ಚೈತ್ರಾ ಕುಂದಾಪುರ -ಐಶ್ವರ್ಯಾ ನಡುವೆ ಬಿಗ್ ಫೈಟಿಂಗ್..! ಮನೆಮಂದಿಗೆ ಶಾಕ್

Date:

ಚೈತ್ರಾ ಕುಂದಾಪುರ -ಐಶ್ವರ್ಯಾ ನಡುವೆ ಬಿಗ್ ಫೈಟಿಂಗ್..! ಮನೆಮಂದಿಗೆ ಶಾಕ್

‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮ ಶುರುವಾಗಿ 11 ವಾರಗಳು ಉರುಳಿವೆ. ಸದ್ಯ 12ನೇ ವಾರ ಚಾಲ್ತಿಯಲ್ಲಿದೆ. ಈ 11 ವಾರಗಳಲ್ಲಿ ಯಮುನಾ ಶ್ರೀನಿಧಿ, ಹಂಸ, ಮಾನಸಾ, ಅನುಷಾ ರೈ, ಧರ್ಮ ಕೀರ್ತಿರಾಜ್‌, ಶಿಶಿರ್‌ ಶಾಸ್ತ್ರಿ ಎಲಿಮಿನೇಟ್ ಆಗಿದ್ದಾರೆ. ರಂಜಿತ್ ಹಾಗೂ ಜಗದೀಶ್‌ ಕಿಕ್ ಔಟ್ ಆಗಿದ್ದಾರೆ. ಶೋಭಾ ಶೆಟ್ಟಿ ಕ್ವಿಟ್ ಮಾಡಿದ್ದಾರೆ. ಅನಿವಾರ್ಯ ಕಾರಣಗಳಿಂದ ಗೋಲ್ಡ್ ಸುರೇಶ್‌ ಹೊರಬಂದಿದ್ದಾರೆ.
ಇನ್ನೂ ಬಿಗ್ಬಾಸ್ ಮನೆಯಲ್ಲಿ ಎಚ್ಚೆತ್ತಿಕೊಳ್ಳಿ ಎಂದು ಟಾಸ್ಕ್ ಶುರುವಾಗಿದ್ದು ಸ್ಪರ್ಧಿಗಳ ಮುಖಕ್ಕೆ ಟೀ ಅನ್ನು ಹಾಕಲಾಗಿದೆ. ಇದರಲ್ಲಿ ಕೇವಲ ಐಶ್ವರ್ಯ ಮುಖಕ್ಕೆ ಭವ್ಯ ಮಾತ್ರ ಟೀ ಚೆಲ್ಲಿಲ್ಲ. ಇದೇ ರೀತಿ ಎಚ್ಚೆತ್ತುಕೊಳ್ಳಿ ಎಂದು ಹನುಮಂತು ಮುಖಕ್ಕೆ ಧನರಾಜ್, ಗೌತಮಿ ಮುಖಕ್ಕೆ ರಜತ್, ಚೈತ್ರಾ ಮುಖಕ್ಕೆ ಮಂಜು, ಮಂಜು ಮುಖಕ್ಕೆ ಗೌತಮಿ, ಮೋಕ್ಷಿತಾ ಮುಖಕ್ಕೂ ಚಹಾ ಚೆಲ್ಲಲಾಗಿದೆ. ಅಂದರೆ ಇವರೆಲ್ಲಾ ಮನೆಯಲ್ಲಿ ಎಚ್ಚೆತ್ತುಕೊಳ್ಳಬೇಕಿದೆ ಎಂದು ಹೇಳಲಾಗಿದೆ.
ಮನೆಯಲ್ಲಿ ಸದಸ್ಯರ ಪೈಕಿ ಎಚ್ಚೆತ್ತುಕೊಳ್ಳಬೇಕಿರುವ ಸದಸ್ಯ ಯಾರು ಎಂದು ಘೋಷಿಸಬೇಕಿದೆ. ಇದು ಬಿಗ್ ಬಾಸ್ ಆರ್ಡರ್ ಆಗಿದೆ. ಈ ಹಿನ್ನೆಲೆಯಲ್ಲಿ ಗೌತಮಿ, ಹನುಮಂತು, ಚೈತ್ರಾ, ಮೋಕ್ಷಿತಾ, ಮಂಜು ಇವರು ಇನ್ನಷ್ಟು ಎಚ್ಚೆತ್ತುಕೊಂಡು ಸ್ಪರ್ಧೆ ಮಾಡಬೇಕಿದೆ. ನೀವು ಟಾಸ್ಕ್ನಲ್ಲಿ ಇನ್ನಷ್ಟು ಸುಧಾರಿಸಿಕೊಳ್ಳಬೇಕು ಎಂದು ಟೀ ಚೆಲ್ಲಲಾಗಿದೆ. ಗೌತಮಿಗೆ ಹೆದರಿಕೊಂಡು ಮಂಜು ಮಾತನಾಡಲ್ಲ ಎನ್ನಲಾಗಿದೆ.
ಚೈತ್ರಾ ಕುಂದಾಪುರ ಹಾಗೂ ಐಶ್ವರ್ಯ ನಡುವೆ ಮಾತಿನ ಸಮರ ನಡೆದಿದೆ. ನಿಮ್ಮ ಆಟಗಳಿಗೆ ಈ ವಾರ ನಾನು ಬಲಿಪಶು ಆದೆ ಎಂದು ಚೈತ್ರಾಗೆ, ಐಶ್ವರ್ಯ ಕೋಪದಲ್ಲಿ ಚೀರಿಕೊಂಡು ಹೇಳಿದ್ದಾರೆ. ಇಬ್ಬರ ನಡುವೆ ಮಾತಿನ ವಾಕ್ಸಮರ ನಡೆದಿದೆ.

Share post:

Subscribe

spot_imgspot_img

Popular

More like this
Related

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್...

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ ವಿಜಯಪುರ: ವಿಜಯಪುರ ನಗರದಲ್ಲಿ ಮತ್ತೊಮ್ಮೆ ಭೂಕಂಪನದ...

ಚಳಿಗಾಲದಲ್ಲಿ ಖರ್ಜೂರ ಸೇವಿಸುವುದರಿಂದ ಸಿಗುವ ಪ್ರಯೋಜನಗಳೇನು?

ಚಳಿಗಾಲದಲ್ಲಿ ಖರ್ಜೂರ ಸೇವಿಸುವುದರಿಂದ ಸಿಗುವ ಪ್ರಯೋಜನಗಳೇನು? ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಮತ್ತು ಶಕ್ತಿಯುತವಾಗಿರಿಸಲು...

ಖಾನಾಪುರ ಆನೆಗಳ ಸಾವು: ತನಿಖೆಗೆ ಸಚಿವ ಈಶ್ವರ ಆದೇಶ

ಖಾನಾಪುರ ಆನೆಗಳ ಸಾವು: ತನಿಖೆಗೆ ಸಚಿವ ಈಶ್ವರ ಆದೇಶ ಬೆಳಗಾವಿ ಜಿಲ್ಲೆಯ ಖಾನಾಪುರ...