ವಿಶ್ವದಲ್ಲಿ ಕೊರೋನಾ ರುದ್ರತಾಂಡವ ಆಡುತ್ತಿದೆ. ಜಗತ್ತಿನ ಮೂಲೆ ಮೂಲೆಯಲ್ಲೂ ಮಹಾಮಾರಿ ಕೊರೋನಾ ಅಟ್ಟಹಾಸ ಮೆರೆಯುತ್ತಿದೆ. ಕೊರೋನಾ ಹಾವಳಿಗೆ ಜಗತ್ತಿನ ಸುಮಾರು 183 ರಾಷ್ಟ್ರಗಳು ನಲುಗಿವೆ. ಕೊರೋನಾ ರಕ್ಕಸಕ್ಕೆ ತತ್ತರಿಸಿರುವ ದೇಶಗಳ ಪೈಕಿ ಭಾರತವೇನೂ ಹೊರಗಿಲ್ಲ. ಭಾರತ ಕೂಡ ಕೊರೋನಾ ಹೆಮ್ಮಾರಿಗೆ ಅಕ್ಷರಶಃ ನಲುಗಿದೆ.
ಚೀನಾದಲ್ಲಿ ಹುಟ್ಟಿ ಇಡೀ ವಿಶ್ವವನ್ನು ವ್ಯಾಪಿಸಿರುವ ಮಹಾಮಾರಿ ಕೊರೋನಾ ರುದ್ರನರ್ತನ ಹೆಚ್ಚಾಗುತ್ತದೆ…ಭಾರತ ಕೂಡ ಕೊರೋನಾ ಹಾವಳಿಯಿಂದ ತತ್ತರಿಸಿದೆ….ದೇಶದಲ್ಲಿ ಕೊರೋನಾ ಅಟ್ಟಹಾಸದ ಹಿನ್ನೆಲೆಯಲ್ಲಿ ಲಾಕ್ ಡೌನ್ ಮೊರೆ ಹೋಗಲಾಗಿದೆ…
ದೇಶದ ಆರ್ಥಿಕತೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಆರ್ಥಿಕ ದೃಷ್ಟಿಕೋನದಲ್ಲೂ ಭರಿಸಲಾಗದಷ್ಟು ನಷ್ಟವಾಗಿದೆ… ವಿಶ್ವದಲ್ಲಿ ಕೊರೋನಾದಿಂದ ನಲುಗುತ್ತಿರುವ 183 ರಾಷ್ಟ್ರಗಳ ಪೈಕಿ…ಅತೀ ಹೆಚ್ಚು ಸಮಸ್ಯೆ ಕಂಡು ಬಂದಿರುವ ರಾಷ್ಟ್ರಗಳತ್ತ ಚಿತ್ತ ಹರಿಸುವುದಾದರೆ…
ಮಾರಣಾಂತಿಕ ಕೊರೋನಾ ದಾಳಿ ಹೆಚ್ಚುತ್ತಲೇ ಇದೆ. ವಿಶ್ವದಾದ್ಯಂತ ಇದುವರೆಗೆ 12, 73, 794 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದುವರೆಗೆ 69, 419 ಮಂದಿ ಈ ಕೊರೋನಾದಿಂದ ಮೃತಪಟ್ಟಿದ್ದಾರೆ.
12, 73, 794 ಮಂದಿಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾ ಸೋಂಕು ಹರಡಿರುವುದು ಅಮೆರಿಕಾದಲ್ಲಿ. ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ಅತೀ ಹೆಚ್ಚು ಮಂದಿಗೆ ಕೊರೋನಾ ಸೋಂಕು ತಗುಲಿದೆ. ಇದುವರೆಗೆ ಅಮೆರಿಕಾದಲ್ಲಿ 3, 37, 274 ಮಂದಿಯಲ್ಲಿ ಕೊರೋನಾ ಪತ್ತೆಯಾಗಿವೆ. ಜರ್ಮನಿಯಲ್ಲಿ 1,00, 123 ಜನರಿಗೆ ಕೊರೋನಾ ತಗುಲಿದೆ. ಫ್ರಾನ್ಸ್ ನಲ್ಲು 93, 780 ಮಂದಿ ಕೊರೋನಾದಿಂದ ನರಳುತ್ತಿದ್ದಾರೆ.
