ಜಾತಿ ಗಣತಿಯಿಂದ ಯಾರೂ ಕೂಡ ಭಯಪಡುವ ಅಗತ್ಯ ಇಲ್ಲ: ಯತೀಂದ್ರ ಸಿದ್ದರಾಮಯ್ಯ
ಮೈಸೂರು: ಜಾತಿ ಗಣತಿಯಿಂದ ಯಾರೂ ಕೂಡ ಭಯಪಡುವ ಅಗತ್ಯ ಇಲ್ಲ ಎಂದು ಎಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಈಗ ನಡೆದಿರುವ ಗಣತಿಯೇ ವೈಜ್ಞಾನಿಕವಾಗಿದೆ. ಸುಖಾಸುಮ್ಮನೆ ವಿರೋಧ ಮಾಡುವುದು ಸರಿಯಲ್ಲ. ಕೆಲವರು ಪೂರ್ವಾಗ್ರಹಪೀಡಿತರಾಗಿ ವಿರೋಧ ಮಾಡುವುದು ಸರಿಯಲ್ಲ. ಯಾರೂ ಭಯಪಡುವ ಅಗತ್ಯ ಇಲ್ಲ.
ಜಾತಿ ಗಣತಿಯಿಂದ ಕೆಲವರು ನಮ್ಮ ಸಂಖ್ಯೆಯಲ್ಲಿ ಕಡಿಮೆ ಆಗಿದೆ ಎಂದು ವಿರೋಧ ಮಾಡುತ್ತಿದ್ದಾರೆ. ಈಗಾಗಲೇ 2011-12 ರ ಗಣತಿ ಪ್ರಕಾರ ರಾಜ್ಯದಲ್ಲಿ ಎಸ್ಪಿ ಎಸ್ಟಿ, ಅಲ್ಪಸಂಖ್ಯಾತ ಜನ ಸಂಖ್ಯೆಗೆ ಹೋಲಿಸಿದರೆ ಸರಿಯಾಗಿ ಇದೆ. ಮರುಗಣತಿ ಮಾಡೋದನ್ನ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಬೇಕು. ಯಾರೂ ಕೂಡ ಭಯಪಡುವ ಅಗತ್ಯ ಇಲ್ಲ ಎಂದರು.