಾವನ್ನಪ್ಪಿದರು. ಈ ಸಾವುಗಳಿಗೆ ಚಾಮರಾಜನಗರದ ಜಿಲ್ಲಾಧಿಕಾರಿ ಎಂ ಆರ್ ರವಿ ‘ನಾವು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಆಕ್ಸಿಜನ್ ಕೇಳಿದೆವು ಆದರೆ ಅವರು ಆಕ್ಸಿಜನ್ ಕೊಡಲು ನಿರಾಕರಿಸಿದರು ಹೀಗಾಗಿ ಸರಿಯಾದ ಸಮಯಕ್ಕೆ ಆಕ್ಸಿಜನ್ ಒದಗಿಸಲಾಗಿದೆ ನಮ್ಮ ಜಿಲ್ಲೆಯಲ್ಲಿ ಇಷ್ಟು ಸಾವುಗಳಾದವು’ ಎಂದು ಹೇಳಿದರು.
ಅಷ್ಟೇ ಅಲ್ಲದೆ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಕೆ ಸುಧಾಕರ್ ಕೂಡ ಆಕ್ಸಿಜನ್ ಕೊರತೆಯಿಂದ ಹೆಚ್ಚಿನ ಜನ ಸಾವನ್ನಪ್ಪಲಿಲ್ಲ ಎಂದು ಸಾವಿನ ವಿಷಯದಲ್ಲಿಯೂ ಸಹ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವ ಯತ್ನ ಮಾಡಿದರು. ಇತ್ತ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ನಾನು ಯಾವ ಜಿಲ್ಲೆಗೂ ಆಕ್ಸಿಜನ್ ಸರಬರಾಜನ್ನು ತಡೆಗಟ್ಟಿಲ್ಲ ಕೇಳಿದ ಕೂಡಲೇ ಆಕ್ಸಿಜನ್ ಸಪ್ಲೈ ಮಾಡಿದ್ದೇವೆ ತನಿಖೆಯಾಗಲಿ ನನ್ನದೇನಾದರೂ ತಪ್ಪಿದ್ದರೆ ನನಗೆ ಶಿಕ್ಷೆ ಕೊಡಿ ಎಂದು ದಿಟ್ಟವಾಗಿ ಉತ್ತರ ನೀಡಿದ್ದರು.
ಹೀಗೆ ಈ ಒಂದು ಘೋರ ಘಟನೆಯ ಕುರಿತು ತನಿಖೆಯಾಗಿ ಇದೀಗ ತನಿಖಾ ಆಯೋಗವು ವರದಿಯನ್ನು ಹೈಕೋರ್ಟ್ ಗೆ ಸಲ್ಲಿಸಿದೆ. ತನಿಖಾ ವರದಿಯ ಪ್ರಕಾರ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ಚಾಮರಾಜನಗರ ಜಿಲ್ಲೆಗೆ ಆಕ್ಸಿಜನ್ ಕೊಡಬೇಡಿ ಎಂದು ಎಲ್ಲಿಯೂ ಹೇಳಿಲ್ಲ ಮತ್ತು ಆಕ್ಸಿಜನ್ ಸರಬರಾಜನ್ನು ತಡೆಗಟ್ಟಿಲ್ಲ ಎಂದು ಹೇಳಿದೆ. ಇದು ಚಾಮರಾಜನಗರ ಜಿಲ್ಲಾಡಳಿತದ ತಪ್ಪೇ ಹೊರತು ರೋಹಿಣಿ ಸಿಂಧೂರಿಯವರದ್ದಲ್ಲ ಎಂದು ಹೈಕೋರ್ಟ್ ಗೆ ವರದಿಯನ್ನು ಸಲ್ಲಿಸಿದ್ದಾರೆ. ಇನ್ನು ಈ ಸುದ್ದಿಯನ್ನು ತಿಳಿದ ಸಾರ್ವಜನಿಕರು ತಾವು ಮಾಡಿದ ತಪ್ಪಿನಿಂದ ಜನರ ಜೀವವನ್ನು ತೆಗೆದು ಅದನ್ನು ಬೇರೆ ಜಿಲ್ಲೆಯ ಜಿಲ್ಲಾಧಿಕಾರಿ ಮೇಲೆಯೇ ಹಾಕಿ ಅವರಿಗೂ ಕೆಟ್ಟ ಹೆಸರು ತರುವ ಪ್ರಯತ್ನ ಮಾಡಿದ್ದೇಕೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಎಂ ಆರ್ ರವಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಗರಂ ಆಗಿದ್ದಾರೆ.