ಕನ್ನಡ ಚಿತ್ರರಂಗದ ಮೇರು ನಟರಲ್ಲಿ ಕರಾಟೆ ಕಿಂಗ್ ಶಂಕರ್ನಾಗ್ ಕೂಡ ಒಬ್ರು. ಶಂಕರ್ನಾಗ್ ನಮ್ಮೊಂದಿಗೆ ಇಲ್ಲದಿದ್ರೂ ಅವರ ನೆನೆಪುಗಳು ಮಾತ್ರ ಅಮರವಾಗಿರುತ್ವೆ. ಇಂದಿಗೂ ಶಂಕರ್ನಾಗ್ ಸಿನಿಮಾಗಳು ತೆರೆಕಂಡ್ರೆ ಕೋಟ್ಯಾಂತರ ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಆದ್ರೆ ಶಂಕರ್ ನಾಗ್ ಚಿತ್ರಮಂದಿರ ಪುನರಾರಂಭ ಅಂದ್ರೆ ಅನೇಕರಿಗೆ ಖುಷಿಯಾದ್ರೆ. ಹಲವರಿಗೆ ಕುತೂಹಲವಾಗುತ್ತೆ. ಏನು ಶಂಕ್ರಣ್ಣನ ಚಿತ್ರಮಂದಿರನಾ? ಅಂತಾ.
ಹೌದು. ಸದಾ ಪಿ.ವಿ.ಆರ್, ಐನಾಕ್ಸ್, ಮೆಜಿಸ್ಟಿಕ್ ನಲ್ಲಿರುವ ಕೆಲವು ಚಿತ್ರಮಂದಿರಗಳಲ್ಲೇ ಕಾಲ ಕಳೆಯುವ ಇಂದಿನ ಯುವ ಜನಾಂಗಕ್ಕೆ ಶಂಕರ್ ನಾಗ್ ಚಿತ್ರಮಂದಿರದ ಬಗ್ಗೆ ಗೊತ್ತಿರಲ್ಲ. ಎರಡು ವರ್ಷದ ಹಿಂದೆ ಥಿಯೇಟರ್ ಕ್ಲೋಸ್ ಆಗಿತ್ತು. ಇದೀಗ ಮತ್ತೆ ಈ ಚಿತ್ರಮಂದಿರ ರೀ-ಓಪನ್ ಆಗ್ತಿದ್ದು, ಶಂಕರ್ ನಾಗ್ ಅವರ ಹೆಸರಿಗೆ ಜೀವ ಬಂದಿದೆ. ಹಳೇ ಚಿತ್ರಮಂದಿರಕ್ಕೆ ಹೊಸ ರೂಪ ನೀಡಿ, ಹೊಸ ತಂತ್ರಜ್ಞಾನವನ್ನ ಅಳವಡಿಸಿ ಇಂದಿನ ಸಮಯದಕ್ಕೆ ಜನರೇಷನ್ ಗೆ ತಕ್ಕಂತೆ ಸಿದ್ಧಮಾಡಲಾಗ್ತಿದೆ. ಶಂಕರ್ ನಾಗ್ ಸ್ವಾಗತ ಓನಿಕ್ಸ್ ‘ಶಂಕರ್ ನಾಗ್ ಚಿತ್ರಮಂದಿರ’ ಎಂದು ಗುರುತಿಸಲಾಗುತ್ತಿದ್ದ ಚಿತ್ರಮಂದಿರ ಇನ್ನು ಮುಂದೆ ‘ಶಂಕರ್ ನಾಗ್ ಸ್ವಾಗತ ಓನಿಕ್ಸ್’ ಎಂದು ಮರುನಾಮಕರಣವಾಗಿದೆ.
614 ಆಸನಗಳ ಥಿಯೇಟರ್ 14 ಮೀಟರ್ ಎಲ್ಇಡಿ ಪರದೆಯನ್ನ ಈ ಚಿತ್ರಮಂದಿರದಲ್ಲಿ ಅಳವಡಿಸಲಾಗುತ್ತಿದೆ. ಎಲ್ಇಡಿ ಮೂಲಕ ಈ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನ ಮಾಡಲಾಗುತ್ತಿದ್ದು, ಜಗತ್ತಿನ ಅತಿ ದೊಡ್ಡ ಎಲ್ಇಡಿ ಪರದೆ ಎಂದು ಹೇಳಲಾಗ್ತಿದೆ. ಮಲೇಷ್ಯಾ ಮತ್ತು ಚೀನಾ ನಂತರ ಬೆಂಗಳೂರಿನಲ್ಲಿ ದೊಡ್ಡ ಎಲ್ಇಡಿ ಪರದೆಯಾಗಲಿದೆ.
ಶಂಕರ್ನಾಗ್ ಚಿತ್ರಮಂದಿರ ಶುರುವಾಗಿದ್ದು 1979ರಲ್ಲಿ. ಮೊದಲು ಇಲ್ಲಿ ಇಂಗ್ಲಿಷ್ ಚಿತ್ರಗಳು ಹೆಚ್ಚಾಗಿ ಪ್ರದರ್ಶನವಾಗುತ್ತಿತ್ತು. ನಂತರ ಅದು ಕನ್ನಡ ಚಿತ್ರಗಳ ಪ್ರದರ್ಶನಕ್ಕೇ ಮೀಸಲಾಯ್ತು. ಸುಮಾರು 38 ವರ್ಷಗಳ ಕಾಲ ಕನ್ನಡ ಸಿನಿಮಾ ಸೇರಿದಂತೆ ಚಿತ್ರ ಪ್ರೇಮಿಗಳಿಗೆ ಮನರಂಜನೆ ನೀಡುತ್ತಾ ಬಂದಿತ್ತು. ಈ ಚಿತ್ರಮಂದಿರಕ್ಕೆ ಮೊದಲು ‘ಸಿಂಫೋನಿ’ ಎಂಬ ಹೆಸರಿತ್ತು. ಆದ್ರೆ 1991ರಲ್ಲಿ ಶಂಕರ್ನಾಗ್ ಅವರ ನಿಧನದ ನಂತರ ಆ ಚಿತ್ರಮಂದಿರಕ್ಕೆ ಶಂಕರ್ನಾಗ್ ಚಿತ್ರಮಂದಿರ ಎಂದು ಹೊಸದಾಗಿ ನಾಮಕರಣ ಮಾಡಲಾಗಿತ್ತು. ಇದೀಗ ಶಂಕರ್ನಾಗ್ ಸ್ವಾಗತ ಓನಿಕ್ಸ್ ಅಂತಾ ಹೆಸಡಿಲಾಗಿದೆ.
ಜಗತ್ತಿನಲ್ಲೇ ಎಲ್ಇಡಿ ಪರದೆ ಶಂಕ್ರಣ್ಣನ ಥಿಯೇಟರ್ನಲ್ಲಿ..!
Date: