ಚೆನ್ನೈಗೆ ಮಣ್ಣು ಮುಕ್ಕಿಸಿದ ಕನ್ನಡಿಗ ಕೆಎಲ್ ರಾಹುಲ್

Date:

ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಗುರುವಾರ (ಅಕ್ಟೋಬರ್ 7) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 53ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 6 ವಿಕೆಟ್ ಸುಲಭ ಜಯ ಗಳಿಸಿದೆ. ನಾಯಕ ಕೆಎಲ್ ರಾಹುಲ್ ಸ್ಫೋಟಕ ಅರ್ಧ ಶತಕದೊಂದಿಗೆ ಪಂಜಾಬ್ ಸುಲಭವಾಗಿ ಪಂದ್ಯ ಗೆದ್ದಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ ಸೂಪರ್ ಕಿಂಗ್ಸ್‌, ಋತುರಾಜ್ ಗಾಯಕ್ವಾಡ್‌ 12, ಫಾಫ್ ಡು ಪ್ಲೆಸಿಸ್ 76, ರಾಬಿನ್ ಉತ್ತಪ್ಪ 2, ಮೊಯೀನ್ ಅಲಿ 0, ಅಂಬಟಿ ರಾಯುಡು 4, ಎಂಎಸ್ ಧೋನಿ 12, ರವೀಂದ್ರ ಜಡೇಜಾ 15, ಡ್ವೇನ್ ಬ್ರಾವೋ 4 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 134 ರನ್ ಗಳಿಸಿತು.

 

ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್, ಕೆಎಲ್ ರಾಹುಲ್ 98 (42 ಎಸೆತ), ಮಯಾಂಕ್ ಅಗರ್ವಾಲ್ 12, ಐಡೆನ್ ಮಾರ್ಕ್ರಮ್ 13, ಸರ್ಫರಾಜ್ ಖಾನ್ 0, ಶಾರುಖ್ ಖಾನ್ 8, ಮೊಯಿಸ್ ಹೆನ್ರಿಕ್ಸ್ 3 ರನ್‌ನೊಂದಿಗೆ 13 ಓವರ್‌ಗೆ 4 ವಿಕೆಟ್‌ ಕಳೆದು 139 ರನ್ ಗಳಿಸಿ ಗೆಲುವನ್ನಾಚರಿಸಿತು.

ಚೆನ್ನೈ ಸೂಪರ್ ಕಿಂಗ್ಸ್ ಇನ್ನಿಂಗ್ಸ್‌ನಲ್ಲಿ ಪಂಜಾಬ್‌ ಕಿಂಗ್ಸ್‌ನ ಮೊಹಮ್ಮದ್ ಶಮಿ 1, ಅರ್ಷದೀಪ್ ಸಿಂಗ್ 2, ಕ್ರಿಸ್ ಜೋರ್ಡನ್ 2, ರವಿ ಬಿಷ್ಣೋಯ್ 1 ವಿಕೆಟ್ ಪಡೆದರೆ, ಪಂಜಾಬ್ ಕಿಂಗ್ಸ್‌ ಇನ್ನಿಂಗ್ಸ್‌ನಲ್ಲಿ ಚೆನ್ನೈಯ ದೀಪಕ್ ಚಾಹರ್ 1, ಶಾರ್ದೂಲ್ ಠಾಕೂರ್ 3 ವಿಕೆಟ್‌ನಿಂದ ಗಮನ ಸೆಳೆದರು.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...