ಜನ ಬರಲಿಲ್ಲ , ಏಣಿ ಮೇಲೆ ಶವ ಸಾಗಿಸಿದ ಮನಕಲಕುವ ಸನ್ನಿವೇಶ

Date:

ಎತ್ತ ಸಾಗುತ್ತಿದೆ ಸಮಾಜ? ಎತ್ತ ಸಾಗುತ್ತಿದೆ ಮಾನವೀಯತೆ? ಮಾನವನ ಒಳ್ಳೆಯ ದಿನಗಳು ಮುಗಿದು ಹೋಯಿತಾ? ಸಹಾಯ ಮನೋಭಾವ ಸತ್ತುಹೋಯಿತಾ? ನಾನು ಚೆನ್ನಾಗಿದ್ದರೆ ಸಾಕು ಬೇರೆಯವರು ಹೇಗಾದರೂ ಸಾಯಲಿ ಎಂಬ ಮನೋಭಾವನೆ ಎಲ್ಲರಲ್ಲಿಯೂ ಮೂಡಿಬಿಡ್ತಾ? ಎಂಬ ಸಾಲು ಸಾಲು ಪ್ರಶ್ನೆಗಳು ಈ ಘಟನೆಯನ್ನು ನೋಡಿದರೆ ಮನಸ್ಸಿನಲ್ಲಿಯೇ ಹುಟ್ಟಿಬಿಡುತ್ತದೆ.

 

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಟಗರುಪುರ ಎಂಬ ಗ್ರಾಮದಲ್ಲಿ ಮಹಾದೇವ (60) ಎಂಬ ವ್ಯಕ್ತಿ ಏಕಾಂಗಿಯಾಗಿ ವಾಸಿಸುತ್ತಿದ್ದ. ತರಕಾರಿ ಮಾರಿ ದುಡಿದು ಜೀವನ ಸಾಗಿಸುತ್ತಿದ್ದ ಈತನಿಗೆ ಇತ್ತೀಚೆಗಷ್ಟೇ ಅನಾರೋಗ್ಯ ಉಂಟಾಗಿ ಮೃತಪಟ್ಟಿದ್ದಾರೆ. ವಯಸ್ಸಾದವರು ವಯಸ್ಸು ಮುಗಿದು ಸಾವನ್ನಪ್ಪಿದರು ಆದರೆ ಜನ ಹಾಗೆ ಚಿಂತಿಸಲೇ ಇಲ್ಲ..

 

ಅಯ್ಯಯ್ಯೋ ಎಲ್ಲಾ ಕಡೆ ಕೊರೋನಾ ಬಂದಿದೆ ಈ ಸತ್ತ ಮುದುಕನನ್ನು ಯಾರೋ ಮುಟ್ಟಬೇಡಿ, ಇವನಿಗೂ ಕೊರೋನಾ ಬಂದು ಸತ್ತಿರಬಹುದು ಯಾರೂ ಶವಸಂಸ್ಕಾರ ಮಾಡಲು ಜಾಗ ಕೊಡಬೇಡಿ, ನಮ್ಮ ಊರಿನಲ್ಲಿ ಈತನ ಅಂತ್ಯಸಂಸ್ಕಾರ ಮಾಡುವುದು ಬೇಡ, ಈತನಿಂದ ಇತರರಿಗೂ ಪುರಾಣ ಹಬ್ಬುವ ಸಾಧ್ಯತೆಯಿದೆ.. ಇದು ಆ ಊರಿನ ಜನರಿಂದ ಆ ಸತ್ತ ವ್ಯಕ್ತಿಯ ಕುರಿತು ಬಂದ ವಿಧವಿಧವಾದ ಮಾತುಗಳು..

 

 

ಒಟ್ಟಿನಲ್ಲಿ ಆತನ ಶವ ಸಂಸ್ಕಾರ ಮಾಡಲು ಯಾರೂ ಮುಂದೆ ಬರಲಿಲ್ಲ ಮತ್ತು ಅಂತ್ಯ ಸಂಸ್ಕಾರ ಮಾಡಲು ಊರಿನಲ್ಲಿ ಜಾಗವನ್ನು ಕೊಡಲಿಲ್ಲ. ಹೀಗಾಗಿ ಕೆಲ ಯುವಕರ ಗುಂಪೊಂದು ಬೈಕಿಗೆ ಏಣಿ ಕಟ್ಟಿಕೊಂಡು ಅದರ ಮೇಲೆ ಆ ವ್ಯಕ್ತಿಯ ಶವವನ್ನು ಅಡ್ಡ ಇಟ್ಟು ಊರಿನಾಚೆ ಕೊಂಡೊಯ್ದು ಶವಸಂಸ್ಕಾರ ಮಾಡಿದರು. ಆ ವ್ಯಕ್ತಿಗೆ ಕೊರೊನ ಸೊಂಕು ಕೂಡ ಇರಲಿಲ್ಲ, ವಯಸ್ಸಾದ ನಂತರ ಸತ್ತ ವ್ಯಕ್ತಿಯನ್ನು ಕೂಡ ಅಂತ್ಯಸಂಸ್ಕಾರ ಮಾಡಲು ಯಾರೂ ಬರಲಿಲ್ಲ ಮತ್ತು ಅಂತ್ಯ ಸಂಸ್ಕಾರ ಮಾಡಲು ಸಹ ಬಿಡಲಿಲ್ಲ ಎಂದರೆ ಮಾನವೀಯತೆ ಎಲ್ಲಿ ಸತ್ತಿದೆ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡದೇ ಇರಲಾರದು..

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...