ಜಗ್ಗೇಶ್ ವಿವಾದ : ಅಂದು ಅಣ್ಣಾವ್ರು ಮಾಡಿದ್ದನ್ನು ಇಂದು ದರ್ಶನ್ ಅವರು ಮಾಡಲೇಬೇಕು!

Date:

ನಟ ದರ್ಶನ್ ಅವರ ಕುರಿತು ಜಗ್ಗೇಶ್ ಅವರು ಕೆಳಮಟ್ಟದಲ್ಲಿ ಮಾತನಾಡಿದ್ದಾರೆ ಮತ್ತು ಅವರ ಅಭಿಮಾನಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಆರೋಪ ಕೇಳಿಬಂದಿರುವುದು ನಿಮಗೆಲ್ಲರಿಗೂ ತಿಳಿದೇ ಇದೆ. ಹೌದು ಫೋನ್ ಕಾಲ್ ರೆಕಾರ್ಡಿಂಗ್ ವೈರಲ್ ಆಗಿದ್ದು ನವರಸ ನಾಯಕ ಜಗ್ಗೇಶ್ ಅವರು ದರ್ಶನ್ ಅಭಿಮಾನಿಗಳ ಕುರಿತು ಕೆಟ್ಟದಾಗಿ ಮಾತನಾಡಿದ್ದಾರೆ ಎನ್ನಲಾಗುತ್ತಿದೆ.

 

ಇನ್ನೂ ಈ ಕಾಲ್ ರೆಕಾರ್ಡಿಂಗ್ ಕುರಿತು ಇದೀಗ ಮತ್ತಷ್ಟು ಬೆಳವಣಿಗೆಗಳು ನಡೆದಿದ್ದು ಮೈಸೂರಿನಲ್ಲಿ ಜಗ್ಗೇಶ್ ಅವರ ತೋತಾಪುರಿ ಚಿತ್ರೀಕರಣದ ಸ್ಥಳಕ್ಕೆ ದರ್ಶನ್ ಅಭಿಮಾನಿಗಳು ತೆರಳಿ ಜಗ್ಗೇಶ್ ಅವರಿಗೆ ಮುತ್ತಿಗೆ ಹಾಕಿದ್ದಾರೆ. ಅಷ್ಟೇ ಅಲ್ಲದೆ ನಲವತ್ತು ವರ್ಷಗಳ ಕಾಲ ಚಿತ್ರರಂಗದಲ್ಲಿ ಕೆಲಸ ಮಾಡಿರುವ ಹಿರಿಯ ಕಲಾವಿದರಿಗೆ ಯಾವುದೇ ರೀತಿಯ ಗೌರವವಿಲ್ಲದೆ ಏಕವಚನದಲ್ಲಿ ಮಾತನಾಡಿ ಅವಾಜ್ ಹಾಕಿದ್ದಾರೆ.

 

 

ಜಗ್ಗೇಶ್ ಅವರು ನಾನು ಏನೂ ಮಾತನಾಡಿಲ್ಲ ಎಂದು ಪದೇ ಪದೇ ಹೇಳುತ್ತಿದ್ದರೂ ಸಹ ಹಿರಿಯ ಕಲಾವಿದ ಎಂಬುದನ್ನು ನೋಡದೆ ಬಾಯಿಗೆ ಬಂದಂತೆ ಏಕವಚನದಲ್ಲಿ ದರ್ಶನ್ ಅಭಿಮಾನಿಗಳು ಮಾತನಾಡಿದ್ದಾರೆ. ಅಲ್ಲಿ ನೆರೆದಿದ್ದ ದರ್ಶನ್ ಅಭಿಮಾನಿಗಳಿಗೆ ಜಗ್ಗೇಶ್ ಅವರ ಮಾತನ್ನು ಕೇಳುವ ತಾಳ್ಮೆ ಇರಲಿಲ್ಲ ತಮಗೆ ಇಚ್ಛೆ ಬಂದಂತೆ ಜಗ್ಗೇಶ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

 

 

 

