ಜಮೀರ್ ಅಹ್ಮದ್ ಹೇಳಿಕೆಯನ್ನು ವೈಯಕ್ತಿಕವಾಗಿ ಖಂಡಿಸುತ್ತೇನೆ: ಸಿಪಿ ಯೋಗೇಶ್ವರ್
ರಾಮನಗರ: ಜಮೀರ್ ಅಹ್ಮದ್ ಹೇಳಿಕೆಯನ್ನು ವೈಯಕ್ತಿಕವಾಗಿ ಖಂಡಿಸುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಗೆದ್ದರೆ ಕಾಂಗ್ರೆಸ್ ಯೋಜನೆ, ಕೆಲಸ ಮಾಡಿದೆ ಅಂತಾ ಅಂದುಕೊಳ್ಳಬೇಕು. ಸೋತರೆ ಪಕ್ಷಾಂತರ ಕಾರಣಕ್ಕೆ ಜನ ಸೋಲಿಸಿದ್ದಾರೆ ಅಂದುಕೊಳ್ಳಬೇಕು. ಪಕ್ಷಾಂತರ ಕಾರಣಕ್ಕೆ ಜನ ಸೋಲಿಸಿದ್ದಾರೆ ಎಂದು ತಿಳಿದುಕೊಳ್ಳಬೇಕು. ಜಮೀರ್ ಅಹ್ಮದ್ ಹೇಳಿಕೆಯನ್ನು ವೈಯಕ್ತಿಕವಾಗಿ ಖಂಡಿಸುತ್ತೇನೆ. ಪ್ರತಿಯೊಬ್ಬ ನಾಯಕನ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ ಎಂದು ಬೇಸರ ಹೊರಹಾಕಿದರು.
ಬಿಜೆಪಿ, JDS ಕೆಲಸ ಚನ್ನಪಟ್ಟಣದಲ್ಲಿ ಬಹಳಷ್ಟು ವರ್ಕೌಟ್ ಆಗಿದೆ. ಯಾಕೆ ಅಂದ್ರೆ ನಾವೇ ಇಲ್ಲಿ ಬಿಜೆಪಿ ಕಾರ್ಯಕರ್ತರನ್ನು ಕಟ್ಟಿದ್ದೇವೆ. ಇದುವರೆಗೂ ತೆಗೆದುಕೊಂಡಿರುವ ಗರಿಷ್ಠ ಮತಗಳು 85 ಸಾವಿರ. ಈ ಚುನಾವಣೆ ಗೆಲ್ಲಬೇಕಾದರೆ 1 ಲಕ್ಷ ಮತ ತೆಗೆದುಕೊಳ್ಳಬೇಕು. ಸೋತಿದ್ದೇನೆ ಅಂತಾ ಅಲ್ಲ, ಇಲ್ಲಿ ಸಮಬಲದ ಹೋರಾಟ ಇದೆ. ಒಕ್ಕಲಿಗ ಮತ ಕ್ರೋಢೀಕರಣ ಆಗಿದ್ದರೆ ಫಲಿತಾಂಶ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದರು.