ಸುಪ್ರೀಂ ಕೋರ್ಟ್ ನೀಡಿರುವ ಹೊಸ ತೀರ್ಪು ಮತ್ತು ಮಾಡಿರುವ ಹೊಸ ತಿದ್ದುಪಡಿಯ ಅಡಿಯಲ್ಲಿ ಇದೀಗ ಅಟ್ರಾಸಿಟಿ ಕಾಯ್ದೆಗೆ ಆನೆ ಬಲ ಬಂದಂತಾಗಿದೆ. ಹೌದು ಎಸ್ಸಿ ಮತ್ತು ಎಸ್ಟಿ ಜಾತಿಯ ಜನರನ್ನು ನಿಂದಿಸಿದರೆ ಈ ಹಿಂದೆ ಅಟ್ರಾಸಿಟಿ ಕಾಯಿದೆಯಡಿ ದೂರು ದಾಖಲಿಸಲು ಅನುಮತಿ ಇತ್ತು.
ಇನ್ನು ಇದೀಗ ಈ ಕಾಯ್ದೆಗೆ ಮತ್ತಷ್ಟು ಬಲವನ್ನು ಸುಪ್ರೀಂ ಕೋರ್ಟ್ ತುಂಬಿದ್ದು ಅಟ್ರಾಸಿಟಿ ಕಾಯ್ದೆಯಡಿ ಜಾತಿ ನಿಂದನೆ ಮಾಡಿದ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ ತಕ್ಷಣವೇ ಆ ವ್ಯಕ್ತಿಯನ್ನು ಸ್ಥಳದಲ್ಲೇ ಬಂಧಿಸುವ ತಿದ್ದುಪಡಿಯನ್ನು ಮಾಡಿದೆ. ಅಂದರೆ ಯಾರಾದರೂ ಎಸ್ಸಿ ಮತ್ತು ಎಸ್ಟಿ ಜಾತಿಯ ಜನರನ್ನು ನಿಂದಿಸಿದರೆ , ನಿಂದನೆಗೊಳಗಾದ ಜನ ಅಟ್ರಾಸಿಟಿ ಕಾಯ್ದೆಯಡಿ ದೂರು ದಾಖಲಿಸಿದರೆ ನಿಂದನೆ ಮಾಡಿದ ವ್ಯಕ್ತಿಯನ್ನು ಸ್ಥಳದಲ್ಲಿಯೇ ಪೊಲೀಸರು ಬಂಧಿಸಲಿದ್ದಾರೆ.