ಇನ್ನು ದರ್ಶನ್ ಅಭಿಮಾನಿಗಳು ಚಿತ್ರೀಕರಣದ ಸ್ಥಳಕ್ಕೆ ಭೇಟಿ ನೀಡಿ ಅವರ ವಿರುದ್ಧ ಅವಾಜ್ ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಕರ್ನಾಟಕದಾದ್ಯಂತ ಆ ವಿಡಿಯೋ ವೈರಲ್ ಆಗಿರುವುದು ಎಲ್ಲರಿಗೂ ತಿಳಿದೇ ಇದೆ ಆದರೆ ದರ್ಶನ್ ಅವರಿಗೆ ಇದು ತಲುಪಿಲ್ಲವಾ? ದರ್ಶನ್ ಅವರು ಈ ವಿಡಿಯೋ ಕುರಿತು ಯಾಕೆ ಮಾತನಾಡುತ್ತಿಲ್ಲ? ಅವರ ಅಭಿಮಾನಿಗಳು ಈ ರೀತಿ ಹಿರಿಯ ಕಲಾವಿದನಿಗೆ ಗೌರವ ಕೊಡದೆ ವರ್ತಿಸುತ್ತಿದ್ದರು ಸಹ ದರ್ಶನ್ ಅವರು ಕೈಕಟ್ಟಿ ಕುಳಿತಿರುವುದೇಕೆ?

 

 

 

ಇದೇ ರೀತಿ ಹಿಂದೊಮ್ಮೆ ವಿಷ್ಣುವರ್ಧನ್ ಅವರ ಕಾರನ್ನು ತಡೆದು ರಾಜ್ ಕುಮಾರ್ ಅವರ ಅಭಿಮಾನಿಗಳು ಅವಾಜ್ ಹಾಕಿದಾಗ ರಾಜಣ್ಣ ಅವರೇ ಸ್ವತಃ ಮುಂದೆ ಬಂದು ನೀವು ಈ ರೀತಿ ಮಾಡಿದರೆ ನನಗೆ ಬೇಜಾರಾಗುತ್ತದೆ , ಅವರೂ ಒಬ್ಬರು ನಟರು ಅವರ ವಿರುದ್ಧ ಹೀಗೆಲ್ಲ ಮಾಡಬಾರದು ನನ್ನ ಅಭಿಮಾನಿಗಳಾಗಿದ್ದರೆ ಯಾರೂ ಸಹ ಇನ್ಮುಂದೆ ಈ ರೀತಿಯ ಕೆಲಸಗಳಲ್ಲಿ ತೊಡಗಬಾರದು ಎಂದು ಅಭಿಮಾನಿಗಳಿಗೆ ಸಂದೇಶವನ್ನು ನೀಡಿದರು. ಹೀಗೆ ವಿಷ್ಣುವರ್ಧನ್ ಅವರ ವಿರುದ್ಧ ತಿರುಗಿಬಿದ್ದಿದ್ದ ತಮ್ಮ ಅಭಿಮಾನಿಗಳಿಗೆ ಬುದ್ಧಿವಾದ ಹೇಳಿ ರಾಜ್ ಕುಮಾರ್ ಅವರು ಇನ್ನೂ ದೊಡ್ಡ ಮಟ್ಟಕ್ಕೆ ಹೋದರು.

 

ಇದೀಗ ಅಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿದ್ದು ದರ್ಶನ್ ಅವರು ಅಣ್ಣಾವ್ರ ನಡೆಯನ್ನ ಪಾಲಿಸಬೇಕಿದೆ. ಚಿತ್ರರಂಗದ ಆಧಾರ ಸ್ತಂಭವಾದ ರಾಜ್ ಕುಮಾರ್ ಅವರ ನಡೆ ಮತ್ತು ನುಡಿ ಯನ್ನು ಎಲ್ಲರೂ ಸಹ ಪಾಲಿಸುತ್ತಾ ಬಂದಿದ್ದಾರೆ ಇದೀಗ ದರ್ಶನ್ ಅವರು ಅಣ್ಣಾವ್ರು ಅಂದು ಮಾಡಿದ ಕೆಲಸವನ್ನ ಇಂದು ಮಾಡಿದರೆ ಅವರ ಮೇಲಿನ ಗೌರವ ಮತ್ತಷ್ಟು ಹೆಚ್ಚುವುದರಲ್ಲಿ ಯಾವುದೇ ಅನುಮಾನವಿಲ್ಲ. ಮೂರನೆಯವರು ಮಾಡಿದ ಕೆಲಸದಿಂದ ಹಿರಿಯ ಕಲಾವಿದನಿಗೆ ಸಾರ್ವಜನಿಕ ಸ್ಥಳದಲ್ಲಿ ಅವಮಾನವಾಗಿದೆ , ಈಗಲಾದರೂ ದರ್ಶನ್ ಅವರು ಮುಂದೆ ಬಂದು ಈ ಸಮಸ್ಯೆಯನ್ನು ಬಗೆಹರಿಸಲೇಬೇಕು…

 

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...