ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್ ಆಟ ಇಲ್ಲಿ ನಡೆಯಲ್ಲ. ಶೆಟ್ಟರ್ ಬುಗರಿ ಎಲ್ಲ ಕಡೆ ತಿರುಗುತ್ತೆ ಎಂದಾದರೆ ಅವರೇ ಗೆಲ್ಲಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದರು.
ಇತ್ತೀಚಿಗೆ ನಿಧನರಾದ ಸಚಿವ ಸಿ.ಎಸ್. ಶಿವಳ್ಳಿ ಕುಟುಂಬ ಬಂಡಾಯ ಅಭ್ಯರ್ಥಿಗೆ ಹಣ ಕೊಟ್ಟಿದ್ದಾರೆ ಎಂಬ ಬಂಡಾಯ ಅಭ್ಯರ್ಥಿಯ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಶಿವಳ್ಳಿ ಕುಟುಂಬವೇ ಕಷ್ಟದಲ್ಲಿ ಇದೆ, ಈ ಸ್ಥಿತಿಯಲ್ಲಿ ಅವರು ಹೇಗೆ ಬಂಡಾಯ ಅಭ್ಯರ್ಥಿಗೆ ಹಣ ಕೊಡ್ತಾರೆ.ಆರೋಪ ಮಾಡಿದವರ ಮುಖಕ್ಕೆ ಉಗಿಬೇಕಿತ್ತು ಎಂದರು. ಕುಸುಮಾ ಶಿವಳ್ಳಿ ಪರ ಪ್ರಚಾರಕ್ಕೆ ಹೋಗ್ತಿದ್ದೀನಿ. 14, 15, 16 ಹಾಗೂ 17ರಂದು ವಾಸ್ತವ್ಯ ಮಾಡ್ತೇನೆ ಎಂದರು.