ರಾಜ್ಯದಾದ್ಯಂತ ಉಪಚುನಾವಣೆಯ ಪ್ರಚಾರ ಜೋರಾಗಿಯೇ ನೆಡೆಯುತ್ತಿದೆ ಹಾಗೆ ಇದೀಗ ನಟ -ನಟಿಯರಿಂದ ತಮ್ಮ ಪರ ಪ್ರಚಾರ ಕಾರ್ಯ ನಡೆಸುತ್ತಿರುವ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸುಧಾಕರ್ ಈಗ ತೆಲುಗು ಚಿತ್ರರಂಗದ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ಅವರನ್ನು ಕರೆತಂದಿದ್ದಾರೆ ಎಂದು ಹೇಳಲಾಗಿದೆ.
ಸುಧಾಕರ್ ಅವರ ಪರ ಈಗಾಗಲೇ ನಟ ದಿಗಂತ್, ನಟಿಯರಾದ ಹರ್ಷಿಕ ಪೂಣಚ್ಚ, ಹರಿಪ್ರಿಯ ಮೊದಲಾದವರು ಪ್ರಚಾರ ನಡೆಸಿದ್ದು, ಇಂದು ಕ್ಷೇತ್ರಕ್ಕೆ ಭೇಟಿ ನೀಡಲಿರುವ ಬ್ರಹ್ಮಾನಂದಂ, ಮಂಡಿಕಲ್ ಗ್ರಾಮದಿಂದ ರೋಡ್ ಶೋ ಮೂಲಕ ವಿವಿಧೆಡೆ ತೆರಳಲಿದ್ದಾರೆಂದು ಹೇಳಲಾಗಿದೆ.