ಫೆಬ್ರವರಿ ತಿಂಗಳ ಆರಂಭದಿಂದಲೂ ಇಳಿಕೆ ಕಂಡಿದ್ದ ಬಂಗಾರದ ಬೆಲೆ ಆಭರಣ ಪ್ರಿಯರಲ್ಲಿ ಸಂತಸ ಮೂಡಿಸಿತ್ತು. ಆದರೆ ಇದೀಗ ದಿಢೀರನೆ ಬಂಗಾರದ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದು, ಇಂದು ಬುಧವಾರ ಬೆಳಗ್ಗಿನ ಸಮಯದಲ್ಲಿ 1 ಗ್ರಾಂ (24 ಕ್ಯಾರಟ್) ಚಿನ್ನದ ಬೆಲೆ ₹4,695 ರೂಪಾಯಿ ದಾಖಲಾಗಿದೆ.
ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು (ಬುಧವಾರ) ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆಗೆ ₹43,850 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ ₹47,840 ರೂಪಾಯಿಗೆ ತಲುಪಿದೆ.
ಬೆಂಗಳೂರು: ₹43,850 (22 ಕ್ಯಾರಟ್) ₹47,840 (24 ಕ್ಯಾರಟ್)
ಚೆನ್ನೈ: ₹44,280 (22 ಕ್ಯಾರಟ್) ₹48,300 (24 ಕ್ಯಾರಟ್)
ಹೈದರಾಬಾದ್: ₹43,850 (22 ಕ್ಯಾರಟ್) ₹47,840 (24 ಕ್ಯಾರಟ್)
ಕೋಲ್ಕತಾ: ₹46,310 (22 ಕ್ಯಾರಟ್), ₹49,060 (24 ಕ್ಯಾರಟ್)
ಮಂಗಳೂರು: ₹43,850 (22 ಕ್ಯಾರಟ್) ₹47,840 (24 ಕ್ಯಾರಟ್)
ಒಟ್ಟಾರೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡು ಬಂದಿದ್ದರೆ, ಬೆಳ್ಳಿ ಬೆಲೆಯಲ್ಲೂ ಕೆಲವೆಡೆ ಏರಿಕೆಯಾಗಿ ಉಳಿದೆಡೆ ಏಕರೂಪವಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.