ಜಾತಿಜನಗಣತಿ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ: ಬಿವೈ ವಿಜಯೇಂದ್ರ

Date:

ಜಾತಿಜನಗಣತಿ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ: ಬಿವೈ ವಿಜಯೇಂದ್ರ

ಜಾತಿಜನಗಣತಿ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ಕೇಂದ್ರದಿಂದ ಜಾತಿ ಆಧಾರಿತ ಜನಗಣತಿ ನಡೆಸುವ ವಿಚಾರವಾಗಿ ಮಾತನಾಡಿದ ಅವರು, ರಾಜ್ಯ ಸರ್ಕಾರಗಳಿಗೆ ಜಾತಿ ಜನಗಣತಿ ಮಾಡುವ ಅಧಿಕಾರ ಇಲ್ಲ. ಇದು ಗೊತ್ತಿದ್ರೂ ಸಿದ್ದರಾಮಯ್ಯ ಸರ್ಕಾರ ಜಾತಿಗಳ ನಡುವೆ ವಿಷ ಬೀಜ ಬಿತ್ತಲು ಮುಂದಾಗಿದೆ.

ಕೇಂದ್ರ ಸರ್ಕಾರ ಬಹಳ ಉತ್ತಮ ನಿರ್ಧಾರ ತೆಗೆದುಕೊಂಡಿದೆ. ಜನಗಣತಿ ಜತೆಗೆ ಜಾತಿ ಜನಗಣತಿಯೂ ಮಾಡುವ ನಿರ್ಧಾರ ಮಾಡಲಾಗಿದೆ. 1931 ರ ನಂತರ ದೇಶದಲ್ಲಿ ಜಾತಿ ಜನಗಣತಿ ನಡೆದಿರಲಿಲ್ಲ. ಎಲ್ಲ ಸಮುದಾಯಗಳಿಗೂ ನ್ಯಾಯ ಸಿಗಬೇಕು ಅನ್ನೋದು ಮೋದಿಯವರ ಉದ್ದೇಶ. ಎಲ್ಲರೂ ಈ ನಿರ್ಧಾರ ಸ್ವಾಗತ ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿ ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತಿ ಸಮಾಜ ಒಡೆಯುವ ಕೆಲಸ ಕಾಂಗ್ರೆಸ್ ಮಾಡ್ತಿದೆ. ಕೇಂದ್ರದ ನಿರ್ಧಾರ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೂ ಅಚ್ಚರಿ ತಂದಿದೆ ಎಂದರು

ಖರ್ಗೆಯವರೇ ಹೇಳಿದ್ದಾರೆ ಇದು ಔಟ್‌ಡೇಟೆಡ್ ವರದಿ ಅಂತಾ. ಈಗಲಾದರೂ ರಾಜ್ಯದ ಜಾತಿ ಜನಗಣತಿಗೆ ಇತಿಶ್ರಿ ಹಾಡಲಿ. ಸಿದ್ದರಾಮಯ್ಯ ಜಾತಿಗಳ ನಡುವೆ ಕಂದಕ ಸೃಷ್ಟಿಸಲು ಹೊರಟಿದ್ದಾರೆ. ಕಾಂಗ್ರೆಸ್ ಸರ್ಕಾರದ ಬಳಿ ಕಾಂತರಾಜು ವರದಿಯ ಪ್ರತಿಯೇ ಇಲ್ಲ. ಜಯಪ್ರಕಾಶ್ ಹೆಗ್ಡೆ ಯಾವ ಆಧಾರದಲ್ಲಿ ವರದಿ ಕೊಟ್ರು ಹಾಗಾದ್ರೆ? ಸಿದ್ದರಾಮಯ್ಯ ವರದಿಯಲ್ಲಿ ಸದುದ್ದೇಶವಂತೂ ಇಲ್ಲ. ಈಗಲಾದರೂ ಸಿದ್ದರಾಮಯ್ಯಗೆ ಭಗವಂತ ಬುದ್ಧಿ ಕೊಡಲಿ, ಕೇಂದ್ರದ ಪರ ಸಿದ್ದರಾಮಯ್ಯ ನಿಲ್ಲಲಿ ಎಂದು ತಿಳಿಸಿದರು.

Share post:

Subscribe

spot_imgspot_img

Popular

More like this
Related

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...

ಚಳಿಗೆ ನಲುಗಿದ ಉತ್ತರ ಕರ್ನಾಟಕ; 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

ಚಳಿಗೆ ನಲುಗಿದ ಉತ್ತರ ಕರ್ನಾಟಕ; 5 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಬೆಂಗಳೂರು:...

ಹೆಚ್ಚುವರಿ 5 ಟಿಎಂಸಿ ನೀರನ್ನು ಭೀಮಾ ನದಿ ಪ್ರದೇಶಕ್ಕೆ ನೀಡಲು ಡಿ.ಕೆ. ಶಿವಕುಮಾರ್ ಮನವಿ

ಹೆಚ್ಚುವರಿ 5 ಟಿಎಂಸಿ ನೀರನ್ನು ಭೀಮಾ ನದಿ ಪ್ರದೇಶಕ್ಕೆ ನೀಡಲು ಡಿ.ಕೆ....

ಸಚಿವ ಜಮೀರ್ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ʼಗೆ ಲೋಕಾಯುಕ್ತ ಶಾಕ್..!

ಸಚಿವ ಜಮೀರ್ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ʼಗೆ ಲೋಕಾಯುಕ್ತ ಶಾಕ್..! ಬೆಂಗಳೂರು: ಸಚಿವ...