ಕೆ.ಆರ್.ಪೇಟೆ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಪರ ಪ್ರಚಾರ ಮಾಡಿದ ಡಾ.ಅಶ್ವಥ್ ನಾರಾಯಣ್ ಅವರು, ನಾರಾಯಣಗೌಡ ಕ್ಷೇತ್ರದ ಅಭಿವೃದ್ಧಿ, ಸ್ವಾಭಿಮಾನಕ್ಕಾಗಿ ರಾಜೀನಾಮೆ ಕೊಟ್ಟಿದ್ದಾರೆ. ಜಾತಿ ಮೀರಿ ಬಿಜೆಪಿ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿದರು.
ಹೊಸಕೋಟೆ ಉಸ್ತುವಾರಿಯಿಂದ ಹಿಂದೆ ಸರಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲಿಂದಲೂ ಹಿಂದೆ ಸರಿದಿಲ್ಲ. ಪಕ್ಷ ಜವಾಬ್ದಾರಿ ಕೊಟ್ಟಿದೆ. ಅದನ್ನ ನಿಭಾಯಿಸಲು ಬಂದೆದ್ದೇನೆ. ಯಾವ ಡ್ಯಾಮೇಜ್ ಕಂಟ್ರೋಲ್ ಗೂ ನಾನು ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.