ಕೊರೋನಾ ತವರು ಚೀನಾದಲ್ಲಿ82, 602 ಜನ ಕೊರೋನಾದಿಂದ ಹೈರಾಣಾಗಿದ್ದಾರೆ. ಇರಾನ್ ನಲ್ಲಿ 58, 226 ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಇಂಗ್ಲೆಂಡಿನಲ್ಲಿ 48, 440 ಮಂದಿ ಕೊರೋನಾ ಸೋಂಕಿನಿಂದ ಬಳಲುತ್ತಿದ್ದಾರೆ. ಟರ್ಕಿಯಲ್ಲಿ 27, 069 ಕೊರೋನಾ ಪ್ರಕರಣಗಳು ಬೆಳಕಿಗೆ ಬಂದಿವೆ.
ಅತೀ ಹೆಚ್ಚು ಕೊರೋನಾ ಪ್ರಕರಣ ಮತ್ತೆಯಾಗಿರುವ ಅಮೆರಿಕದಲ್ಲಿ ನ್ಯೂಯಾರ್ಕ್ ನಲ್ಲಿ1, 23, 160 ಮಂದಿಗೆ ಸೋಂಕು ತಗುಲಿದ್ದು, 4159 ಮಂದಿ ಮೃತಪಟ್ಟಿದ್ದಾರೆ. ನ್ಯೂಜರ್ಸಿಯಲ್ಲಿ 37, 505 ಮಂದಿಗೆ ಕೊರೋನಾ ವೈರಸ್ ಹರಡಿದೆ… 917 ಮಂದಿ ಈ ಮಹಾಮಾರಿಗೆ ಬಲಿಯಾಗಿದ್ದಾರೆ. ಮಿಚಿಗನ್ ನಲ್ಲಿ 15, 718 ಮಂದಿಗೆ ಕೊರೋನಾ ತಗುಲಿದೆ. 617ಮಂದಿ ಜೀವ ತೆತ್ತಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ 15, 151 ಕೊರೋನಾ ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, 349 ಮಂದಿ ಅಸುನೀಗಿದ್ದಾರೆ.
ಇನ್ನು ಇಟಲಿಯಲ್ಲಿ ಕಳೆದ ಎರಡು ವಾರಕ್ಕಿಂತ ಈ ವಾರ ಸಾವಿನ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಇದೇ ಮೊದಲ ಬಾರಿ 24 ಗಂಟೆಯಲ್ಲಿ 525 ಮಂದಿ ಮೃತಪಟ್ಟಿದ್ದಾರೆ. ಕೊರೋನಾ 2 ನೇ ಹಂತಕ್ಕೆ ಇಳಿಯುತ್ತಿರುವ ಲಕ್ಷಣ ಕಂಡುಬಂದಿದೆ.
ಹೀಗೆ ವಿಶ್ವದ ಬಹುತೇಕ ದೇಶಗಳು ಕೊರೋನಾ ವೈರಸ್ಸಿಂದ ಜರ್ಜರಿತವಾಗಿವೆ….ಎಲ್ಲಾ ಕಂಪನಿಗಳಿಗೆ ರಜೆ ಘೋಷಿಸಲಾಗಿದೆ…ಭಾರತದಲ್ಲೂ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಸೇವೆಗಳು ಇದೀಗ ಅಲಭ್ಯ … ಸದ್ಯ ದೇಶದಲ್ಲಿ ಲಾಕ್ ಡೌನ್ ಇದೆ. … ಏಪ್ರಿಲ್ 14 ರ ವರೆಗೆ ಲಾಕ್ ಡೌನ್ ಘೋಷಿಸಲಾಗಿದೆ … ಮದುವೆ, ಮುಂಜಿ ಸಮಾರಂಭಗಳು ರದ್ಧಾಗಿವೆ . ಅನಿವಾರ್ಯ ಪರಿಸ್ಥಿತಿಯಲ್ಲಿ ಬೆರಳೆಣಿಕೆಯಷ್ಟು ಮಂದಿ ಸೇರಿ ಮದುವೆ ಕಾರ್ಯಕ್ರಮ ಮಾಡಿದ್ದು ಕೂಡ ಇದೆ.
ಒಟ್ಟಿನಲ್ಲಿ ವಿಶ್ವದಲ್ಲಿ ಕೊರೋನಾ ಮಹಾಮಾರಿ ರುದ್ರ ನರ್ತನ ಮಾಡುತ್ತಿದೆ. ಜನರನ್ನು ಬಲಿ ಪಡೆಯುತ್ತಿದೆ. ಇದು ನಿಯಂತ್ರಣಕ್ಕೆ ಬರಲು ಸಾಮಾಜಿಕ ಅಂತರ ಕಾಯ್ದುಕೊಂಡು ಸರ್ಕಾರದ ಕ್ರಮಕ್ಕೆ ಸಾಥ್ ನೀಡಲೇ ಬೇಕಿದೆ.