ಆಸ್ತಿ ವಿಚಾರಣೆ ಸಂಬಂಧಿಸಿದಂತೆ ಇಡಿ ತನಿಕೆಯ ಆದರದ ಮೇಲೆ ಚಿದಂಬರಂ ಅವರನ್ನು ತಿಹಾರ್ ಜೈಲಿಗೆ ಹಾಕಲಾಗಿತ್ತು. ಅವರು ಜಾಮೀನಿಗೆ ಅರ್ಜಿ ಹಾಕಿದ್ದರು ಚಿದಂಬರಂ ಅವರಿಗೆ ಜಾಮೀನು ಮಂಜೂರು ಮಾಡಿದರೆ ಸಾಕ್ಷಿಗಳು ಮತ್ತು ಸಾಕ್ಷಾಧಾರಗಳ ಮೇಲೆ ಪ್ರಭಾವ ಬೀರುತ್ತಾರೆ. ಅವರು ಜೈಲಿನಲ್ಲಿದ್ದರೂ ಕೂಡ ಇದನ್ನು ಮುಂದುವರೆಸುತ್ತಿದ್ದಾರೆ .
ಹೀಗಾಗಿ ಅವರಿಗೆ ಜಾಮೀನು ನೀಡದಂತೆ ಇಡಿ ನ್ಯಾಯಮೂರ್ತಿ ಆರ್.ಭಾನುಮತಿ ನೇತೃತ್ವದ ಪೀಠಕ್ಕೆ ಮನವಿ ಮಾಡಿದೆ. ಇಡಿ ಪರ ಇಂದು ಕೋರ್ಟ್‍ಗೆ ಹಾಜರಾದ ಸಾಲಿಸಿಟಿರ್ ಜನರಲ್ ತುಷಾರ್ ಮೆಹ್ತಾ, ಆರ್ಥಿಕ ಅಪರಾಧಿಗಳಿಗೆ ಜಾಮೀನು ನೀಡಬಾರದು. ಇಂತಹ ಅಪರಾಧಗಳು ದೇಶದ ಅರ್ಥ ವ್ಯವಸ್ಥೆಗೆ ಧಕ್ಕೆಯುಂಟು ಮಾಡುವಂತದ್ದು ಎಂದರು. ಇಡಿ ಈ ರೀತಿ ಶಾಕ್ ನೀಡಿರುದರಿಂದ ಚಿದಂಬರಂ ಮುಂದೇನು ಮಾಡುತ್ತಾರೆ ಅವರ ಮುಂದಿನ ನೆಡೆ ಏನು ಎಂಬ ಕುತುಹಲ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.