ಬೆಂಗಳೂರು: ಶಾಸಕ ಎಚ್ಡಿ ರೇವಣ್ಣ ವಿರುದ್ಧದ ಕಿಡ್ನಾಪ್ ಕೇಸ್ ಗೆ ಸಂಬಂಧಿಸಿದಂತೆ ಜಾಮೀನು ಸಿಕ್ರು ರೇವಣ್ಣನಿಗೆ ಕಾನೂನು ಕಂಟಕ ತಪ್ಪೊದಿಲ್ಲ. ರೇವಣ್ಣ ವಿರುದ್ಧ ಮತ್ತೆ ಎಸ್‌ಐಟಿ ಅಧಿಕಾರಿಗಳು ಆಕ್ಟಿವ್ ಆಗಿದ್ದು, ಜಾಮೀನು ರದ್ದು ಕೋರಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ.
ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ. ಈಗಾಗಲೇ ತನಿಖಾ ಹಂತದಲ್ಲಿ SIT ಸಾಕಷ್ಟು ಎವಿಡೆನ್ಸ್ ಕಲೆಕ್ಟ್ ಮಾಡಿದೆ. ಮತ್ತೊಮ್ಮೆ ವಶಕ್ಕೆ ಪಡೆದು ಎರಡನೇ ಆರೋಪಿ ಸತೀಶ್ ಬಾಬು ತೀವ್ರ ವಿಚಾರಣೆ ಮಾಡಲಾಗುತ್ತಿದೆ.
ಮಹಿಳೆಯನ್ನು ಕರೆದುಕೊಂಡು ಹೋಗಿರೋ ಮೇಲ್ನೋಟಕ್ಕೆ ಪತ್ತೆಯಾಗಿದೆ. ಈ ವಿಚಾರವಾಗಿ ಒಂದಿಷ್ಟು ಮಾಹಿತಿಯನ್ನು ಸತೀಶ್ ಬಾಬು ಬಾಯಿ ಬಿಟ್ಟಿದ್ದಾನೆ.ರೇವಣ್ಣನ ವಿರುದ್ಧ ಸಾಕ್ಷಿ ಕಲೆ ಹಾಕಲು ಎಸ್‌ಐಟಿ ಅಧಿಕಾರಿಗಳು ಮುಂದಾಗಿದ್ದಾರೆ. ಸಂತ್ರಸ್ತೆ ವಿಡಿಯೋ ಬಗ್ಗೆಯೋ ಸತ್ಯಾಸತ್ಯತೆ
ಪರಿಶೀಲನೆ ಮಾಡಲಿದೆ.
ಎಲ್ಲಾ ಅಂಶಗಳನ್ನು ಮುಂದಿಟ್ಟಕೊಂಡು ಎಸ್‌ಐಟಿ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿದೆ. ಕೆಳ ನ್ಯಾಯಾಲಯ ನೀಡಿದ ಜಾಮೀನು ರದ್ದುಪಡೆಸುವಂತೆ ಮೇಲ್ಮೈವಿ ಸಲ್ಲಿಸುವ ಸಾಧ್ಯತೆ ಇದೆ.
ಜಾಮೀನು ಸಿಕ್ರು ರೇವಣ್ಣನಿಗೆ ಕಾನೂನು ಕಂಟಕ !
Date: