No menu items!
3.7 C
Munich
Tuesday, April 21, 2026

ತೆರೆಮೇಲೆ ಜೋಡಿ, ಬದುಕಲ್ಲೂ ಜೋಡಿ: ರಾಣವ್ ಗೌಡ-ರಾಧಾ ಭಗವತಿ ನಿಶ್ಚಿತಾರ್ಥ!

Must read

ತೆರೆಮೇಲೆ ಜೋಡಿ, ಬದುಕಲ್ಲೂ ಜೋಡಿ: ರಾಣವ್ ಗೌಡ-ರಾಧಾ ಭಗವತಿ ನಿಶ್ಚಿತಾರ್ಥ!

ತೆರೆಮೇಲೆ ನಟಿಸುವಾಗ ಕಲಾವಿದರ ನಡುವೆ ಪ್ರೀತಿ ಮೂಡಿ ಮದುವೆಯಾಗುವುದು ಸಾಮಾನ್ಯ. ಇದೀಗ ಕನ್ನಡದ ಟಿವಿ ಲೋಕದಲ್ಲಿ ಮತ್ತೊಂದು ಜೋಡಿ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿದೆ. ಜೀ ಕನ್ನಡದ ‘ಅಮೃತಧಾರೆ’ ಧಾರಾವಾಹಿಯಲ್ಲಿ ಜೆಡಿ ಪಾತ್ರ ಮಾಡುತ್ತಿರುವ ರಾಣವ್ ಗೌಡ ಹಾಗೂ ಕಲರ್ಸ್ ಕನ್ನಡದ ‘ಭಾರ್ಗವಿ ಎಲ್ಎಲ್ಬಿ’ ಧಾರಾವಾಹಿಯಲ್ಲಿ ಭಾರ್ಗವಿ ಪಾತ್ರ ನಿರ್ವಹಿಸುತ್ತಿರುವ ರಾಧಾ ಭಗವತಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಇಬ್ಬರೂ ಪ್ರಸ್ತುತ ಬೇರೆ ಬೇರೆ ಚಾನೆಲ್ಗಳಲ್ಲಿ ಕೆಲಸ ಮಾಡುತ್ತಿದ್ದರೂ, ಇವರ ಪ್ರೀತಿಗೆ ಮೂಲವಾದದ್ದು ಅಮೃತಧಾರೆ ಧಾರಾವಾಹಿ. ಈ ಧಾರಾವಾಹಿಯಲ್ಲಿ ರಾಧಾ ಭಗವತಿ ‘ಮಲ್ಲಿ’ ಎಂಬ ಪಾತ್ರದಲ್ಲಿ ನಟಿಸುತ್ತಿದ್ದರು. ಮಲ್ಲಿಯದ್ದು ಜೆಡಿ ಪತ್ನಿಯ ಪಾತ್ರವಾಗಿತ್ತು. ಅದೇ ಸಮಯದಲ್ಲಿ ಇವರಿಬ್ಬರ ನಡುವೆ ಸ್ನೇಹ ಪ್ರೀತಿಗೆ ತಿರುಗಿದೆ ಎಂದು ಹೇಳಲಾಗುತ್ತಿದೆ.
ನಂತರ ರಾಧಾ ಅವರಿಗೆ ಭಾರ್ಗವಿ ಎಲ್ಎಲ್ಬಿ ಧಾರಾವಾಹಿಯಲ್ಲಿ ಮುಖ್ಯ ಪಾತ್ರ ಸಿಕ್ಕ ಹಿನ್ನೆಲೆ ಅವರು ‘ಅಮೃತಧಾರೆ’ಯಿಂದ ಹೊರನಡೆದರು.
ಇತ್ತೀಚೆಗೆ ರಾಣವ್ ಗೌಡ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಇಬ್ಬರೂ ಹಾರ ಹಾಕಿಕೊಂಡಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ‘ಫೈನಲಿ’ ಎಂಬ ಕ್ಯಾಪ್ಶನ್ ನೀಡಿರುವುದು ಗಮನಸೆಳೆದಿದೆ. ಇದರಿಂದ ಇವರು ಸದ್ದಿಲ್ಲದೆ ಮದುವೆಯಾಗಿದ್ದಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು.
ಆದರೆ, ಸ್ಪಷ್ಟೀಕರಣದಂತೆ ಇವರು ಮದುವೆಯಾಗಿಲ್ಲ; ನಿಶ್ಚಿತಾರ್ಥ ಮಾತ್ರ ಮಾಡಿಕೊಂಡಿದ್ದಾರೆ. ಶೀಘ್ರದಲ್ಲೇ ಮದುವೆ ನಡೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ತೆರೆಮೇಲೆ ಜೋಡಿಯಾಗಿ ಮಿಂಚಿದ್ದ ಇವರಿಬ್ಬರು ಇದೀಗ ಬದುಕಲ್ಲೂ ಒಂದಾಗುತ್ತಿರುವುದು ಅಭಿಮಾನಿಗಳಿಗೆ ಸಂತೋಷ ಹಾಗೂ ಅಚ್ಚರಿ ಎರಡನ್ನೂ ತಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಪ್ರಸ್ತುತ ರಾಣವ್ ಗೌಡ ಅವರು ‘ಅಮೃತಧಾರೆ’ ಜೊತೆಗೆ ಜೀ ಪವರ್ನ ‘ಶುಭಸ್ಯ ಶೀಘ್ರಂ ಧಾರಾವಾಹಿಯಲ್ಲೂ ನಟಿಸುತ್ತಿದ್ದಾರೆ. ಇನ್ನು ರಾಧಾ ಭಗವತಿ ‘ಭಾರ್ಗವಿ ಎಲ್ಎಲ್ಬಿ’ಯಲ್ಲಿ ಭಾರ್ಗವಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ತೆರೆಮೇಲೆ ಆರಂಭವಾದ ಪ್ರೀತಿ, ಈಗ ಬದುಕಿನ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ.

- Advertisement -spot_img

More articles

- Advertisement -spot_img

Latest article