ಜಾರಿ ನಿರ್ದೇಶನಾಲಯ ಬಳಿಕ ಸಿಬಿಐನಿಂದ ಡಿ.ಕೆ. ಶಿವಕುಮಾರ್ ಪ್ರಕರಣದ ತನಿಖೆಗೆ ಕ್ರಮಕೈಗೊಳ್ಳಲಾಗಿದೆ. ಇದಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಅಕ್ರಮ ಹಣ ವರ್ಗಾವಣೆ ಆರೋಪದಡಿ ಡಿ.ಕೆ. ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ ಇದಕ್ಕೆ ರಾಜ್ಯಾದ್ಯಂತ ಡಿಕೆಶಿ ಅವರ ಬೆಂಬಲಿಗರಿಂದ ಬಾರಿ ವಿರೋದ ವೆಕ್ತವಾಗಿತ್ತು. ಸದ್ಯ ಅವರು ತಿಹಾರ್ ಜೈಲಿನಲ್ಲಿದ್ದು ಜಾಮೀನು ಪಡೆಯಲು ಹರಸಾಹಸ ನಡೆಸಿದ್ದಾರೆ.
ಹೀಗಿರುವಾಗಲೇ ಮತ್ತೊಂದು ತನಿಖಾ ಸಂಸ್ಥೆ ಸಿಬಿಐ ಬಲೆಗೆ ಡಿ.ಕೆ. ಶಿವಕುಮಾರ್ ಬೀಳುವ ಸಾಧ್ಯತೆ ಇದೆ. ಜೈಲಿನಲ್ಲಿ ಸಂಕಷ್ಟ ಎದುರಿಸುತ್ತಿರುವ ಡಿ.ಕೆ. ಶಿವಕುಮಾರ್ ಅವರನ್ನು ಜೈಲಿನಲ್ಲಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.