ಚಿರು ಸಾವಿನ ಸುದ್ದಿಯನ್ನು ವೈದ್ಯರು ಮೊದಲು ತಿಳಿಸಿದ್ದು ಇವರಿಗೆ

0
52

ಶನಿವಾರ ಫಿಟ್ಸ್ ಬಂದು ಒದ್ದಾಡಿದ್ದ ಚಿರಂಜೀವಿ ಸರ್ಜಾ ಬಳಿಕ ಚೇತರಿಸಿಕೊಂಡಿದ್ದರು. ಆದರೆ ಭಾನುವಾರ ಮಧ್ಯಾಹ್ನ 12.30ರ ವೇಳೆಗೆ ಇದ್ದಕ್ಕಿದ್ದಂತೆ ಎದೆ ನೋವು ಎಂದು ಹೇಳಿದರು. ಅವರನ್ನು ಕೂಡಲೇ ಸಾಗರ್ ಅಪೋಲೊ ಆಸ್ಪತ್ರೆಗೆ ಸಾಗಿಸಲಾಗಿತ್ತು.

1.20ರ ಸುಮಾರಿಗೆ ಚಿರಂಜೀವಿ ಅವರನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದರು. ಹಾಗಿದ್ದೂ ಸ್ತಬ್ಧಗೊಂಡಿದ್ದ ಅವರ ಹೃದಯ ಬಡಿತವನ್ನು ಸರಿಪಡಿಸಲು ವೈದ್ಯರು ಪ್ರಯತ್ನಿಸಿದ್ದರು. ಚಿರಂಜೀವಿ ಸರ್ಜಾ ಇನ್ನಿಲ್ಲ ಎಂಬ ಆಘಾತಕಾರಿ ಸುದ್ದಿ, ಅವರ ಹೃದಯವನ್ನು ಮತ್ತೆ ಎಚ್ಚರಿಸಲು ಪ್ರಯತ್ನಿಸಿದ್ದು, ಅದು ಸಾಧ್ಯವಾಗದೆ ಕೊನೆಗೆ ಅವರ ಸಾವಿನ ಸುದ್ದಿಯನ್ನು ಅಧಿಕೃತಗೊಳಿಸಿದ್ದು.

ಇದೆಲ್ಲವೂ ಅವರ ಕುಟುಂಬದವರಿಗೆ ತಿಳಿಸುವ ಮೊದಲೇ ಮತ್ತೊಬ್ಬ ಗಣ್ಯ ವ್ಯಕ್ತಿಗೆ ವೈದ್ಯರು ತಿಳಿಸುತ್ತಿದ್ದರು. ವಾಸ್ತವವಾಗಿ ಸುಂದರ್ ರಾಜ್ ಅವರ ಕುಟುಂಬಕ್ಕೆ ಬಹಳ ಆತ್ಮೀಯರಾಗಿದ್ದ ವ್ಯಕ್ತಿಯಿಂದ ಸಲಹೆ ಪಡೆದ ನಂತರವೇ ವೈದ್ಯರೂ ಸರ್ಜಾ ಕುಟುಂಬದವರಿಗೆ ಆ ಕಹಿ ಸತ್ಯ ಹೇಳಿದ್ದು. ಮುಂದೆ ಓದಿ..

‘ಚಿರಂಜೀವಿ ಅವರನ್ನು ಕರೆದುಕೊಂಡು ಬಂದ ಸಂದರ್ಭದಿಂದ ವೈದ್ಯರೊಂದಿಗೆ ಮಾತನಾಡುತ್ತಿದ್ದೆ. ಪ್ರತಿ ಪ್ರಯತ್ನದ ಬಳಿಕವೂ ವೈದ್ಯರು ನನಗೆ ಮೊದಲು ಫೋನ್ ಮಾಡಿ ಮಾಹಿತಿ ನೀಡುತ್ತಿದ್ದರು. ಸುಮಾರು ಒಂದು ಗಂಟೆ ಆ ವೇದನೆ ಅನುಭವಿಸಿದ್ದೆ. ನಿಜಕ್ಕೂ ವೇದನೆ ಅದು’ ಎಂದು ಭಾವುಕರಾದರು ಖ್ಯಾತ ಸಾಹಿತಿ, ನಿರ್ದೇಶಕ ಬರಗೂರು ರಾಮಚಂದ್ರಪ್ಪ.

ಬಹಳ ವರ್ಷಗಳಿಂದಲೂ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯ್ ಅವರ ಕುಟುಂಬಕ್ಕೆ ಆಪ್ತರಾಗಿದ್ದವರು ಬರಗೂರು ರಾಮಚಂದ್ರಪ್ಪ. ಚಿರಂಜೀವಿ ಸರ್ಜಾ ಅವರ ಸಾವಿನ ಸುದ್ದಿಯನ್ನು ವೈದ್ಯರು ಮೊದಲು ತಿಳಿಸಿದ್ದೂ ಅವರಿಗೆ. ಚಿರಂಜೀವಿ ಸರ್ಜಾ ಅವರ ಸಾವಿನ ಪ್ರತಿ ಕ್ಷಣದ ಮಾಹಿತಿಯೂ ತಮಗೆ ಬರುತ್ತಿತ್ತು. ಆ ನೋವು ತೀವ್ರವಾಗಿತ್ತು ಎಂಬುದನ್ನು ಬರಗೂರು ರಾಮಚಂದ್ರಪ್ಪ ತಿಳಿಸಿದರು.

ಸಿನಿಮಾಗಳ ಮೂಲಕ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯಿ ನನಗೆ ಆತ್ಮೀಯರಾಗಿದ್ದರು. ಮೇಘನಾ ಕೂಡ ಮೊದಲು ಬಣ್ಣ ಹಚ್ಚಿದ್ದೇ ನನ್ನ ಚಿತ್ರದಲ್ಲಿ. ‘ಕರಡಿಪುರ’ ಚಿತ್ರದಲ್ಲಿ ಬಾಲಕಿ ಮೇಘನಾ ನಟಿಸಿದ್ದಳು. ಹೀಗಾಗಿ ಬಹಳ ಹಿಂದಿನಿಂದಲೂ ನಮ್ಮ ಕುಟುಂಬದ ಒಡನಾಟ ಬಹಳ ಚೆನ್ನಾಗಿತ್ತು ಎಂಬುದನ್ನು ವಿವರಿಸಿದರು.

 

LEAVE A REPLY

Please enter your comment!
Please enter your name here