ಜಾತಿ ನಿಂದನೆ ಆರೋಪ ಮಾಡುತ್ತಾ ದಲಿತ ಪರ ಸಂಘಟನೆಗಳು ಬಿಡದಿಯ ಇನ್ನೋವೇಟಿವ್ ಫಿಲ್ಮ್ ಸಿಟಿ ಎದುರು ಪ್ರತಿಭಟನೆಯನ್ನು ನಡೆಸಿದವು. ಹೌದು ದಲಿತ ಪರ ಸಂಘಟನೆಗಳು ಬಿಡದಿಯ ಇನೋವೇಟಿವ್ ಫಿಲ್ಮ್ ಸಿಟಿ ಎದುರು ಧರಣಿ ನಡೆಸಲು ಕಾರಣವೂ ಇದೆ ಅದೇನೆಂದರೆ ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕೊಟ್ಟೂರು. ಬಿಗ್ ಬಾಸ್ ಮನೆಯಲ್ಲಿ ನಡೆಯುವ ಎಲ್ಲ ವಿಷಯ ಟಿವಿಯಲ್ಲಿ ಪ್ರಸಾರವಾಗುತ್ತದೆ ಅಂತ ತಿಳಿದಿದ್ದರೂ ಸಹ ಈ ಚೈತ್ರಾ ಕೋಟೂರ್ ಮಾಡಿರುವ ಒಂದು ತಪ್ಪಿನಿಂದ ಇದೀಗ ಬಿಗ್ ಬಾಸ್ ಗೆ ಕಪ್ಪು ಚುಕ್ಕೆ ಅಂಟಿಕೊಂಡಿದೆ.
ಹೌದು ಚೈತ್ರಾ ಕೊಟ್ಟೂರು ಅವರ ಜೊತೆ ಹರೀಶ್ ರಾಜ್ ಅವರು ಸರಿಯಾಗಿ ಮಾತನಾಡುತ್ತಿಲ್ಲ ಎಂಬ ಕಾರಣಕ್ಕೆ ಚೈತ್ರಾ ಕೊಟ್ಟೂರು ಹರೀಶ್ರಾಜ್ ಅವರ ಬಳಿ ನನ್ನ ಜೊತೆ ಯಾಕೆ ಮಾತನಾಡುತ್ತಿಲ್ಲ ನಾನೇನು ಅಸ್ಪೃಶ್ಯಳೇ ಎಂದು ಕೇಳಿದ್ದಳು.. ಚೈತ್ರಾ ಕೊಟ್ಟೂರು ಅವರು ಆಡಿದ ಈ ಮಾತಿನಿಂದ ದಲಿತ ಪರ ಸಂಘಟನೆಗಳು ರೊಚ್ಚಿಗೆದ್ದಿದ್ದು ಇನೋವೇಟಿವ್ ಫಿಲ್ಮ್ ಸಿಟಿ ಎದುರು ಬಿಗ್ ಬಾಸ್ ಕಾರ್ಯಕ್ರಮದ ವಿರುದ್ಧ ಪ್ರತಿಭಟನೆ ನಡೆಸಿ ಚೈತ್ರಾ ಕೊಟ್ಟೂರು ಅವರ ವಿರುದ್ಧ ಪೊಲೀಸ್ ದೂರು ದಾಖಲಿಸುವುದಾಗಿ ಹೇಳಿದರು. ದಲಿತರ ಮತ್ತು ಅಂಬೇಡ್ಕರ್ ಅವರ ಬಗ್ಗೆ ಯಾರೇ ಮಾತನಾಡಿದರೂ ಸರಿ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಈ ಮೂಲಕ ಎಚ್ಚರಿಕೆ ನೀಡಿದರು. ಅಷ್ಟೇ ಅಲ್ಲದೆ ಈ ಕಾರ್ಯಕ್ರಮವನ್ನು ನಿರೂಪಿಸುತ್ತಿರುವ ಕಿಚ್ಚ ಸುದೀಪ್ ಅವರು ಚೈತ್ರಾ ಕೊಟ್ಟೂರು ಅವರ ಹೇಳಿಕೆಯ ವಿರುದ್ಧ ಮಾತನಾಡಬೇಕು ಇಲ್ಲದೇ ಹೋದರೆ ಸುದೀಪ್ ಅವರ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಖಡಕ್ ವಾರ್ನಿಂಗ್ ಸಹ ನೀಡಿದ್ದಾರೆ.