ಜನಕ್ಕೋಸ್ಕರ ಸೈಯದ್ ಅನ್ನಭಾಗ್ಯ

0
45

ಕೊರೋನಾವೈರಸ್ ಎರಡನೇ ಅಲೆ ಭಾರತದಲ್ಲಿ ಜೋರಾಗಿದ್ದು ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಏರುತ್ತಲೇ ಇದೆ. ಸೋಂಕಿತರ ಸಂಖ್ಯೆ ಹೆಚ್ಚಾದಷ್ಟು ಬೆಡ್ ಮತ್ತು ಆಕ್ಸಿಜನ್ ಕೊರತೆ ಉಂಟಾಗಿ ಸಾಯುವವರ ಸಂಖ್ಯೆಯೂ ಹೆಚ್ಚುತ್ತಿದ್ದು ಜನರು ಭಯಭೀತಗೊಂಡಿದ್ದಾರೆ.

 

ಇದರ ನಡುವೆ ಕರ್ನಾಟಕ ರಾಜ್ಯ ಸರ್ಕಾರ ರಾಜ್ಯಾದ್ಯಂತ ಮತ್ತೆ ಕಠಿಣ ಲಾಕ್ ಡೌನ್ ಅನ್ನು ಘೋಷಿಸಿದ್ದು ಬಡ ಕುಟುಂಬದವರು, ದಿನಗೂಲಿ ಕಾರ್ಮಿಕರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ಬಂದಿದೆ. ಇಂತಹ ಸಮಯದಲ್ಲಿ ಹಲವಾರು ಮಂದಿ ಸೆಲೆಬ್ರಿಟಿಗಳು ಹಾಗೂ ಜನಸಾಮಾನ್ಯರು ತಮ್ಮ ಕೈಲಾದ ಸಹಾಯ ಗಳನ್ನು ಕಷ್ಟದಲ್ಲಿರುವ ಜನರಿಗೆ ಮಾಡುತ್ತಿದ್ದಾರೆ..

 

 

ಇದೀಗ ತುಮಕೂರಿನ ಸೈಯದ್ ಎಂಬ ವ್ಯಕ್ತಿ ತನ್ನ ಗುಜರಿ ಅಂಗಡಿಯನ್ನು ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ವಿಭಿನ್ನ ರೀತಿಯಲ್ಲಿ ಬಳಸಿಕೊಂಡಿದ್ದಾನೆ. ಹೌದು ತುಮಕೂರಿನ ರಿಂಗ್ ರೋಡ್ ನ ಶಾದಿ ಮಹಲ್ ಬಳಿ ಗುಜರಿ ಕೆಲಸ ಮಾಡುವ ಸೈಯದ್ ರಾಜ್ಯದಾದ್ಯಂತ ಲಾಕ್ ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ತನ್ನ ಅಂಗಡಿ ಸುತ್ತಮುತ್ತ ಇರುವ ಬಡಜನರಿಗೆ ಸಹಾಯ ಆಗಲೆಂದು ಉಚಿತ ಊಟದ ವ್ಯವಸ್ಥೆಯನ್ನು ಮಾಡಿದ್ದಾನೆ.

 

 

ಅಲ್ಲೇ ಊಟವನ್ನು ಬೇಯಿಸಿ ಪ್ಯಾಕೆಟ್ ಗಳಲ್ಲಿ ಪ್ಯಾಕ್ ಮಾಡಿ ಸಾಲು ಸಾಲಾಗಿ ಜೋಡಿಸಿ ಕಷ್ಟದಲ್ಲಿರುವ, ಊಟವಿಲ್ಲದೆ ನರಳುತ್ತಿರುವ ಜನರಿಗೆ ಊಟವನ್ನು ನೀಡುತ್ತಿದ್ದಾನೆ ಈ ಸೈಯದ್. ಇಂತಹ ಸಮಯದಲ್ಲಿ ಗುಜರಿ ಕೆಲಸ ಮಾಡುವ ಒಬ್ಬ ವ್ಯಕ್ತಿ ಈ ರೀತಿಯ ಸಮಾಜ ಚಪ್ಪಾಳೆ ತಟ್ಟು ವಂತಹ ಕೆಲಸ ಮಾಡುತ್ತಿರುವುದು ನಿಜಕ್ಕೂ ಗ್ರೇಟ್.

 

 

LEAVE A REPLY

Please enter your comment!
Please enter your name here