No menu items!
15.4 C
Munich
Sunday, September 27, 2026

‘ಎಣ್ಣೆ’ ಪ್ರಿಯರಿಗೆ ಶಾಕ್..! ನವೆಂಬರ್ 20 ರಿಂದ ಮದ್ಯದಂಗಡಿ ಬಂದ್

Must read

‘ಎಣ್ಣೆ’ ಪ್ರಿಯರಿಗೆ ಶಾಕ್..! ನವೆಂಬರ್ 20 ರಿಂದ ಮದ್ಯದಂಗಡಿ ಬಂದ್

ಬೆಂಗಳೂರು: ವಿಪರೀತ ಲಂಚ, ಅಕ್ರಮ ಲೈಸೆನ್ಸ್‌ ನೀಡುವಿಕೆ ಸೇರಿದಂತೆ ಅಬಕಾರಿ ಇಲಾಖೆಯ ಭಾರಿ ಭ್ರಷ್ಟಾಚಾರವನ್ನು ವಿರೋಧಿಸಿ ಫೆಡರೇಷನ್‌ ಆಫ್ ವೈನ್‌ ಮರ್ಚೆಂಟ್ಸ್‌ ಅಸೋಸಿಯೇಷನ್‌ ಕರ್ನಾಟಕ ನೇತೃತ್ವದಲ್ಲಿ ಮದ್ಯ ಸನ್ನದುದಾರರು ರಾಜ್ಯಾದ್ಯಂತ ನವೆಂಬರ್‌ 20ರಂದು ಮದ್ಯದಂಗಡಿ ಬಂದ್‌ ಮಾಡಲು ನಿರ್ಧರಿಸಿದೆ.
ಹೌದು ಅಬಕಾರಿ ಅಧಿಕಾರಿಗಳ ವಿರುದ್ಧ ಮದ್ಯದಂಗಡಿ ಮಾಲೀಕರು ಸಮರಕ್ಕೆ ಮುಂದಾಗಿದ್ದು, ನವೆಂಬರ್ 20ರಂದು ಕರ್ನಾಟಕದಾದ್ಯಂತ ಮದ್ಯ ಮಾರಾಟ ಬಂದ್ಗೆ ಕರೆ ನೀಡಲಾಗಿದೆ.
ಈ ಬಗ್ಗೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಾಜ್ಯ ವೈನ್ ಮರ್ಚೆಂಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನವೆಂಬರ್ 20ರಂದು ಕರ್ನಾಟಕದಾದ್ಯಂತ ಎಂಎಸ್ಐಎಲ್ ಹೊರತುಪಡಿಸಿ ಎಲ್ಲಾ ಬಾರ್ಗಳು ಬಂದ್ಗೆ ಕರೆ ನೀಡಿರುವುದಾಗಿ ತಿಳಿಸಿದ್ದಾರೆ.
ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರುತ್ತಿದೆ. ನಮ್ಮ ಜೊತೆ ಸಿಎಂ, ಅಬಕಾರಿ ಸಚಿವರು ಮೀಟಿಂಗ್ ಮಾಡಬೇಕು. ನಾವು 500-900 ಕೋಟಿ ರೂ. ಲಂಚದ ಬಗ್ಗೆ ಎಂದೂ ಮಾತನಾಡಿಲ್ಲ. ತಪ್ಪು ಮಾಹಿತಿಯನ್ನು ಪ್ರಧಾನಿಗೆ ಯಾರು ಕೊಟ್ಟರೋ ಗೊತ್ತಿಲ್ಲ. ಪ್ರಧಾನಿ ವಿಚಾರದ ಬಗ್ಗೆ ಏನೂ ಹೇಳಲ್ಲ ಎಂದಿದ್ದಾರೆ.
ಸಿಎಲ್ 7 ಬಾರ್ಗಳಿಗೆ ಬೇಕಾ ಬಿಟ್ಟಿ ಲೈಸನ್ಸ್ ಕೊಡಲಾಗುತ್ತಿದೆ. ಅಧಿಕಾರಿಗಳು ಪರಿಶೀಲನೆ ನಡೆಸುವುದೇ ಇಲ್ಲ. ಆರ್ಟಿಐ ಕಾರ್ಯಕರ್ತರ ಹೇಳಿಕೆ ಬಗ್ಗೆ ಮಾತನಾಡಿರೋದು ಸರಿಯಲ್ಲ. ನಮ್ಮ ಬೇಡಿಕೆಗಳ ಬಗ್ಗೆ ನಾವು ಹೋರಾಟ ಮಾಡುತ್ತಿದ್ದೇವೆ. ನಮ್ಮ ಬೇಡಿಕೆ ಬಗ್ಗೆ ಸರ್ಕಾರ ತಿರ್ಮಾನ ತೆಗೆದುಕೊಂಡರೆ ಒಳ್ಳೇದು ಎಂದು ಹೇಳಿದ್ದಾರೆ.

- Advertisement -spot_img

More articles

- Advertisement -spot_img

Latest article