ಟೀಮ್ಇಂಡಿಯಾದ ಮಾಜಿ ಓಪನರ್… ವರ್ಲ್ಡ್ಕಪ್ ಹೀರೋ ಗೌತಮ್ ಗಂಭೀರ್ ಬಿಜೆಪಿ ಸೇರ್ಪಡೆಗೊಂಡಿದ್ದು ಪ್ರತಿಯೊಬ್ಬರಿಗೂ ಗೊತ್ತಿದೆ. ಈಗ ಗೌತಿಗೆ ಬಿಜೆಪಿ ಟಿಕೆಟ್ ಕೂಡ ಸಿಕ್ಕಿದೆ.
ಭಾರತ ತಂಡದ ನಂಬಿಕಸ್ತ ಬ್ಯಾಟ್ಸ್ಮನ್ ಆಗಿ 2004ರಿಂದ 2016ರ ತನವೂ ಆಧಾರವಾಗಿದ್ದರು. 2003ರಿಂದ 2016ರವರೆಗೆ ಟೆಸ್ಟ್, 2003ರಿಂದ 22013ರವರೆಗೆ ಏಕದಿನ ಕ್ರಿಕೆಟ್ ಅನ್ನು ಭಾರತದ ಪರವಾಗಿ ಆಡಿದ್ದಾರೆ. 2010ರ ಅವಧಿಯಲ್ಲಿ 6 ಮ್ಯಾಚ್ಗಳಲ್ಲಿ ನಾಯಕತ್ವವಹಿಸಿಕೊಂಡಿದ್ದರು. ಆ 6 ಮ್ಯಾಚ್ಗಳಲ್ಲೂ ಭಾರತ ಗೆದ್ದಿತ್ತು. ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದಿದ್ದರು. ಮುಖ್ಯವಾಗಿ 2011ರ ವಿಶ್ವಕಪ್ ಫೈನಲ್ನಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಫೈನಲ್ ಪಂದ್ಯದಲ್ಲಿ 97ರನ್ಗಳಿಸಿ ಗೆಲುವಿನ ಸಾರಥಿ ಆಗಿದ್ದರು.
ನಂತರ ಟೀಮ್ ಇಂಡಿಯಾದಿಂದ ಅವಕಾಶ ವಂಚಿತರಾದ ಗೌತಿ. ಅಂತರಾಷ್ಟ್ರೀಯ ಕ್ರಿಕೆಟ್ಗೆ ಗುಡ್ಬೈ ಹೇಳಿದ್ದರು. ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಅವರಿಗೆ ಬಿಜೆಪಿ ಪೂರ್ವ ದೆಹಲಿಯಿಂದ ಟಿಕೆಟ್ ನೀಡಿದೆ. ಗೌತಿ ರಾಜಕೀಯ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.
ಚುನಾವಣಾ ಕಣಕ್ಕೆ ಇಳಿದೇ ಬಿಟ್ಟರು ವರ್ಲ್ಡ್ಕಪ್ ಹೀರೋ.! ಗಂಭೀರ್ಗೆ ಟಿಕೆಟ್.. ಯಾವಕ್ಷೇತ್ರ ಗೊತ್ತಾ?
Date: