ಚಿಕ್ಕೋಡಿ: ಕೃಷಿ ಹೊಂಡದಲ್ಲಿ ಮುಳುಗಿ 3 ಮಕ್ಕಳು ದುರ್ಮರಣ!

tnit editors
1 Min Read

ಚಿಕ್ಕೋಡಿ:- ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಕೃಷಿಹೊಂಡದಲ್ಲಿ ಬಿದ್ದು ಮೂವರು ಬಾಲಕರು ಸಾವನ್ನಪ್ಪಿರುವ ದಾರುಣ ಘಟನೆ ಜರುಗಿದೆ. ಇಂಗಳಿ ಗ್ರಾಮದ ಪ್ರಥಮೇಶ ಕೆರಬಾ (13), ಅಥರ್ವ ಸೌಂದಲಗೆ (15), ಸಮರ್ಥ ಚೌಗಲೆ (13) ಮೃತಪಟ್ಟ ಬಾಲಕರು.

ಸ್ನೇಹಿತರು ಸೇರಿಕೊಂಡು ಕೃಷಿಹೊಂಡದಲ್ಲಿ ಈಜಲು ಹೋದಾಗ ದುರಂತ ಸಂಭವಿಸಿದೆ. ಮೂವರು ಬಾಲಕರು ಮನೆಗೆ ಬಾರದಿದ್ದಾಗ ಪೋಷಕರಿಂದ ಹುಡುಕಾಟ ಆರಂಭಿಸಿದ್ದಾರೆ. ಕೃಷಿಹೊಂಡದಲ್ಲಿ ಬಿದ್ದ ಸಾವನ್ನಪ್ಪಿರುವ ವಿಚಾರವಾಗಿ ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಸ್ಥಳಕ್ಕೆ ಚಿಕ್ಕೋಡಿ ತಹಶೀಲ್ದಾರ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನ ಹೊರಗೆ ತೆಗೆದು ಮರಣೋತ್ತರ ಪರೀಕ್ಷೆ ರವಾನಿಸುವ ಕಾರ್ಯವನ್ನ ಪೊಲೀಸರು ಮಾಡಿದ್ದಾರೆ.

ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಗೆ ಮೃತದೇಹಗಳ ರವಾನಿಸಲಾಗಿದೆ.

Share This Article