ಚೂಯಿಂಗ್ ಗಮ್​ ತಿಂದ್ರೆ ಆರೋಗ್ಯದ ಕತೆ ಅಷ್ಟೇ?

Date:

ಒತ್ತಡವೋ ಅಥವಾ ಅಭ್ಯಾಸವೋ ಬಾಯಲ್ಲಿ ಚೂಯಿಂಗ್ ಗಮ್ ಮಾತ್ರ ಕೆಲವರಿಗೆ ಇರಲೇಬೇಕು. ಸದಾ ಜಿಗಿಯುತ್ತಲೇ ಇರಬೇಕು ಆಗಲೇ ಅವರಿಗೆ ಸಮಾಧಾನ. ಆದ್ರೆ ಚೂಯಿಂಗ್ ಗಮ್​ ಜಗಿಯುವವರಿಗೆ ಬ್ಯಾಡ್​ ನ್ಯೂಸ್​. ಹೌದು ಕೆಲವರು ಮೂಡ್ ಸ್ವಿಂಗ್ ಅಥವಾ ಒತ್ತಡ ಕಡಿಮೆ ಮಾಡಲು ಚೂಯಿಂಗ್ ಗಮ್ ತಿನ್ನುತ್ತಾರೆ. ಆದರಿಂದ  ಆರೋಗ್ಯದ ಮೇಲೆ ಭೀಕರ ಪರಿಣಾಮ ಬೀರುತ್ತದೆ. ಬಾಯಿ ದುರ್ವಾಸನೆ ನಡೆಯಲ ವಿಧ ವಿಧದ ಫ್ಲೇವರ್ ಚೂಯಿಂಗ್ ಗಮ್ ತಿನ್ನಲಾಗುತ್ತದೆ.  ಆದರೆ, ಸಂಶೆೋಧನೆಯೊಂದರ ಪ್ರಕಾರ ಚುಯಿಂಗ್ ಗಮ್ ತಿಂದರೆ ದುರ್ವಾಸನೆ ಕಡಿಮೆಯಾಗೋ ಬದಲು, ಕ್ರಮೇಣವಾಗಿ ಹೆಚ್ಚುತ್ತದಂತೆ.
ಆ ಕ್ಷಣಕ್ಕೆ ಬಾಯಿ ವಾಸನೆ ಕಡಿಮೆಯಾದಂತೆ ಕಂಡು ಬಂದ್ರೂ ವಾಸ್ತವವಾಗಿ ಬಾಯಿಯಲ್ಲಿ ಬ್ಯಾಕ್ಟಿರೀಯಾಗಳು ಹೆಚ್ಚಾಗಿ, ಹಲ್ಲುಗಳ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಇದು ಹುಳುಕುಗೂ ಕಾರಣವಾಗುತ್ತದೆ.  ಅಷ್ಟೇ ಅಲ್ಲ ಈ ಅಭ್ಯಾಸ ದವಡೆ ನೋವಿಗೂ ಎಡೆ ಮಾಡಿಕೊಡುತ್ತದೆ. ಇದರಲ್ಲಿ ಬಳಸುವ ಕೃತಕ ಸಿಹಿ ಪದಾರ್ಥಗಳು ಬ್ರೈನ್ ಟ್ಯೂಮರ್‌ ಹಾಗೂ ಕ್ಯಾನ್ಸರ್‌ಗೂ ಕಾರಣವಾಗಬಲ್ಲದು ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.
ಜಗಿಯುವಾಗ ಅದಲ್ಲಿರುವ ರಸ ಎಂಜಿಲಿನೊಂದಿಗೆ ಹೊಟ್ಟೆಗೆ ಸೇರಿ ಅಜೀರ್ಣವಾಗುವಂತೆ ಮಾಡುತ್ತದೆ. ಇದರಿಂದ ದೇಹ ತೂಕ ಹೆಚ್ಚುತ್ತದೆ. ಅಕಸ್ಮಾತ್ ನುಂಗಿದರಂತೂ ಮುಗೀತು ಕಥೆ. ಹೊಟ್ಟೆ ಬಿಗಿದು, ಮಲಬದ್ಧತೆಯನ್ನುಂಟು ಮಾಡುತ್ತದೆ.

Share post:

Subscribe

spot_imgspot_img

Popular

More like this
Related

ಚಿಕ್ಕಪೇಟೆ ಕುಂಬಾರಪೇಟೆ ಹಾರ್ಡ್‌ವೇರ್ ಗೋಡೌನ್‌ನಲ್ಲಿ ಅಗ್ನಿ ಅವಘಡ

ಚಿಕ್ಕಪೇಟೆ ಕುಂಬಾರಪೇಟೆ ಹಾರ್ಡ್‌ವೇರ್ ಗೋಡೌನ್‌ನಲ್ಲಿ ಅಗ್ನಿ ಅವಘಡ ಬೆಂಗಳೂರು: ನಗರದ ಚಿಕ್ಕಪೇಟೆಯ ಕುಂಬಾರಪೇಟೆ...

35ರ ನಂತರ ಮಹಿಳೆಯರ ಆರೋಗ್ಯ: ಯಾವ ಆಹಾರ ಅಗತ್ಯ? ಏನು ತಪ್ಪಿಸಬೇಕು?

35ರ ನಂತರ ಮಹಿಳೆಯರ ಆರೋಗ್ಯ: ಯಾವ ಆಹಾರ ಅಗತ್ಯ? ಏನು ತಪ್ಪಿಸಬೇಕು? ಸಾಮಾನ್ಯವಾಗಿ...

ಗುರು ರಾಘವೇಂದ್ರ ಸ್ವಾಮಿಗಳ ಆಲ್ಬಮ್ ಸಾಂಗ್ ” ರಾಯರ ದರ್ಶನ ” ದ ಟೀಸರ್ ಬಿಡುಗಡೆ

ಲಕ್ಷ್ಮೀ ಗಣೇಶ ಪ್ರೋಡಕ್ಷನ್ ಮತ್ತು ದಿ ನ್ಯೂ ಇಂಡಿಯನ್ ಟೈಮ್ಸ್ ಸಂಸ್ಥೆ...

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್ ಬೆಂಗಳೂರು:...